ಸಮಾಜದಲ್ಲಿ ಧನಶ್ರೀ, ಚೇತನ ಯೋಜನೆಗಳಿಂದ ಹೆಚ್ಚಿನ ಅನುಕೂಲ : ಜಿ.ಪದ್ಮಾವತಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಬೆಂಗಳೂರು : ಸಮಾಜದಲ್ಲಿ ಧನಶ್ರೀ, ಚೇತನ ಯೋಜನೆಗಳಿಂದ ಹೆಚ್ಚಿನ ಅನುಕೂಲವಾಗಿದೆ. ಮಹಿಳೆಯರು ನಿಗಮದ ಯೋಜನೆಗಳನ್ನು ಪಡೆದು ಮುಖ್ಯವಾಹಿನಿಗೆ ಬರಬೇಕು ಎಂದು ರ‍್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಜಿ.ಪದ್ಮಾವತಿರವರು ತಿಳಿಸಿದರು.
ಇಂದು ಮಹಿಳಾ ಅಭಿವೃದ್ದಿ ನಿಗಮದ ಅಧಿಕಾರಿಗಳು ಮತ್ತು ರಾಜ್ಯದಲ್ಲಿನ ಸಿ.ಬಿ.ಓ ಸಂಸ್ಥೆಗಳೊಂದಿಗೆ ಧನಶ್ರೀ ಮತ್ತು ಚೇತನ ಯೋಜನೆಗಳ ಬಗ್ಗೆ ಸಭೆ ನಡೆಸಿ ಮಾತನಾಡಿದ ಅವರು, ಮಹಿಳೆಯರು ಸ್ವಾವಲಂಭಿಗಳಾಗಿ ತಮ್ಮ ಜೀವನಕ್ಕೆ ಬೇಕಾಗಿರುವ ಆದಾಯವನ್ನು ತಾವೇ ಸಂಪಾದಿಸಿ ಸ್ವತಂತ್ರವಾಗಿ ಜೀವನ ನಡೆಸಲು ನಿಗಮದ ಧನಶ್ರೀ ಮತ್ತು ಚೇತನ ಯೋಜನೆ ತುಂಬಾ ಸಹಕಾರಿಯಾಗಿದೆ ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಧನಶ್ರೀ ಮತ್ತು ಚೇತನ ಯೋಜನೆಗೆ ರ‍್ಕಾರದಿಂದ ೨೦೨೩-೨೪ನೇ ಸಾಲಿನಲ್ಲಿ ತಲಾ ೦೨ ಕೋಟಿ ಅನುದಾನ ಬಂದಿದ್ದು, ಇದನ್ನು ರಾಜ್ಯದ ನಿಜವಾದ ಫಲಾನುಭವಿಗಳಿಗೆ ರೂ. ೩೦೦೦೦/- ರಂತೆ ಸಹಾಯಧನ ಮಂಜೂರು ಮಾಡಲಾಗಿರುತ್ತದೆ. ಸಹಾಯಧನ ಪಡೆದ ಫಲಾನುಭವಿಗಳು ಸಣ್ಣಪುಟ್ಟ ವ್ಯಾಪಾರ ವಹಿವಾಟುಗಳನ್ನು ಮಾಡಿಕೊಂಡು ಜೀವನ ನಡೆಸುವುದರ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ತಿಳಿಸಿದರು.
ರ‍್ಕಾರದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ ಇವುಗಳು ಮಹಿಳೆಯರಿಗೆ ಹೆಚ್ಚಿನ ಸಹಾಯಕಾರಿಯಾಗಿರುವುದರಿಂದ ಈ ಯೋಜನೆಗಳ ಬಗ್ಗೆ ಮಹಿಳೆಯರಿಗೆ ಅರಿವು ಮೂಡಿಸಿ ಎಲ್ಲ ಮಹಿಳೆಯರು ಅನುಕೂಲಪಡೆದುಕೊಳ್ಳುವಂತೆ ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಕರ‍್ಯ ನರ‍್ವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ನಿಗಮದ ಪ್ರಧಾನ ವ್ಯವಸ್ಥಾಪಕರಾದ ಶ್ರೀಮತಿ ಅಕ್ಕಮಹಾದೇವಿ ಸೇರಿದಂತೆ ಸಹಾಯಕ ಪ್ರಧಾನ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು ಹಾಗೂ ರಾಜ್ಯದ ಸುಮಾರು ೩೫ಕ್ಕೂ ಹೆಚ್ಚು ಸಿ.ಬಿ.ಓ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.