ಗೋಲಗೇರಿಯಲ್ಲಿ ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಬ್ರಹ್ಮದೇವನಮಡು : ದೇವರ ದೇವರಹಿಪ್ಪರಗಿ ತಾಲ್ಲೂಕಿನ ತಿಳಗೂಳ ಗ್ರಾಮದ ರೈತ ಶಂಕ್ರೆಪ್ಪ ಶಿವಲಿಂಗಪ್ಪ ಚೀಲದ (೪೫) ಇವರು ಸಿಂದಗಿ ತಾಲ್ಲೂಕಿನ ಗೋಲಗೇರಿ ಗ್ರಾಮದಲ್ಲಿ ಹಾಲಿ ವಾಸವಿದ್ದ ಮನೆಯಲ್ಲಿ ಸಾಲಬಾದೆ ತಾಳಲಾರದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ.
ಶಂಕ್ರೆಪ್ಪ ಶಿವಲಿಂಗಪ್ಪ ಚೀಲದ (೪೫) ಮೃತಪಟ್ಟವರು. ಅವರು ತಿಳಗೂಳ ಪಿ.ಕೆ.ಪಿ.ಎಸ್. ಬ್ಯಾಂಕಿನಲ್ಲಿ ೬೫ ಸಾವಿರ ರೂಪಾಯಿ ಸಾಲ ಮತ್ತು ಊರಿನ ಮನೆಯವರಿಂದ ೩ ಲಕ್ಷ ರೂಪಾಯಿ ಸಾಲ ಸೇರಿದಂತೆ ಒಟ್ಟು ೩.೬೫ ಸಾವಿರ ರೂ ಸಾಲ ತೆಗೆದುಕೊಂಡಿದ್ದರು. ಈ ವರ್ಷ ತೊಗರಿ ಸರಿಯಾಗಿ ಬೆಳೆಯದ ಕಾರಣ ಸಾಲ ಮುಟ್ಟಿಸುವುದು ಹೇಗೆ ಎಂಬ ಚಿಂತೆಯಿAದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪತ್ನಿ ನಿರ್ಮಲ ಶಂಕ್ರೆಪ್ಪ ಚೀಲದ ನೀಡಿದ ದೂರಿನ ಅನ್ವಯ ಕಲಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.