ಭಾವೈಕ್ಯತೆಯ ತಾಣ ಇಂಚಗೇರಿ ಮಠದಲ್ಲಿ ಮಾಘ ಸಪ್ತಾಹ

•ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ
•ಒಟ್ಟು 2550 ಜನರಿಗೆ ವೈದ್ಯರು ಉಚಿತ ಚಿಕಿತ್ಸೆ, ಉಚಿತ ಔಷಧಿಗಳ ವಿತರಣೆ
•ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಳ್ಳಿ
•ಬೆಳಗಾವಿ ಕೆಎಲ್ಇ ಡಾ.ಪ್ರಭಾಕರ್ ಕೋರೆ ಆಸ್ಪತ್ರೆಯ ಆಡಳಿತ ಆಧಿಕಾರಿ ಡಾ.ಅಲ್ಲಂಪ್ರಭು ಕುಡಚಿ ಹೇಳಿಕೆ
ಹೊರ್ತಿ:'ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು' ಎಂದು ಬೆಳಗಾವಿ ಕೆಎಲ್ಇ ಡಾ.ಪ್ರಭಾಕರ್ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಮತ್ತು ಜವಾಹರ್ ಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಆಡಳಿತ ಆಧಿಕಾರಿ ಡಾ.ಅಲ್ಲಂಪ್ರಭು ಕುಡಚಿ ಹೇಳಿದರು.
ಸಮೀಪದ ಭಾವಕ್ಯತೆಯ ತಾಣ ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ಶ್ರೀ ಸ.ಸ ಭಾವುಸಾಹೇಬ ಮಹಾರಾಜರ, ಗಿರಿಮಲ್ಲೇಶ್ವರ, ಐನಾಥಪ್ರಭು ಮಹಾರಾಜರ, ಗುರುಪುತ್ರೇಶ್ವರ ಮಹಾರಾಜರ ಹಾಗೂ ಜಗನ್ನಾಥ ಮಹಾರಾಜರ ಪುಣ್ಯಸ್ಮರಣೋತ್ಸವ ಆಧ್ಯಾತ್ಮ ಸಪ್ತಾಹ, ಮಾಘ ಸಪ್ತಾಹ ಅಂಗವಾಗಿ ಬೆಳಗಾವಿ ಕೆಎಲ್ಇ ಡಾ.ಪ್ರಭಾಕರ್ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಮತ್ತು ಜವಾಹರ್ ಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಈ ಶಿಬಿರದಲ್ಲಿ ಬೆಳಗಾವಿ ಕೆಎಲ್ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ಖ್ಯಾತ ವೈದ್ಯರು ಉಪಸ್ಥಿತರಿದ್ದು, ಇಕೋ 23, ಇಸಿಜಿ 73, ಡೆಂಟಲ್ 53, ಆಯುರ್ವೇದಿಕ್ ಚಿಕಿತ್ಸೆ113, ಹಿಮೋಗ್ಲೋಬಿನ್ ಮತ್ತು ಶುಗರ್ 423, ಆರ್ ಬಿಎಸ್ 420 ಮಧುಮೇಹ ಶಸ್ತ್ರ ಚಿಕಿತ್ಸೆ, ಕ್ಯಾನ್ಸರ್ ಚಿಕಿತ್ಸೆ, ಎಲುಬು ಮತ್ತು ಕೀಲು ಚಿಕಿತ್ಸೆ, ಹೃದಯ ರೋಗ ಮತ್ತು ಶಸ್ತ್ರ ಚಿಕಿತ್ಸೆ, ಕಿವಿ ಮೂಗು ಮತ್ತು ಗಂಟಲು, ಚರ್ಮರೋಗ, ಸ್ತ್ರೀರೋಗ, ಆಯುರ್ವೇದಿಕ್ ಚಿಕಿತ್ಸೆ ಸೇರಿದಂತೆ ಒಟ್ಟು 2550 ಜನರಿಗೆ ವೈದ್ಯರು ಉಚಿತ ಚಿಕಿತ್ಸೆ ನೀಡಿ ಈ ವೇಳೆ ಉಚಿತ ಔಷಧಿಗಳನ್ನು ವಿತರಿಸಿದರು.
ಈ ವೇಳೆ, ಡಾ.ಅಲ್ಲಂಪ್ರಭು ಕುಡಚಿ, ಡಾ. ಅನಶೆಜ್, ಡಾ. ಶ್ರೀದೀಪ ಹಾಗೂ ಮಲ್ಲಣ್ಣ ಸಾಲಿ, ಕೆ ಎಂ.ಅರವತ್ತಿ, ಸುರೇಶ ಜಂಬಗಿ, ಡಾ.ದೀವಾನಮೋಳ, ಮಹಾದೇವ ಮುರಗೋಡ, ಕೆ ಎಸ್. ಮುರಗೋಡ, ಸುನೀಲ ಮುರಗೋಡ ಇತರರು ಇದ್ದರು.