ಬಣ್ಣದ ಲೋಕದ ಭರವಸೆಯ ನಟಿ ವರ್ಷಾ

ಅಪರಾಧಕ್ಕೆ ಸವಾಲು ದಿನಪತ್ರಿಕೆ ವಿಜಯಪುರ - ಸಿನಿಮಾ ಕಮಾಲು
ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಎಲ್ಲಿ ನೋಡಿದರು ರೀಲ್ಸ್ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಇದು ಅಚ್ಚರಿ ಎನಿಸಿದರೂ ಸತ್ಯವಾದ ಮಾತು. ಎಷ್ಟೋ ಜನ ಈ ರೀಲ್ಸ್ ದಿಂದ ತಮ್ಮ ಜೀವನ ಹಾಳು ಮಾಡಿಕೊಂಡಿದ್ದಾರೆ. ಎಷ್ಟೋ ಜನ ಈ ರೀಲ್ಸ್ ದಿಂದ ಉದ್ದಾರ ಸಹ ಆಗಿದ್ದಾರೆ.
ಉತ್ತರ ಕರ್ನಾಟಕದವರಿಗೆ ಅವಕಾಶ ಸಿಗುತ್ತಿಲ್ಲ ಎನ್ನುವ ಮಾತಿಗೆ ಈ ಭಾಗದ ಪ್ರತಿಭೆಗಳು ಹೊಸದೊಂದು ವೇದಿಕೆ ಕಂಡುಕೊಂಡಿದ್ದು ಇನ್ಸ್ಟಾಗ್ರಾಮ. ಇಂದು ನಾವು ಹೇಳುತ್ತಿರುವುದು ವಿಶಿಷ್ಟ ಪ್ರತಿಭೆಯ ಬಗ್ಗೆ. ಹೌದು ಈಕೆ ನಟನೆಗೂ ಸೈ, ನೃತ್ಯಕ್ಕೂ ಸೈ, ನಿರೂಪಣೆಗೂ ಸೈ, ಕ್ರೀಡಾ ವಿಭಾಗದಲ್ಲಿಯೂ ಸೈ.
ಈಕೆಯ ಹೆಸರು ವರ್ಷಾ ಡಿಗ್ರಜೆ. ಮೂಲತಃ ಕುಂದಾನಗರಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ದೇಸಾಯಿ ಇಂಗಳಗಿ ಗ್ರಾಮದವರು. ತಂದೆ ಮಹಾಬಲ್ಲ, ತಾಯಿ ಸೂರ್ಯಕಾಂತಿ, ಮೂಲತಃ ಒಕ್ಕಲುತನ ಕುಟುಂಬದಲ್ಲಿ ಬೆಳೆದ ಈಕೆ ಇಂದು ಇಂಜಿನೀಯರ್ ಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಶಿರಗುಪ್ಪಿಯಲ್ಲಿ, ಪದವಿ ಪೂರ್ವ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ, ಇಂಜಿನಿಯರಿಂಗ್ ಓದಿದ್ದು ಮೈಸೂರಿನಲ್ಲಿ. ವಿಶೇಷ ಏನೆಂದರೆ ಎಸ್ ಎಸ್ ಎಲ್ ಸಿಯಲ್ಲಿ ರಾಜ್ಯಕ್ಕೆ ಟಾಪರ್ ಸಹ ಬಂದಿದ್ದರು. ಒಕ್ಕಲುತನ ಕುಟುಂಬದಲ್ಲಿ ಬೆಳೆದರು ತನ್ನ ಪ್ರತೀಭೆಗೆ ಗುರುತಿಸಿಕೊಂಡಿದ್ದಾರೆ.
ನಂತರ ಹೊರ ರಾಜ್ಯವಾದ ಒಡಿಶಾದಲ್ಲಿ ಒಂದು ವರ್ಷಗಳ ಇಂಜಿನೀಯರ್ ಯಾಗಿ ಕಾರ್ಯ ನಿರ್ವಹಿಸುತ್ತಾರೆ. ಓಡಿಶಾದಿಂದ ಬಳ್ಳಾರಿಗೆ ವರ್ಗಾವಣೆ ತೆಗೆದುಕೊಂಡು ಬಂದು ಸದ್ಯ ಬಳ್ಳಾರಿಯಲ್ಲಿ ಅಸಿಸ್ಟೆಂಟ್ ಇಂಜಿನೀಯರ್ ಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವರ್ಷ ವೃತ್ತಿಯಲ್ಲಿ ಇಂಜಿನಿಯರ್ ಆದರೂ ಸಿನಿಮಾ ನಂಟು ಚಿಕ್ಕ ವಯಸ್ಸಿನಿಂದಲೇ ಬಂದಿದೆ. ತಾವು ಚಿಕ್ಕವರಿದ್ದಾಗ ಶಾಲಾ ಕಾರ್ಯಕ್ರಮದಲ್ಲಿ ಏಕಪಾತ್ರಾಭಿನಯ, ನೃತ್ಯ, ಎಲ್ಲವೂ ಮಾಡಿ ಸೈ ಎನಿಸಿಕೊಂಡಿದ್ದಾರೆ. ರಂಗಭೂಮಿ ತಂಡ ಸೇರಿ ಮೂರ್ನಾಲ್ಕು ನಾಟಕದಲ್ಲಿ ಅಭಿನಯಿಸಿದ್ದಾರೆ. ಎಂಟು ವರ್ಷಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಇಲ್ಲಿಯವರೆಗೆ ಐದು ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ.
ಅಂಚೆಗೆ ಹೋಗದ ಪತ್ರ, ಸ್ಟಾರ್, ಇತ್ತಿಚೆಗೆ ಬಿಡುಗಡೆಯಾದ ಸುಂದ್ರ ಚಿತ್ರದಲ್ಲಿ ಅಭಿನಯ ಮಾಡಿ ತಾನು ಒಳ್ಳೆಯ ನಟಿ ಎಂದು ಗುರುತಿಸಿಕೊಂಡಿದ್ದಾರೆ.
ರೀಲ್ಸ್ ವಿಡಿಯೋ ವೈರಲ್ :
ಹೌದು ವರ್ಷಾ ಕೇವಲ ಸಿನಿಮಾದಲ್ಲಿ ಅಷ್ಟೇ ಅಲ್ಲದೆ ರೀಲ್ಸ್ ಸಹ ಮಾಡುತ್ತಾರೆ. ಉತ್ತರಕರ್ನಾಟಕದ ಹುಡ್ಗಿ, ಮಂಗಳೂರು ಹುಡ್ಗ ಎನ್ನುವ ಶಿರ್ಷಿಕೆಯ ರೀಲ್ಸ್ ಗಳು ತುಂಬಾ ವೈರಲ್ ಅಗಿವೆ.
ಇನ್‌ಸ್ಟಾಗ್ರಾಂ, ಯೂಟ್ಯೂಬ್, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳ ಬಳಕೆದಾರರು ವರ್ಷಾ ಅವರನ್ನು ನೋಡಿಲ್ಲದೇ ಇರಲು ಸಾಧ್ಯವಿಲ್ಲ. ಅಷ್ಟು ಫೇಮಸ್ ಆಗಿರುವ ಇವರು ಸಾಮಾಜಿಕ ಜಾಲತಾಣದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ವಿಶೇಷವಾಗಿ ಉತ್ತರ ಕರ್ನಾಟಕದ ಭಾಷೆ ಎಂದರೆ ಅಲ್ಲಿ ತನ್ನದೇಯಾದ ಟ್ರೇಂಡ್ ಇದ್ದೇ ಇರುತ್ತದೆ. ಹೀಗಾಗಿಯೇ ಇವರ ವಿಡಿಯೋಗಳು ತುಂಬಾನೇ ವೈರಲ್ ಆಗ್ತಿದೆ.
ಧಾರವಾಹಿ ಅವಕಾಶಕದ ನಿರೀಕ್ಷೆಯಲ್ಲಿ :
ಈಗಾಗಲೇ ತನ್ನದೇಯಾದ ಅಭಿನಯದ ಮೂಲಕ ಗುರುತಿಸಿಕೊಂಡ ವರ್ಷಾ ಧಾರಾವಾಹಿಗಳ ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ. ಒಳ್ಳೆಯ ಪಾತ್ರ ಸಿಕ್ಕರೆ ಖಂಡಿತವಾಗಿಯೂ ನಾನು ನಿಭಾಯಿಸುತ್ತೇನೆ. ಈಗಾಗಲೇ ಹಲವಾರು ಧಾರಾವಾಹಿಗಳಿಗೆ ಆಡಿಷನ್ ನೀಡಿ ಲುಕ್ ಟೆಸ್ಟ್ ಕೂಡ ಮಾಡಿದ್ದಾರೆ. ಆದರೆ ಹೊಸ ಹೊಸ ಪಾತ್ರಗಳಲ್ಲಿ ಅಭಿನಯಿಸಬೇಕು ಎನ್ನುವುದು ನನ್ನ ಮಹದಾಸೆ. ಹೀಗಾಗಿ ನಾನು ಧಾರಾವಾಹಿಗಳಲ್ಲಿ ಅಭಿನಯಿಸಲು ಕಾಯುತ್ತಿದ್ದೇನೆ.
ನಮ್ಮ ಉತ್ತರ ಕರ್ನಾಟಕದ ಭರವಸೆಯ ನಟಿ ವರ್ಷಾ ಡಿಗ್ರಜೆ ಅವರಿಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ಅವಕಾಶಗಳು ಹುಡುಕಿಕೊಂಡು ಬರಲಿ, ರಾಜ್ಯ ರಾಷ್ಟ್ರ ಮಟ್ಟದಲ್ಲಿ ನಿಮ್ಮ ಚಿತ್ರಗಳು ಯಶಸ್ವಿಯಾಗಲಿ ಎಂದು ನಮ್ಮ ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ ಬಳಗದಿಂದ ಶುಭ ಹಾರೈಕೆಗಳು.
-ವಿಶ್ವಪ್ರಕಾಶ ಟಿ ಮಲಗೊಂಡ