ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಪ್ರಾರಂಭ

Oct 1, 2024 - 20:42
 0
ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಪ್ರಾರಂಭ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ಗದಗ : ಇಲ್ಲಿಯ ಸಮೀಪದ ತಿಮ್ಮಾಪೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಕರ್ನಾಟಕ ಸರ್ಕಾರ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಕೊಡ ಮಾಡುವ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಯನ್ನು ಕಾಂಗ್ರೆಸ್ ಪಕ್ಷದ ಯುವ ಮುಖಂಡ ಹಾಗೂ ರೋಣ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಮಿಥುನ ಜಿ ಪಾಟೀಲ್ ಅವರು ಕಡಲೆ ಬೀಜಗಳನ್ನು ರೈತರಿಗೆ ವಿತರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ರೈತರಿಗೆ ಸರ್ಕಾರ ಕೃಷಿ ಇಲಾಖೆಯಿಂದ ಅನೇಕ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ ಅದರಲ್ಲಿ ಪ್ರಮುಖವಾಗಿ ರೈತರಿಗೆ ಬೀತನೆ ಮಾಡಲು ಅನುಕೂಲವಾಗುವಂತೆ ರೀತಿಯಾಯತಿ ದರದಲ್ಲಿ ಕಡಲೆ ಬೀಜ ಜೋಳದ ಬೀಜ ಮತ್ತು ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ವಿತರಣೆ ಮಾಡುತ್ತಿದ್ದು ರೈತರು ಇದರ ಸದುಪಯೋಗ ಪಡೆದುಕೊಂಡು ಬಿತ್ತನೆ ಮಾಡಿ ಉತ್ತಮ ಫಸಲು ಪಡೆದು ಆರ್ಥಿಕವಾಗಿ ಸದೃಢ ರಾಗಬೇಕು.
ಅಧಿಕಾರಿಗಳೊಡನೆ ಉತ್ತಮ ಒಡನಾಟ ಹಾಗೂ ಸಂಬಂಧವನ್ನು ಬೆಳೆಸಿಕೊಂಡು ಇಲಾಖೆಯಿಂದ ಬರುವಂತ ಯೋಜನೆಗಳನ್ನು ತಾವು ಬಳಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗದಗ ಬೆಟಗೇರಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವೀರಣ್ಣ ಗಡಾದ ಮಾತನಾಡಿದ ಹಿಂಗಾರು ಹಂಗಾಮಿನ ಈಗ ತಾನೇ ಪ್ರಾರಂಭವಾಗುತ್ತಿದ್ದು ರೈತರು ತಮ್ಮ ಭೂಮಿಯನ್ನು ಉಳುಮೆ ಮಾಡಿ ಸಂಪೂರ್ಣವಾಗಿ ತೇವಾಂಶ ಗೊಂಡ ನಂತರ ಬೀಜಗಳನ್ನು ಬೀಜೋಪಚಾರ ಮಾಡಿ ಬಿತ್ತನೆ ಕಾರ್ಯ ಕೈಗೊಳ್ಳುವುದರಿಂದ ಹೆಚ್ಚು ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನಮ್ಮಲ್ಲಿ ಬೀಜದ ದಾಸ್ತಾನು ತುಂಬಾ ಇದ್ದು ಯಾವುದೇ ರೈತರು ಆತಂಕ ಪಡೆದೆ ಬೀಜಗಳನ್ನು ಪಡೆಯಬಹುದು. ತಿಮ್ಮಾಪೂರ ಗ್ರಾಮ ಅಟಲ್ ಭೂ ಜಲ ಯೋಜನೆಗೆ ಒಳಪಡುತ್ತದೆ ಅದರಲ್ಲಿ ರೈತರ ಜಮೀನುಗಳಲ್ಲಿ ಬರುವ ಸಣ್ಣ ಸಣ್ಣ ಹಳ್ಳ ಗಳಿಗೆ ಚಿಕ್ಕ ಡ್ಯಾಮ ಕಟ್ಟಿಕೊಳ್ಳಬಹುದು ಹಾಗೂ ಗೋಕಟ್ಟೆ ಕೃಷಿ ಹೊಂಡ ನಿರ್ಮಾಣ ಕಾರ್ಯ ಮಾಡಿಕೊಳ್ಳಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ ಹಾಗೂ ರಾಮಪ್ಪ ಹಚ್ಚಪ್ಪನವರ, ಹುಚ್ಚೀರಪ್ಪ ಜೋಗಿನ ಯಲ್ಲಪ್ಪ ಜೋಗಿನ ಕುಬೇರಗೌಡ ಪಾಟೀಲ್,ವಿರುಪಾಕ್ಷಪ್ಪ ಸೋಂಪೂರ ಮಲ್ಲಿಕಾರ್ಜುನ ಇದ್ಲಿ, ಭೀಮಪ್ಪ ರಾಮಜಿ, ಮಲ್ಲಪ್ಪ ಮಳಗೊಂಡ, ಬಾಳಪ್ಪ ಗಂಗರಾತ್ರಿ ಶರಣಪ್ಪ ಜೋಗಿನ ಕರಿಯಪ್ಪ ಬಾಬರಿ,ಸಂಗಪ್ಪ ಮಳ್ಳಿ,ಸೋಮಪ್ಪ ಜೋಗಿನ, ರಾಮಪ್ಪ ಗುಡ್ಲಾನೂರ, ವೆಂಕಟೇಶ ಸತ್ಯಪ್ಪನವರ ಹಾಗೂ ನೂರಾರು ರೈತರು ಪಾಲ್ಗೊಂಡಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.