ಸಂಭ್ರಮದ ನಾಡ ದೇವಿಯ ಮೂರ್ತಿ ಮೆರವಣಿಗೆ

Oct 6, 2024 - 22:58
 0
ಸಂಭ್ರಮದ ನಾಡ ದೇವಿಯ ಮೂರ್ತಿ ಮೆರವಣಿಗೆ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ಹೊರ್ತಿ:ಸಮೀಪದ ಇಂಚಗೇರಿ ಗ್ರಾಮದಲ್ಲಿ 30ನೇ ವರ್ಷದ ನವರಾತ್ರಿ ನಾಡ ಹಬ್ಬದಂಗವಾಗಿ ಗುರುವಾರ ಸಂಜೆ ಇಂಚಗೇರಿ ನಾಡ ದೇವಿ ಯುವಕ ಸಂಘ ಇವರ ನೇತೃತ್ವದಲ್ಲಿ ತುಳಜಾಪೂರದಿಂದ ತರಲಾದ ಜ್ಯೋತಿಗೆ ಆದ್ದೂರಿಯಿಂದ ಸ್ವಾಗತಿಸಿ, ನಂತರ  ಗ್ರಾಮದ ನಾಡದೇವಿ ಮೂರ್ತಿಯನ್ನು ಅಲಂಕೃತ ಟ್ರಾಕ್ಟರ್‍ ನಲ್ಲಿರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ನಡೆಸಿ ಪ್ರತಿಷ್ಠಾಪಿಸಲಾಯಿತು.
ಈ ವೇಳೆ, ಇಂಚಗೇರಿ ನಾಡ ದೇವಿ ಯುವಕ ಸಂಘದ ಅಧ್ಯಕ್ಷ ಸಿದ್ಧಾರಾಮ ಏಳಗಿ, ನಾಡ ದೇವಿ ಸಂಸ್ಥಾಪಕ ಶಂಕರ ದೇವರ (ಟಾಣಿಕ್), ಸದಸ್ಯರಾದ ಮಲ್ಲಪ್ಪ ಚಟ್ಟರಕಿ, ರೇವಣಸಿದ್ಧ ಸಾತಲಗಾಂವ, ಕಾಶೀನಾಥ ಕನಮಡಿ, ಪ್ರಪ್ಪ ಪರೂತಿ, ಗೌಡಪ್ಪಗೌಡ ಬಿರಾದಾರ, ಅರುಗೌಡ ಬಿರಾದಾರ, ಮಸೂತ ಪರೀಟ, ಶಂಕರ ಏಳಗಿ,  ಮಲ್ಲಿಕಾರ್ಜುನ ದೇವರ ಹಾಗೂ ಆನಂದ ಕಂಬಾರ, ಮಹಾಂತೇಶ ಬೆಳ್ಳೆನವರ, ರಾಚು ಕಳಸದವರ, ಸುಭಾಷ ಓಂಕಾರಶೆಟ್ಟಿ, ಮಲ್ಲಣ್ಣ ಸಕ್ರಿ, ರಾಜು ಏಳಗಿ, ಸಂಜು ಏಳಗಿ, ಅಶೋಕ ಸಾತಲಗಾಂವ, ಜಹಾಂಗೀರ ಬಾಬಾನಗರ, ಕರಬಸಪ್ಪ ಏಳಗಿ, ಮಂಜುನಾಥ ಪರೂತಿ, ಗುರಬಸಪ್ಪ ಗಡಶೆಟ್ಟಿ, ಮಲಕಪ್ಪ ಸಾತಲಗಾಂವ, ಉಮೇಶ ಸಾತಲಗಾಂವ, ರಮೇಶ ಸಾತಲಗಾಂವ, ರಾಜಶೇಖರ ಸಾತಲಗಾಂವ ಮತ್ತು ಗ್ರಾಮದ ದೇವಿಯ ಸಕಲ ಮಂಡಳಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.