ಜ. 15 ರಂದು ಸಂಸದ ತೇಜಸ್ವಿ ಸೂರ್ಯ ಅವರಿಂದ ಅನಾವರಣವಾಗಲಿದೆ ವಿಭಿನ್ನ ಕಥಾ ಹಂದರ ಹೊಂದಿರುವ "ಹೈನಾ" ಚಿತ್ರದ ಟ್ರೇಲರ್
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಅಮೃತ ಫಿಲಂ ಸೆಂಟರ್ ಲಾಂಛನದಲ್ಲಿ ವೆಂಕಟ್ ಭಾರದ್ವಾಜ್ ಹಾಗೂ ರಾಜ್ ಕಮಲ್ ನಿರ್ಮಿಸಿರುವ ಹಾಗೂ ವೆಂಕಟ್ ಭಾರದ್ವಾಜ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ವಿಭಿನ್ನ ಕಥಾಹಂದರ ಹೊಂದಿರುವ "ಹೈನಾ" ಚಿತ್ರದ ಟ್ರೇಲರ್ ಜನವರಿ 15ರಂದು ಬಿಡುಗಡೆಯಾಗಲಿದೆ. ತಮ್ಮ ಅಮೋಘ ಕಾರ್ಯವೈಖರಿ ಹಾಗೂ ಅದ್ಭುತ ವಾಕ್ಚಾತುರ್ಯ ದಿಂದ ದೇಶದ ಜನರ ಗಮನ ಸೆಳೆದಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಯುವ ಸಂಸದ ತೇಜಸ್ವಿ ಸೂರ್ಯ "ಹೈನಾ" ಚಿತ್ರದ ಟ್ರೇಲರ್ ಅನಾವರಣ ಮಾಡಲಿದ್ದಾರೆ.
ನಮ್ಮ "ಹೈನಾ" ಚಿತ್ರದ ಬಗ್ಗೆ ತಿಳಿದುಕೊಂಡ ಸಂಸದ ತೇಜಸ್ವಿ ಸೂರ್ಯ ಅವರು ಜನವರಿ 15 ರಂದು ಟ್ರೇಲರ್ ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದಾರೆ. ನಮ್ಮ."ಹೈನಾ" ಚಿತ್ರ ದೇಶಭಕ್ತಿ ಕುರಿತಾದ ಕಥಾಹಂದರ ಹೊಂದಿರುವ ಚಿತ್ರ. ಗುಪ್ತಾಚಾರ ಇಲಾಖೆ, ಪೊಲೀಸ್ ಇಲಾಖೆ ಹಾಗೂ ರಕ್ಷಣಾ ಇಲಾಖೆಯ ಕಾರ್ಯವೈಖರಿಯ ಬಗ್ಗೆ ನಮ್ಮ ಚಿತ್ರದಲ್ಲಿ ತೋರಿಸಲಾಗಿದೆ. ದೇಶಭಕ್ತಿಯ ಕುರಿತಾದ ಚಿತ್ರಕ್ಕೆ ಸದಾ ನನ್ನ ಬೆಂಬಲ ಇರುತ್ತದೆ. ಹಾಗಾಗಿ ನಾನು ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡುತ್ತೇನೆ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ. ಸರಳ, ಸಜ್ಜನಿಕೆಗೆ ಹೆಸರಾಗಿರುವ ಸಹೃದಯಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ನಮ್ಮ ತಂಡದ ಪರವಾಗಿ ಧನ್ಯವಾದ ಎನ್ನುತ್ತಾರೆ ನಿರ್ದೇಶಕ ವೆಂಕಟ್ ಭಾರದ್ವಾಜ್.
ಇತ್ತೀಚೆಗಷ್ಟೇ ಹೈನಾ ಚಿತ್ರದ ಲಿರಿಕಲ್ ವೀಡಿಯೊ ಜನರ ಮನ ಗೆದ್ದಿದೆ. ಟ್ರೇಲರ್ ಹಾಗೂ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ.
ಹರ್ಷ ಅರ್ಜುನ್, ದಿಗಂತ ಸ್ವರೂಪ, ರಾಜ್ ಕಮಲ್, ಲಕ್ಷ್ಮಣ ಶಿವಶಂಕರ್, ನಂದಕಿಶೋರ್ ಮತ್ತು ಲಾರೆನ್ಸ್ ಪ್ರೀತಂ ಅವರಂತಹ ಪ್ರತಿಭಾನ್ವಿತ ನಟರ ತಾರಾಬಳಗವಿರುವ 'ಹೈನಾ' ಚಿತ್ರಕ್ಕೆ ಲಕ್ಷ್ಮಣ್ ಶಿವಶಂಕರ್ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಲವ್ ಪ್ರಾಣ್ ಮೆಹ್ತಾ ಸಂಗೀತ ನಿರ್ದೇಶನ, ನಿಶಾಂತ್ ನಾನಿ ಛಾಯಾಗ್ರಹಣ ಹಾಗೂ ಶಮಿಕ್ ವಿ ಭಾರದ್ವಾಜ್ ಸಂಕಲನವಿರುವ "ಹೈನಾ" ಚಿತ್ರ ಈ ತಿಂಗಳ ಕೊನೆಗೆ ನಿಮ್ಮ ಮುಂದೆ ಬರಲಿದೆ.