ಹರ್ಷಿತಾ ಭರತ ನಾಟ್ಯದಲ್ಲಿ ವಿದ್ವತ್

Jan 6, 2025 - 16:53
 0
ಹರ್ಷಿತಾ  ಭರತ ನಾಟ್ಯದಲ್ಲಿ ವಿದ್ವತ್

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ನವದೆಹಲಿ ; ಕುಮಾರಿ ಹರ್ಷಿತಾ ಕುಶಾಲಪ್ಪ ಅವರು ಭರತ ನಾಟ್ಯ ಶಾಸ್ತ್ರೀಯ ನೃತ್ಯದ ವಿದ್ವತ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಪ್ರಸ್ತುತಇವರು ರಾಷ್ಟ್ರದ ರಾಜಧಾನಿ ಕ್ಷೇತ್ರವಾದ ನೋಯ್ಡಾದ ಪ್ರತಿಷ್ಟಿತ ಶಾಲೆಯೊಂದರಲ್ಲಿ  ನೃತ್ಯ ಗುರುಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
 ದೆಹಲಿಯಲ್ಲಿ‌ ನಡೆಯುವ ಅನೇಕ ಕಾರ್ಯಕ್ರಮಗಳಲ್ಲಿ ಇವರು ಪ್ರಸ್ತುತಿ ನೀಡಿ ಭೇಷ್‌ ಎನಿಸಿಕೊಂಡಿದ್ದಾರೆ.
ಇಲ್ಲಿನ ಅನೇಕ ಕನ್ನಡಿಗರಿಗೆ ನೃತ್ಯ ಸಂಯೋಜನೆ ಮಾಡಿ ಕನ್ನಡಿಗರ ಮನೆಮಾತಾಗಿದ್ದಾರೆ.

ವಿದ್ವಾನ ದೀಪಕ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ ಪುತ್ತೂರಿನ ಶ್ರೀ ಮೂಕಾಂಬಿಕಾ ಸಾಂಸ್ಕೃತಿಕ ಅಕಾಡೆಮಿಯಿಂದ 2023-24ನೇ ಸಾಲಿನಲ್ಲಿ ನಡೆದ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ನಡೆಸಿದ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ.

ಇವರು ತಮ್ಮ ಹತ್ತನೇ ತರಗತಿಯಿಂದಲೇ  ಭರತ ನಾಟ್ಯದಲ್ಲಿ ಆಸಕ್ತಿ ಹೊಂದಿ, ಆ ದಿಸೆಯಲ್ಲಿ ಸತತ ಅಧ್ಯಯನದೊಂದಿಗೆ ಆಸಕ್ತಿಯುತವಾಗಿ ಭರತ ನಾಟ್ಯವನ್ನು ತಮ್ಮ ಉಸಿರಾಗಿಸಿಕೊಂಡು ಸತತ‌ ಪರಿಶ್ರಮದಿಂದ ವಿದ್ವತ್ ಪರೀಕ್ಷೆ ಪಾಸು ಮಾಡಿರುವ ಹರ್ಷಿತ ಕುಶಾಲಪ್ಪ ಅವರ 
ಭವ್ಯ  ಭವಿತವ್ಯ ಉಜ್ವಲವಾಗಲೆಂದು ಸ್ವರಾಂಜಲಿ,ಗಣೇಶ ಮಿತ್ರ ಮಂಡಳಿ ಹಾಗೂ ಡೆಲ್ಲಿ ಫ್ರೆಂಡ್ಸ ಗೆಳೆಯರ ಬಳಗದ ಸದಸ್ಯರು ಶುಭ ಹಾರೈಸಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.