ಗದಗನಲ್ಲಿ ಮಾವಳ್ಳಿ ಬಿರಿಯಾನಿ ಉದ್ಘಾಟಿಸಿದ ನಟಿ ತನಿಷಾ

Jan 29, 2025 - 01:22
Jan 29, 2025 - 11:48
 0
ಗದಗನಲ್ಲಿ ಮಾವಳ್ಳಿ ಬಿರಿಯಾನಿ ಉದ್ಘಾಟಿಸಿದ ನಟಿ ತನಿಷಾ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ವರದಿ - ವಿಶ್ವಪ್ರಕಾಶ ಟಿ ಮಲಗೊಂಡ 

ಬೆಂಗಳೂರು/ ಗದಗ : ಸ್ಯಾಂಡಲ್ ವುಡ್ ಸ್ಟಾರ್ ಗಳ ಅಚ್ಚುಮೆಚ್ಚಿನ ಮಾವಳ್ಳಿ ಬಿರಿಯಾನಿ ಇದೀಗ ಗದಗ ನಗರದಲ್ಲಿ ತನ್ನ ಹೊಸ ಹೊಟೇಲ್ ಶುರುವಾಗಿದೆ.

ಮಂಗಳವಾರ ಕನ್ನಡ ಚಲನಚಿತ್ರ ನಟಿ, ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಹಾಗೂ ಡಾಲಿ ಧನಂಜಯ ಅವರು ಉದ್ಘಾಟಿಸಿದರು.

ಗದಗ ನಗರದ ಮುಳಗುಂದ ರೋಡ ದೋಬಿಗಾಟ, ಇಂಡಿಯನ ಪೆಟ್ರೋಲ್ ಬಂಕ್ ಹತ್ತಿರದಲ್ಲಿ ಅದ್ದೂರಿಯಾಗಿ ಪ್ರಾರಂಭಗೊಂಡಿತು.

ಈ ವೇಳೆ ಮಾತನಾಡಿದ ನಟಿ ತನಿಷಾ ಕುಪ್ಪಂಡ ನೂತನವಾಗಿ ಶುರುವಾಗಿರುವ ಮಾವಳ್ಳಿ ಬಿರಿಯಾನಿ ಯಶಸ್ವಿಯಾಗಿ ಬೆಳೆಯಲಿ, ರಾಜ್ಯಾದ್ಯಂತ ತನ್ನ ಶಾಖೆಗಳನ್ನು ಪ್ರಾರಂಭಗೊಂಡು ಹೊರ ಹೊಮ್ಮಲಿ. ಬಬ್ಲೂಗೌಡ ಅವರ ಕಾರ್ಯ ಶ್ಲಾಘನೀಯವಾಗಿದೆ. ಇನ್ನು ಎತ್ತರಕ್ಕೆ ಈ ಸಂಸ್ಥೆಯಲ್ಲಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಕ್ಕೆ ಮಾವಳ್ಳಿ ಬಿರಿಯಾನಿ ಹೋಟೆಲ್ ಸಮೂಹದ ಎಲ್ಲರಿಗೂ ಧನ್ಯವಾದಗಳು ಹಾಗೆ ನಿಮ್ಮ ಉದ್ಯಮಕ್ಕೆ ಶುಭವಾಗಲಿ ಎಂದರು.

ನಟಿ ತನಿಷಾ ಕುಪ್ಪಂಡ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಹರಸಾಹಸ ಪಟ್ಟರು. ಪೊಲೀಸ್ ಬಿಗಿ ಬಂದೋಬಸ್ತ್ ಇದ್ದರೂ ಸಹ ಅಭಿಮಾನಿಗಳು ಖ್ಯಾರೆ ಎನ್ನದೆ ತನ್ನ ನೆಚ್ಚಿನ ನಟಿಯ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದರು.

ಈ ಸಂದರ್ಭದಲ್ಲಿ ಮಾವಳ್ಳಿ ಬಿರಿಯಾನಿ ಸಂಸ್ಥಾಪಕ ನಿರ್ದೇಶಕ ಬಬ್ಲೂಗೌಡ, ಶಾಸಕ ಡಾ.ಚಂದ್ರು ಲಮಾಣಿ, ಗದಗ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಗೌಡ ಎಚ್ ಪಾಟೀಲ, ಡಾಲಿ ಧನಂಜಯ ಅವರ ಆಪ್ತ ಸಹಾಯಕ ಡಾಲಿ ರುದ್ರ, ಬ್ರೈಡಲ್ ಹೌಸ್ ಮೇಕಪ್ ಸ್ಟೂಡಿಯೋ ಮಾಲೀಕರು, ನಟಿ ಕನಕಗೌಡ, ಸೆಲಿಬ್ರಿಟಿ ಆಂಕರ್ ಪ್ರತಿಭಾ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.