ವಿದ್ಯಾರ್ಥಿಗಳು ಪ್ರಯೋಗಗಳ ಪ್ರಾತ್ಯಕ್ಷಿಕೆಯಿಂದ ವಿಜ್ಞಾನ ವಿಷಯಗಳ ಬೇಗ ಅರಿಕೆ ಸಾಧ್ಯ

Jan 10, 2025 - 02:11
 0
ವಿದ್ಯಾರ್ಥಿಗಳು ಪ್ರಯೋಗಗಳ ಪ್ರಾತ್ಯಕ್ಷಿಕೆಯಿಂದ ವಿಜ್ಞಾನ ವಿಷಯಗಳ ಬೇಗ ಅರಿಕೆ ಸಾಧ್ಯ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ಹೊರ್ತಿ:' ಎಸ್ಎಸ್‌ಎಲ್ ಸಿ ವಿದ್ಯಾರ್ಥಿಗಳು ಪ್ರಯೋಗಗಳ ಪ್ರಾತ್ಯಕ್ಷಿಕೆಯಿಂದ ವಿಜ್ಞಾನ ವಿಷಯಗಳ ಬೇಗ ಅರಿಕೆ ಕಂಡುಕೊಳ್ಳಲು ಸಾಧ್ಯ' ಎಂದು ವಿಜಯಪೂರದ ವಿಜ್ಞಾನ ವಿಷಯಗಳ ಸಂವನಕಾರ ರಾಘವೇಂದ್ರ ಆರ್‍.ಮೀಸಾಳೆ ಹೇಳಿದರು.

ಸಮೀಪದ ಇಂಚಗೇರಿ ಮಾಧವಾನಂದ ಪ್ರಭೂಜಿ ಪ್ರೌಢ ಶಾಲೆಯಲ್ಲಿ1ದಿನ ವಿಜ್ಞಾನ ವಿಷಯಗಳ ಕುರಿತು ಬುಧವಾರ ಎಸ್ಎಸ್‌ಎಲ್ ಸಿ ವಿದ್ಯಾರ್ಥಿಗಳಿಗೆ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಪ್ರಯೋಗಗಳ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿ ಮಾತನಾಡಿದರು

ವಿಜ್ಞಾನ ವಿಷಯಗಳ ಸೂತ್ರಗಳನ್ನು ಪ್ರಯೋಗಗಳ ಪ್ರಾತ್ಯಕ್ಷಿಕೆಯನ್ನು ಲಕ್ಷ ಕೊಟ್ಟು ಗಮನಿಸಿದರೆ ತಲೆಯಲ್ಲಿ ಉಳಿದು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪದೆದುಕೊಳ್ಳಬಹುದು' ಎಂದು ತಿಳಿಸಿದರು.

ಈ ವೇಳೆ, ಮುಖ್ಯ ಶಿಕ್ಷಕ ಆರ್‍ ಡಿ.ಬಿರಾದಾರ, ವಿಜ್ಞಾನ ವಿಷಯ ಶಿಕ್ಷಕಿ ಸ್ಮೀತಾ ನಾಯಕ, ಶಿಕ್ಷಕರಾದ ಮಹಾದೇವ ಜಂಬಗಿ, ಶಿವಣ್ಣ ಹದಿಮೂರ, ವಿಶ್ವನಾಥ ಸಾತಲಗಾಂವ, ವಾಸುದೇವ ದೊಡಮನಿ ಹಾಗೂ ಸಂಗಪ್ಪ ನಾಯಕ ಮತ್ತು ಎಸ್ಎಸ್‌ಎಲ್ ಸಿ ವಿದ್ಯಾರ್ಥಿಗಳು ಇದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.