ಮೆಣಸಿನಕಾಯಿ ಬೆಲೆ ಕುಸಿತ ಆತಂಕದಲ್ಲಿ ರೈತರು

Jan 7, 2025 - 15:05
 0
ಮೆಣಸಿನಕಾಯಿ ಬೆಲೆ ಕುಸಿತ ಆತಂಕದಲ್ಲಿ ರೈತರು
ಮೆಣಸಿನಕಾಯಿ ಬೆಲೆ ಕುಸಿತ ಆತಂಕದಲ್ಲಿ ರೈತರು

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ಗದಗ : ಜಿಲ್ಲೆಯಲ್ಲಿ ಮೊದಮೊದಲು ಮುಂಗಾರು ಮಳೆ ಕೊರತೆಯಿಂದ ಮೆಣಸಿನಕಾಯಿ ಬೆಳೆಯುವ ಕುಂಠಿತಗೊಂಡಿದ್ದು .

ಈ ಬೆಳೆಯು ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಮಧ್ಯ ಬರುವುದರಿಂದ ಹಿಂಗಾರು ಹಂಗಾಮಿನಲ್ಲಿ ಸುರಿದ ಅಕಾಲಿಕ ಬಾರಿ ಮಳೆಗೆ ಮೆಣಸಿನಕಾಯಿ ಬೆಳೆ ಅತಿಯಾದ ತೇವಾಂಶದಿಂದ ಬೆಳೆಯು ರೋಗಕ್ಕೆ ತುತ್ತಾಗಿ ಕೊಳೆತು ಹೋಗಿದ್ದು. ಅಳಿದುಳಿದ ಬೆಳಗೆ ಸದ್ಯ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಬೆಳೆಗೆ ಉತ್ತಮ ಬೆಲೆ ಸಿಗದೇ ರೈತರು ಆತಂಕದಲ್ಲಿದ್ದಾರೆ.

ಗದಗ ತಾಲ್ಲೂಕಿನ ಕೆಲವೊಂದಿಷ್ಟು ಗ್ರಾಮಗಳಲ್ಲಿ ಮೆಣಸಿನಕಾಯಿ ಬೆಳೆಯುವುದರಲ್ಲಿ ತಾಲ್ಲೂಕಿಗೆ ಮುಂಚೂಣಿಯಲ್ಲಿವೆ ಅದರಲ್ಲೂ ತಿಮ್ಮಾಪೂರ,ಹರ್ಲಾಪೂರ, ಲಕ್ಕುಂಡಿ, ಕೋಟುಉಮಚಗಿ,ಹಾತಲಗೇರಿ ಕಣಗಿನಹಾಳ ಗ್ರಾಮಗಳಲ್ಲಿ ಅತಿ ಹೆಚ್ಚು ಎರೆಭೂಮಿಯನ್ನು ಹೊಂದಿರುವುದರಿಂದ ಇಲ್ಲಿ ಅಧಿಕ ಪ್ರಮಾಣದಲ್ಲಿ ಮೆಣಸಿನಕಾಯಿ ಬೆಳೆಯನ್ನು ಬೆಳೆದಿದ್ದಾರೆ.

ಅಳಿದುಳಿದಿರುವ ಮೆಣಸಿನಕಾಯಿಯನ್ನು ಪ್ರತಿಷ್ಟೆತ ಮಾರುಕಟ್ಟೆಯಾದ ಬ್ಯಾಡಗಿ, ಹುಬ್ಬಳ್ಳಿ ಗದಗ ಮಾರುಕಟ್ಟೆಯಲ್ಲಿ ತೆಗೆದು ಕೊಂಡು ಹೋದಾಗ ಕ್ವಿಂಟಲಗೆ 20 ಸಾವಿರ ರೂಪಾ ಯಿಂದ 25 ಸಾವಿರ ರೂಪಾಯಿ ಮಾತ್ರ ಇದೆ.

ಕಳೆದ ವರ್ಷ ಬಂಗಾರದ ಬೆಲೆಯನ್ನು ಮೀರಿಸಿ 75 ಸಾವಿರ ರೂಪಾಯಿಗೆ ಕ್ವಿಂಟಲಗೆ ಮಾರಾಟವಾಗಿತ್ತು.

ಈ ವರ್ಷ ಉತ್ತಮ ಬೆಲೆ ಬರಲಿ ಎಂದು ಅಂಗಲಾಚುವ ಸ್ಥಿತಿಗೆ ರೈತರು ತಲುಪಿದ್ದಾರೆ.

ಅತ್ಯಂತ ಜನಪ್ರಿಯವಾದ ಆಹಾರ ಪದಾರ್ಥಗಳಲ್ಲಿ ಬಳಸುವ ಮೆಣಸಿನಕಾಯಿ ಬೆಳೆಗೆ ಬೆಲೆಯಿಲ್ಲದೆ ಕಂಗಾಲಾಗಿದ್ದಾನೆ .

ಕರ್ನಾಟಕ ರಾಜ್ಯದ ಗದಗ ಜಿಲ್ಲೆಯಲ್ಲಿ ಅತ್ಯಂತ ಮಹತ್ವ ಹೊಂದಿರುವ ಮೆಣಸಿನಕಾಯಿ ಬೆಳೆಗಳಿಗೆ ಈ ವರ್ಷದ ತೀವ್ರ ನಷ್ಟ ಉಂಟಾಗಿ ಸಾಲ ಸೊಲ ಮಾಡಿ ಬಿತ್ತನೆ ಮಾಡಿದ ರೈತನಿಗೆ ಮೊದಮೊದಲು ಮಳೆ ಬಾರದೆ ಹಿನ್ನೆಲೆ ಮೆಣಸಿನಕಾಯಿ ಬೆಳೆ ಸಂಪೂರ್ಣ ಕುಸಿತ ಕಂಡು ಉತ್ತಮ ಬೆಲೆಯು ಸಹ ಇಲ್ಲ ಇತ್ತ ಬೆಳೆಯು ಕೈ ಕೊಟ್ಟು ನಷ್ಟ ಅನುಭವಿಸುವಂತಾಗಿದೆ .

ಮಾರುಕಟ್ಟೆಯಲ್ಲಿ ಮೆಣಸಿನಕಾಯಿಗೆ ಹೆಚ್ಚಿದ ಬೇಡಿಕೆ :

ಕಳೆದ ವರ್ಷ ರಾಜ್ಯ ಸೇರಿದಂತೆ ಹಲವು ತಾಲ್ಲೂಕುಗಳಲ್ಲಿ ವರ್ಣನೆ ಆರ್ಭಟಕ್ಕೆ ಫಸಲಿಗೆ ಬಂದಂತಹ ಬೆಳೆ ಮಳೆಯಿಂದ ಹಾನಿಯಾಗಿ ರೈತರನ್ನು ನಷ್ಟಕ್ಕೆ ಸಿಲ್ಕಿದ್ದನು ಆದರೆ ಈ ವರ್ಷ ಬೆಳೆಯು ಇಲ್ಲಾ ಇತ್ತಾ ಬೆಲೆಯು ಇಲ್ಲದಂತಾಗಿದೆ.

ರೈತ ಹಿತ ಕಾಪಾಡಿ :

ಕಳೆದ ವರ್ಷ ಹೆಚ್ಚಿನ ಮಳೆಯಾಗಿ ಬೆಳೆಗಳು ಹಾನಿಗೆ ಒಳಗಾಗಿತ್ತು,ಈ ವರ್ಷವು ಬೆಳೆಗಳು ರೋಗಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಮುಂಗಾರು ಹಂಗಾಮಿನ ಈ ಬಾರಿ ಸಾಕಷ್ಟು ನಷ್ಟವನ್ನು ಅನುಭವಿಸುತ್ತಿದ್ದಾನೆ .

ಜಿಲ್ಲಾದ್ಯಂತ ಮುಂಗಾರು ಹಂಗಾಮಿನ ಶೇಕಡ 80 ರಿಂದ 85 ರಷ್ಟು ಮಳೆ ಬಂದು ಈರುಳ್ಳಿ, ಮೆಣಸಿನಕಾಯಿ, ಹೆಸರು, ಬಿಟಿ ಹತ್ತಿ, ಸೂರ್ಯ ಕಾಂತಿ, ಮೆಕ್ಕೆಜೋಳ ಬೆಳೆಗಳು ಹಾಳಾಗಿದ್ದು.

ಜಿಲ್ಲಾಡಳಿತ ಈ ಹಿಂದೆ ತೋಟಗಾರಿಕಾ ಇಲಾಖೆ, ಹಾಗೂ ಕಂದಾಯ ಇಲಾಖೆಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಬೆಳೆ ಹಾನಿ ಸರ್ವೆ ಮಾಡಿಸಿಕೊಂಡು ವರದಿಯನ್ನು ಪಡೆದುಕೊಂಡರು ಸಹ ರೈತರಿಗೆ ಯಾವುದೇ ಬೆಳೆ ಹಾನಿ ಪರಿಹಾರವಾಗಿ ಯಾವ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ವಣೆಯಾಗಿಲ್ಲ , ಹಾಗೂ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಬೆಳೆ ವಿಮೆ ತುಂಬಿದ ರೈತರಿಗೆ ಮಧ್ಯಂತರ ಪರಿಹಾರ ಕೂಡ ಬಂದಿಲ್ಲ.

ಜಿಲ್ಲಾಧಿಕಾರಿಗಳು ಬೆಳೆ ನಷ್ಟ ವರದಿಯನ್ನು ಪಡೆದುಕೊಂಡು ಕೈ ಕಟ್ಟಿ ಕುಳಿತುಕೊಂಡಿದ್ದಾರೆ .

ಬೇಗನೆ ಪೂರ್ಣ ಪ್ರಮಾಣದ ಪರಿಹಾರದ ಹಣವನ್ನು ಹಾಗೂ ಬೆಳೆ ವಿಮೆ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮಾವಣೆ ಮಾಡಬೇಕೆಂದು ಎಂದು ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ ಆಗ್ರಹಿಸಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.