ಸರ್ವೋದಯ ಶಾಲೆ ಗ್ರಾಮೀಣ ಭಾಗದಲ್ಲಿ ಉತ್ತಮ ಛಾಪು ಮೂಡಿಸಿದೆ : ನಂದಯ್ಯಗೋಳ

Feb 3, 2025 - 08:09
Feb 3, 2025 - 08:11
 0
ಸರ್ವೋದಯ ಶಾಲೆ ಗ್ರಾಮೀಣ ಭಾಗದಲ್ಲಿ ಉತ್ತಮ ಛಾಪು ಮೂಡಿಸಿದೆ : ನಂದಯ್ಯಗೋಳ
ಹೊರ್ತಿ ಸಮೀಪದ ದೇಗಿನಾಳ ಕ್ರಾಸ್ ನ ವಿಜಯಪುರ -ಸೋಲಾಪೂರ ರಾಷ್ಟ್ರೀಯ ಹೆದ್ದಾರಿ-೫೨ರ ಪಕ್ಕದಲ್ಲಿರುವ ಸರ್ವೋದಯ ಪ್ರಾಥಮಿಕ ಹಾಗೂ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹಾಗೂ ವಿಜ್ಞಾನ ಪ.ಪೂ ಮಹಾವಿದ್ಯಾಲಯ ಹೊರ್ತಿ ಇದರ ೧೪ನೇ ವಾರ್ಷಿಕೋತ್ಸವ 'ಅಪ್ಪ ಅಂದ್ರೆ ಆಕಾಶ' ಎಂಬ ಸಮಾರಂಭವನ್ನು ನಾಗಠಾಣ ಶಾಸಕ ವಿಠಲ ಕಡಕಧೋಂಡ ಅವರ ಧರ್ಮ ಪತ್ನಿ ರೇಣುಕಾದೇವಿ ವಿ.ಕಡಕಧೋಂಡ ಉದ್ಘಾಟಿಸಿದರು. ವಿಕ್ರಮ ನಂದಯ್ಯಗೋಳ, ಸಂಗಮೇಶ್ವರ ಬಬಲೇಶ್ವರ, ಶಾಲಾ ಅಧ್ಯಕ್ಷೆ ಶಾಂತಾಬಾಯಿ ಎಸ್.ಪೂಜಾರಿ, ಗ್ರಾ.ಪಂ ಅಧ್ಯಕ್ಷೆ ಶ್ರೀಶೈಲ ಭೋಸಗಿ, ನಾಗುಗೌಡ ಪಾಟೀಲ, ಶ್ರೀಮಂತ ಇಂಡಿ, ಗುರಣಗೌಡ ಪಾಟೀಲ ಇತರರು ಇದ್ದರು.

ಹೊರ್ತಿ :'ಇಲ್ಲಿನ ಸರ್ವೋದಯ ಶಾಲೆ ಗ್ರಾಮೀಣ ಭಾಗದಲ್ಲಿ ಗುಣ ಮಟ್ಟದ ಶಿಕ್ಷಣ ನೀಡುವಲ್ಲಿ ಉತ್ತಮ ಚಾಪೂ ಮೂಡಿಸಿದೆ' ಎಂದು ಬಾಗಲಕೋಟ ಆಧ್ಯಾತ್ಮಿಕ ಚಿಂತಕ ವಿಕ್ರಮ ನಂದಯ್ಯಗೋಳ ಅಭಿಪ್ರಾಯಪಟ್ಟರು 

ಸಮೀಪದ ದೇಗಿನಾಳ ಕ್ರಾಸ್ ನ ವಿಜಯಪೂರ- ಸೋಲಾಪೂರ ರಾಷ್ಟ್ರೀಯ ಹೆದ್ದಾರಿ-೫೨ರ ಪಕ್ಕದಲ್ಲಿರುವ ಸರ್ವೋದಯ ಪ್ರಾಥಮಿಕ ಹಾಗೂ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹಾಗೂ ವಿಜ್ಞಾನ ಪ.ಪೂ ಮಹಾವಿದ್ಯಾಲಯ ಹೊರ್ತಿ ಇದರ 14ನೇ ವಾರ್ಷಿಕೋತ್ಸವ 'ಅಪ್ಪ ಅಂದ್ರೆ ಆಕಾಶ' ಎಂಬ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

'ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ತಂದೆ-ತಾಯಿ ಹಾಗೂ ಶಿಕ್ಷಕ-ಗುರು ಮತ್ತು ಹಿರಿಯರನ್ನು ಗೌರವಿಸುವಂಥಹ ಸಂಸ್ಕೃತಿ-ಸಂಸ್ಕಾರ ಕೊಡಬೇಕು ಎಂದವರು ಗ್ರಾಮೀಣ ಭಾಗದಲ್ಲಿ ಸುಮಾರು 2200 ವಿದ್ಯಾರ್ಥಿಗಳನ್ನು ಹೊಂದಿ ಇಷ್ಟೋಂದು ಬೆಳವಣಿಗೆಗೆ ಹೊಂದಲು ಇಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಶಿಕ್ಷಕರ ಪಾತ್ರ ಹಿರಿದಾಗಿದೆ ಎಂದು ಹೇಳಿದರು. 

ನಾಗಠಾಣ ಶಾಸಕ ವಿಠಲ ಕಡಕಧೋಂಡ ಅವರ ಧರ್ಮ ಪತ್ನಿ ರೇಣುಕಾದೇವಿ ವಿ.ಕಡಕಧೋಂಡ ಮಾತನಾಡಿ,'ಪಾಲಕರು  ಮಕ್ಕಳಿಗೆ ಯಾವುದೇ ಕಾರಣಕ್ಕೂ ಅದರಲ್ಲೂ ಹೆಣ್ಣು ಮಕ್ಕಳಿಗೆ  ಶಿಕ್ಷಣ ನಿಲ್ಲಿಸದೇ ಅವರಿಗೆ ಉನ್ನತ ಶಿಕ್ಷಣ ಕೊಡಿಸಿ ಸ್ವಾವಲಂಬಿಗಳನ್ನಾಗಿ ಮಾಡಬೇಕು' ಎಂದು ಹೇಳಿದರು. 

ಧಾರವಾಡ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ,'ದೂರದ ಬೆಂಗಳೂರು, ಮೈಸೂರಲ್ಲಿ ಸಿಗುವ ಶಿಕ್ಷಣ ಇಲ್ಲೇ ಹೊರ್ತಿಯ ಸರ್ವೋದಯ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಸಿಗುತ್ತಿದೆ. ಇದು ಶಿಕ್ಷಣದ ಕಾಶಿಯಾಗಿ ಇದೇ ರೀತಿ ಇನ್ನೂ ಉನ್ನತ ಮಟ್ಟಕ್ಕೆ ಸಾಗಲಿ' ಎಂದು ಶುಭ ಹಾರೈಸಿದರು. 

ಶಾಲಾ ಅಧ್ಯಕ್ಷೆ ಶಾಂತಾಬಾಯಿ ಎಸ್.ಪೂಜಾರಿ ಅಧ್ಯಕ್ಷತೆ ವಹಿಸಿದ್ದರು, ಹೊರ್ತಿ ಗ್ರಾ.ಪಂ ಅಧ್ಯಕ್ಷೆ ಜಯಶ್ರೀ ಭೋಸಗಿ, ಚಡಚಣ ಕ್ಷೇತ್ರ ಶಿಕ್ಷಣಧಿಕಾರಿ ಸುಜಾತಾ ಹುನುರ, ಎಸ್ ಎಸ್.ಚೋರಗಿ, ರಮೇಶ ಬಲ್ಲಿದ, ಸಂಗಪ್ಪ ದುರ್ಗದ, ಈರಣ್ಣ ಕಾರ್ಕಲ್, ಸಂತೋಷಗೌಡ ಪಾಟೀಲ, ನಾಗುಗೌಡ ಪಾಟೀಲ, ಶ್ರೀಮಂತ ಇಂಡಿ, ಗುರಣಗೌಡ ಪಾಟೀಲ, ಅಮಸಿದ್ಧ ಲೋಣಿ, ಮಲ್ಲಪ್ಪ ಭೊಸಗಿ,   ಪ್ರಕಾಶಗೌಡ ಪಾಟೀಲ, ರೇವಣಸಿದ್ಧ ಪೂಜಾರಿ, ಆರ್‍ ಜಿ.ಪಾಟೀಲ, ಮಂಜುನಾಥ ಪರೂತಿ, ಎಂ ಎಸ್.ಬಿರಾದಾರ, ಶ್ರೀಶೈಲ ಜೇವೂರ, ಮಂಜು ಪೂಜಾರಿ, ಶ್ರೀಶೈಲ ಬೆನೂರ, ಸಿದ್ದು ರೂಗಿ ಇತರರು ಇದ್ದರು. 

ನಬಿಲಾಲ ಬಾಗವಾನ್  ವರದಿ ವಾಚನ ಓದಿದರು, ಬಸವರಾಜ ಖೋತ ಸ್ವಾಗತಿಸಿದರು, ಸಂಕೇತ ಹೊಸಮನಿ ನಿರೂಪಿಸಿದರು,ರೇವಣಸಿದ್ಧ ಪೂಜಾರಿ ವಂದಿಸಿದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.