ನಿಡೋಣಿ ಗ್ರಾಮದಲ್ಲಿ ಮಂಗಲಗೊಂಡ ಇಂಚಗೇರಿ ಸಂಪ್ರದಾಯದ ಆಧ್ಯಾತ್ಮ ಸಪ್ತಾಹ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ವಿಜಯಪುರ : ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ನಿಡೋಣಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಇಂಚಗೇರಿ ಮಠದ ಶ್ರೀ ಸಮರ್ಥ ಸದ್ಗುರು ಮಾಧವಾನಂದ ಪ್ರಭೂಜಿಯವರ ಸ್ಮರಣಾರ್ಥ ಹಾಗೂ ಲಕ್ಷ್ಮಣ ಸಿದ್ದಪ್ಪ ತೇರದಾಳ ಗಂಗವ್ವ ಲಕ್ಷ್ಮಣ ತೇರದಾಳ ಇವರ ಪುಣ್ಯಾರಾಧನೆ ಆಧ್ಯಾತ್ಮ ಸಪ್ತಾಹ ಶ್ರೀ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಆದೇಶದಂತೆ ಶ್ರೀ ಸಮರ್ಥ ರಾಮದಾಸ ಮಹಾರಾಜರ ದಾಸಬೋದ ಹಾಗೂ ವೀಣಾ ಪೂಜೆಯೊಂದಿಗೆ ಶನಿವಾರ ಪ್ರಾರಂಭವಾದ ಆಧ್ಯಾತ್ಮ ಸಪ್ತಾಹ ರವಿವಾರ ದಿನಾಂಕ ಶ್ರೀ ಸಮರ್ಥ ರಾಮದಾಸ ಮಹಾರಾಜರ ದಾಸಬೋದದ ವಿಮಲ ಬ್ರಹ್ಮ ನಿರೂಪಣೆ ಹಾಗೂ ಪುಷ್ಪ ವೃಷ್ಠಿಯೊಂದಿಗೆ ಮಂಗಲಗೊಂಡಿತು.
ಈ ಆಧ್ಯಾತ್ಮ ಸಪ್ತಾಹದಲ್ಲಿ ಶಂಕರಪ್ಪ ಮಹಾರಾಜರು, ಭಾಸ್ಕರ ಮಹಾರಾಜರು,ಭೀಮಣ್ಣ ಮಹಾರಾಜರು, ಸಂಗಪ್ಪ ಧರಿಗೌಡ ಮಹಾರಾಜರು, ವಿವೇಕಾನಂದ ಮಹಾರಾಜರು, ಮಹೇಶ ಮಹಾರಾಜರು,ಹಾಗೂ ನಿಡೋಣಿ ಗ್ರಾಮದಲ್ಲಿರುವ ಶ್ರೀಮಠದ ಭಕ್ತರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಶ್ರೀಮಠದ ಸದ್ಭಕ್ತರು ಪಾಲ್ಗೊಂಡಿದ್ದರು.