ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆಯ ಸಂಪಾದಕ ಟಿ ಕೆ ಮಲಗೊಂಡರ ಪರಿಚಯ

"ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಸಂಪಾದಕ ಟಿ ಕೆ ಮಲಗೊಂಡರ ಪರಿಚಯ
ಟಿ.ಕೆ ಮಲಗೊಂಡ ಅವರು 1970ರ ಅಗಸ್ಟ್ 8ರಂದು ಬಸವನಾಡು ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ಗುಂದಗಿಯಲ್ಲಿ ಜನಿಸಿದರು. ಆರಂಭಿಕ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲೆ ಮುಗಿಸಿದ ಅವರು ಪ್ರೌಢ ಶಿಕ್ಷಣವನ್ನು ಆಲಮೇಲದ ಎ.ಕೆ.ನಂದಿ ಹೈಸ್ಕೂಲ್‌ನಲ್ಲಿ ಮುಗಿಸಿ, ಪದವಿ ಶಿಕ್ಷಣವನ್ನು ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತ ಕಲಾ ಮಹಾವಿದ್ಯಾಲಯದಲ್ಲಿ ಎ.ಎಮ್. "ಆರ್ಟ ಮಾಸ್ಟರ್ ಆಫ್ ಡಿಪ್ಲೋಮಾ" ಕೋರ್ಸ್ ಮಾಡಿದರು.
ಮುಂದೆ ಪತ್ರಿಕೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡ ಅವರು 1988 ರಿಂದ 1991 ರ ವರೆಗೆ ಡಾ.ಪಾಂಡುರಂಗ ಪಾಟೀಲ್ ಅವರ ಸಂಪಾದಕತ್ವದಲ್ಲಿ ಹುಬ್ಬಳ್ಳಿಯಿಂದ ಪ್ರಕಾಶನಗೊಳ್ಳುವ "ನವನಾಡು" ದಿನ ಪತ್ರಿಕೆಯಲ್ಲಿ ಧಾರವಾಡ ಜಿಲ್ಲಾ ಕೈಂ ವರದಿಗಾರರಾಗಿ, 1991 ರಿಂದ 1993 ರವರೆಗೆ ಹುಬ್ಬಳ್ಳಿಯಿಂದ ಪ್ರಕಾಶನಗೊಳ್ಳುತ್ತಿರುವ "ಟಿಪ್ಪು ಎಕ್ಸಪ್ರೇಸ್" ವಾರ ಪತ್ರಿಕೆಯ ಉಪಸಂಪಾದಕರಾಗಿ, ಹುಬ್ಬಳ್ಳಿಯಿಂದ ಪ್ರಕಾಶನಗೊಳ್ಳುವ ವಿಶಾಲ ಕರ್ನಾಟಕ ದಿನ ಪತ್ರಿಕೆಯಲ್ಲಿ ಕೆಲವು ಕಾಲ ಕೈಂ ವರದಿಗಾರರಾಗಿ, ಅಲ್ಲದೆ ವಿವಿಧ ಪತ್ರಿಕೆಗಳಲ್ಲಿ ಕೈಂ ವರದಿಗಾರನಾಗಿ ಸೇವೆಸಲ್ಲಿಸಿ.
2013 ರಲ್ಲಿ ಕೆಲವು ತಿಂಗಳ ವರೆಗೆ ಬೆಂಗಳೂರಿನಿಂದ ಪ್ರಕಾಶನಗೊಳ್ಳುತ್ತಿರುವ "ನಿಮ್ಮ ಕಿಡಿ" ಪಾಕ್ಷಿಕ ಪತ್ರಿಕೆಯ ಗೌರವ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ತನ್ನದೇ ಒಂದು ಸ್ವಂತ ಪತ್ರಿಕೆ ಮಾಡಬೇಕೆಂಬುದು ಪತ್ರಿಯೊಬ್ಬ ಮಹತ್ವಾಕಾಂಕ್ಷಿ ಹಾಗೂ ಪ್ರತಿಭಾವಂತ ಪತ್ರಕರ್ತನ ಬಯಕೆಯಾಗಿರುತ್ತದೆ. ಅದರಂತೆ ಮಲಗೊಂಡ ಅವರು ತಮ್ಮದೇ ಸಂಪಾದಕತ್ವದಲ್ಲಿ 1994ರ ಜನವರಿ 26 ರಂದು "ಅಪರಾಧಕ್ಕೆ ಸವಾಲು" ಎಂಬ ಒಂದು ವಿಶೇಷ ಹಾಗೂ ವಿಭಿನ್ನ ಹೆಸರಿನ ಕನ್ನಡ ಪಾಕ್ಷಿಕ ಪತ್ರಿಕೆಯನ್ನು ಹೊರತಂದರು. ಅದನ್ನು ಅಂದಿನ ಸಣ್ಣ ನೀರಾವರಿ ಮಂತ್ರಿಯಾಗಿದ್ದ ಆರ್.ಬಿ.ಚೌಧರಿ ಯವರಿಂದ ಬಿಡುಗಡೆಗೊಳಿಸಲಾಯಿತು.
16 ಪುಟದ ಈ ಕಪ್ಪು-ಬಿಳುಪು ಪತ್ರಿಕೆಯು ಬೆಂಗಳೂರು-ಹುಬ್ಬಳ್ಳಿ-ವಿಜಯಪುರ-ಕಲಬುರಗಿ-ಸಿಂದಗಿಯಿಂದ ಏಕಕಾಲಕ್ಕೆ ಪ್ರಕಾಶನಗೊಳ್ಳುತ್ತಿತ್ತು. ಅಲ್ಲದೇ ಈ ಭಾಗದ ಹಾಯ್ ಬೆಂಗಳೂರ್ ಪತ್ರಿಕೆ ಎಂದೇ ಕರೆಸಿಕೊಳ್ಳುತ್ತಿತ್ತು.
ಮುಂದೆ 26-05-2016 ರಿಂದ "ಅಪರಾಧಕ್ಕೆ ಸವಾಲು" ಭೀಮಾತೀರದ ಕನ್ನಡ ದಿನ ಪತ್ರಿಕೆಯನ್ನು ಪ್ರಾರಂಭಿಸಿದರು. ಪ್ರತಿ ವರ್ಷವೂ ತಪ್ಪದೇ 160 ಪುಟದ ವರ್ಣ ರಂಜಿತ ಯುಗಾದಿ ಸಂಚಿಕೆ ಪ್ರಕಟಿಸುವದು ಇವರ ಇನ್ನೊಂದು ಹೆಗ್ಗಳಿಕೆಯಾಗಿದೆ.
ಅದರಂತೆ ಇವರು ಪತ್ರಿಕಾ ರಂಗದಲ್ಲಿ ಕಳೆದ ಮೂರು ದಶಕಗಳಿಂದ ಸಕ್ರಿಯ ಕೈಂ ವರದಿಗಾರರಾಗಿ ರಾಜ್ಯದ ವಿವಿಧ ಪತ್ರಿಕೆಗಳಲ್ಲಿ 'ಭೀಮಾತೀರದ" ಹತ್ಯಾಕಾಂಡದ ಸಮಗ್ರ ವರದಿ ಹಾಗೂ ಹಂತಕರ ಸಂದರ್ಶನ ಮಾಡಿ ಫೋಟೊ ಸಮೇತ ವರದಿ ಮಾಡಿದ ಪತ್ರಿಕೆ ಎನ್ನಲು ಹೆಮ್ಮೆ ಎನಿಸುತ್ತದೆ.
ಅಪರಾಧ ಕೈಂ ವರದಿಗಳ ಬಗ್ಗೆ ಇವರಿಗೆ ಹೆಚ್ಚು ಆಸಕ್ತಿ ಹಾಗೂ ಅಪರಾಧ ಲೋಕದ ಜನರ ಸಂದರ್ಶನ ಮಾಡಿ ನೈಜ ವರದಿ ಮಾಡುವುದು. ಪುಸ್ತಕ ಓದುವುದು. ಜಾತಿ ಮತ ಬೇದ ಅನ್ನದೆ ಸರ್ವ ಧರ್ಮ ಸಮನ್ವಯದೊಂದಿಗೆ ಎಲ್ಲರೊಂದಿಗೂ ಬೇರೆಯುವ ಸ್ವಭಾವ ಇವರ ಹುಟ್ಟು ಗುಣ.
ತನಿಖಾ ವರದಿಗಳ ಬಗ್ಗೆ ವಿಶೇಷ ವರದಿ ಮಾಡುವುದು. ರಾಜ್ಯಾದಾದ್ಯಂತ ಸಂಚರಿಸಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರ್ತಿಸಿ ಪ್ರತಿ ವರ್ಷ 5 ರಿಂದ 8 ಜನರನ್ನು ತಮ್ಮ "ಯುಗಾದಿ" ವಿಶೇಷಾಂಕ 160 ಪುಟದಲ್ಲಿ ರಂಜಿತ ಲೇಖನಗಳನ್ನು ಪ್ರಕಟಿಸುವುದು. ಇವರ ಹವ್ಯಾಸವಾದರೆ ರಂಗಕಲೆಯಲ್ಲೂ ಇವರಿಗೆ ವಿಶೇಷ ಆಸಕ್ತಿಯಿದ್ದು, ಅದರಂತೆ ವಿವಿಧ ಗ್ರಾಮಗಳಲ್ಲಿ ನಾಟಕಗಳ ಉದ್ಘಾಟನೆ ಮಾಡಿದ್ದು, ಕಲಾವಿದರನ್ನು ಪ್ರೋತ್ಸಾಹಿಸಿ, ಗೌರವಿಸಿದ್ದಾರೆ. 1986 ರಲ್ಲಿ ನಾಟಕಗಳಲ್ಲಿ ಪೋಲಿಸ್ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ಇನ್ನುಳಿದಂತೆ "ಗೀತ ಸಮೂಹ" ಹಾಗೂ ಗುಂದಗಿಯ ಹೊನ್ನ ಬಿಂದಗಿ "ಶ್ರೀ ಗುರುಪಾದೇಶ್ವರ ಚರಿತ್ರಾಮೃತ" ಕೃತಿಗಳನ್ನೂ ಪ್ರಕಟಿಸಿದ್ದಾರೆ.
ಅನೇಕ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಂಡಿರುವ ಮಲಗೊಂಡ ಅವರು ಗ್ರಾ ಪಂ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಗುಂದಗಿ ಸ್ವಾಮಿ ವಿವೇಕಾನಂದ ಯುವಕ ಸಂಘದ ಅಧ್ಯಕ್ಷರಾಗಿ, ಬೆಂಗಳೂರಿನ ಕರ್ನಾಟಕ ಚಿತ್ರ ಕಲಾ ಪರಿಷತ್ ಅಧ್ಯಕ್ಷರಾಗಿ, ಗುಂದಗಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾಗಿ ಎರಡು ಭಾರಿ ಅವಿರೋಧ ಆಯ್ಕೆಯಾಗಿದ್ದಾರಲ್ಲದೆ, ಸರಕಾರದ ಅನುದಾನ ಸುಮಾರು ಲಕ್ಷ ಹಣದಿಂದ ವಿವಿಧ ಕಾಮಗಾರಿಗಳನ್ನು ಕೈಗೊಂಡು ಕೆಲಸ ಪೂರ್ತಿ ಮುಗಿಸಿದ್ದಾರೆ. ಕೆಲವು ಹಣಕಾಸು ಸಂಸ್ಥೆಗಳಲ್ಲಿ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ.
1993 ರಲ್ಲಿ ಸಿಂದಗಿ ತಾಲೂಕಿನ ಬಮ್ಮನಹಳ್ಳಿ ಗ್ರಾಮ ಪಂಚಾಯತ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಪ್ರಥಮ ದರ್ಜೆ ಗುತ್ತಿಗೆದಾರರಾಗಿಯೂ 2005 ರಿಂದ 2010 ರವರೆಗೆ ಕೆ.ಬಿ.ಜೆ.ಎನ್.ಎಲ್.ಟೆಂಡರ್ ಕಾಮಗಾರಿ ಮಾಡಿದ್ದು ಅವರ ಇನ್ನೊಂದು ಮುಖ.
2008 ರಿಂದ 2013 ರವರೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಉಪಾಧಕ್ಷರಾಗಿ ಎರಡು ಬಾರಿ ಅವಿರೋಧ ಆಯ್ಕೆಯಾಗಿ, 2014 ರಿಂದ 2017 ಹಾಗೂ 2017 ರಿಂದ 2019ರವರೆಗೆ ಎರಡು ಬಾರಿ ಜಿಲ್ಲಾ
ಕಾರ್ಯದರ್ಶಿಯಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ 1998 ರಿಂದ ಇಂದಿನವರೆಗೆ ಅಜೀವ ಸದಸ್ಯರಾಗಿದ್ದಾರೆ.
ನಾಡಿನ ಪ್ರಸಿದ್ಧ ಸುದ್ದಿ ವಾಹಿನಿಯಾದ ಸುವರ್ಣ ನ್ಯೂಸ್ 24*7 "ಭೀಮಾ ತೀರದ ತಗಾದೆ" ಭೀಮಾತೀರದ ಚಲನಚಿತ್ರ ವಿವಾದ ಸರಣಿ ಕಾರ್ಯಕ್ರಮದಲ್ಲಿ ಸತತ 5 ದಿನಗಳ ಕಾಲ ಸಂದರ್ಶಕನಾಗಿದ್ದು, 2017 ರಿಂದ ಪ್ರಜಾ ಟಿವಿಯಲ್ಲಿ ಪ್ರತಿ ಶನಿವಾರ ರಾತ್ರಿ 8:28 ಕ್ಕೆ ಭೀಮಾತೀರದ ರಕ್ತ ಚರಿತ್ರೆ ಅಸಲಿ ಕಹಾನಿ. ಕುಖ್ಯಾತ ಸಾಹುಕಾರ್ ಸಿದ್ದಪ್ಪ ಬೋರಗಿ. ಚೇರಮನ್ ಕೇಶಪ್ಪ ತಾವರಖೇಡ ಶಿವಾಜಿ ಬೋರಗಿ, ಚಂದಪ್ಪ ಹರಿಜನ ಹಾಗೂ ಭೀಮಾತೀರದ ಸೊನ್ನ ಹಾಗೂ ದೇವಣಗಾಂವ ಹೆಸರು ಮೂರು ದಶಕಗಳ ಹಿಂದೆ ರಾಜ್ಯಾದ್ಯಂತ ಸುದ್ದಿ. ಸಮಗ್ರ ವರದಿ. ಸುಮಾರು ತಿಂಗಳು ಸಂದರ್ಶನ ಕೊಟ್ಟಿದ್ದು ಇವರ ಮತ್ತೊಂದು ಹೆಗ್ಗಳಿಕೆಯಾಗಿದೆ.
ಇನ್ನು ಎಪ್ರಿಲ್ 10-2012 ಮುಖಪುಟದಲ್ಲಿ ಕಲರ್ ಪ್ರಕಟನೆಯಲ್ಲಿ ರಾಜ್ಯದ ದಿನ ಪತ್ರಿಕೆ "ಕನ್ನಡ ಪ್ರಭ" ದಿನ ಪತ್ರಿಕೆಯಲ್ಲಿ ಭೀಮಾ ತೀರಕ್ಕೊಂದು ಹೊಸ ತಿರುವು ವಿಷಯದ ಬಗ್ಗೆ ಸಮಗ್ರ ವರದಿ ಪ್ರಕಟಿಸಿದ್ದಾರೆ.
ಕಲಬುರಗಿ ಆಕಾಶವಾಣಿಯಲ್ಲಿ ಜಿ.ಬಿ. ಮಂಗಳಗಟ್ಟಿಯವರು ನಡೆಸಿಕೊಡುವ "ಯುವ ಶಕ್ತಿ" ಕಾರ್ಯಕ್ರಮದಲ್ಲಿ 1990 ರಿಂದ 1995 ವರೆಗೆ ಹತ್ತಾರು ಬಾರಿ ಇವರ ಸಂದರ್ಶನ ಬಿತ್ತರವಾಗಿದ್ದು ವಿಶೇಷ.
ಸಿನಿಮಾ ರಂಗದಲ್ಲೂ ಆಸಕ್ತಿ ಹೊಂದಿರುವ ಮಲಗೊಂಡ ಅವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮುಂಚೂಣಿಯಲ್ಲಿ ಹೋರಾಡಿದ "ಕ್ರಾಂತಿಯೋಗಿ ಮಹಾದೇವರು" ಚಿತ್ರದಲ್ಲಿ ಮುರಗೊಡ ಮಹಾದೇವರ ಸಹೋದರ ಪಾತ್ರದಲ್ಲಿ ಪತ್ರಕರ್ತನಾಗಿ ನಟಿಸಿದ್ದು, ಅದರಂತೆ ಗಂಗಾ ಧಾರಾವಾಹಿಯಲ್ಲೂ ಸಹ ನಟಿಸಿದ್ದಾರೆ.
ಶ್ರೇಷ್ಠರನ್ನು, ಅರ್ಹರನ್ನು, ಸಾಧಕರನ್ನು ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ ಎಂಬ ಮಾತಿನಂತೆ ಟಿ.ಕೆ ಮಲಗೊಂಡ ಅವರನ್ನು ಈ ಹಿಂದೆ ವಿಜಯಪುರ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿಗಳಾಗಿದ್ದ ನಾರಾಯಣ ನಡಮನಿಯವರು "ಬೆಸ್ಟ್ ಪೋಲಿಸ್ ಪ್ರೇಂಡ್" ಎಂದು ಗೌರವಿಸಿದ್ದಾರೆ.
ಮಾಜಿ ಕೇಂದ್ರ ಸಚಿವ ಬೂಟಾಸಿಂಗ್ ಅವರು ಭಾರತ ಏಕತಾ ಆಂದೋಲನದ ಸದಸ್ಯರಾಗಿದ್ದಾಗ ಸನ್ಮಾನಿಸಿದ್ದಾರೆ. ಶ್ರೀ ಕ್ಷೇತ್ರ ಇಂಚಗೇರಿ ಮಠದ ಶ್ರೀ ಸದ್ಗುರು ಸಮರ್ಥ ಗುರುಪುತ್ರೇಶ್ವರ ಮಹಾರಾಜರಿಂದ ಹಾಗೂ ಶ್ರೀ ರೇವಣಸಿದ್ದೇಶ್ವರ ಮಹಾರಾಜರಿಂದ ಸನ್ಮಾನ, ಪ್ರಶಸ್ತಿ ಸ್ವೀಕರಿಸಿದ್ದಾರೆ.
ಕೂಡಲಸಂಗಮದಲ್ಲಿ ನಡೆದ ಶರಣ ಮೇಳದಲ್ಲಿ ಅತಿಥಿಯಾಗಿ ಶ್ರೀ ಚನ್ನಬಸವನಂದ ಸ್ವಾಮಿಗಳು (ದೆಹಲಿ) ಇವರಿಂದ ಸನ್ಮಾನ ಪಡೆದಿದ್ದಾರೆ.
2018 ರಲ್ಲಿ ಇವರ ಮೂರು ದಶಕಗಳ ಪ್ರಾಮಾಣಿಕ ಹಾಗೂ ನಿರಂತರ ಪತ್ರಿಕೋದ್ಯಮ ಸೇವೆ ಪರಿಗಣಿಸಿ ವಿಜಯಪುರ ಜಿಲ್ಲಾಡಳಿತ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ಪತ್ರಿಕೋದ್ಯಮದ ಇವರ ಸುಧೀರ್ಘ ಸೇವೆ ಪರಿಗಣಿಸಿ ಕಡಣಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾದ ಸಿದ್ದಾರಾಮ ಉಪ್ಪಿನರವರ ಸನ್ಮಾನ. ಆಲಮೇಲ ಸಾಹಿತ್ಯ ಸಮ್ಮೇಳನದಲ್ಲಿ ಶಶಿಕಲಾ ವಸ್ತ್ರದ ಸನ್ಮಾನ. ಸಿಂದಗಿ ಸಾಹಿತ್ಯ ಸಮ್ಮೇಳನದಲ್ಲಿ ಹೀಗೆ ಹತ್ತು ಹಲವು ಸನ್ಮಾನ. ಪ್ರಶಸ್ತಿ ಲಭಿಸಿವೆ.
ಬೀದರದ ಶ್ರೀ ಶಿವಕುಮಾರ ಸ್ವಾಮಿಗಳಿಂದ ಸನ್ಮಾನ ಹಾಗೂ "ಗೀತ ಸಮೂಹ" ಪುಸ್ತಕ ಬಿಡುಗಡೆ ಮಾಡಿದ್ದಾರೆ. ಬೆಳಗಾಂವದ ಶ್ರೀ ವೀರ ಸೋಮೇಶ್ವರ ಶ್ರೀಗಳಿಂದ ಸನ್ಮಾನ "ಗುಂದಗಿಯ ಹೊನ್ನ ಬಿಂದಗಿ" ಪುಸ್ತಕ ಬಿಡುಗಡೆ ಮಾಡಿದ್ದಾರೆ. ಆಳೂರು ಶ್ರೀ ಸಿದ್ಧಾರೂಢ ಮಠದ ಶ್ರೀ ಶಂಕರಾನಂದ ಸ್ವಾಮಿಗಳಿಂದ ಸನ್ಮಾನ ಹಾಗೂ ಯುಗಾದಿ ಸಂಚಿಕೆ ಬಿಡುಗಡೆ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ, ಸ್ವಾತಂತ್ರ್ಯ ಸೇನಾನಿ ಮುರುಗೋಡ ಮಹಾದೇವರ "ಕ್ರಾಂತಿಯೋಗಿ ಮಹಾದೇವರು" ಗ್ರಂಥ ರಚಿಸಿದ್ದಾರೆ.
ಅಂತೆಯೇ ಜನವರಿ-26, 1994-2003ರವರೆಗಿನ ದಶಮಾನೋತ್ಸವ ಸಂದರ್ಭದಲ್ಲಿ ಪತ್ರಿಕೆಯ 160 ಪುಟದ ಯುಗಾದಿ ವಿಶೇಷಾಂಕ ಸಂಚಿಕೆಯ ಬಿಡುಗಡೆಯನ್ನು ಸಿಂದಗಿಯ ದಿಗ್ಗಜರಾದ ಎಮ್ ಎಮ್ ಕಲಬುರಗಿ, ರಮಾನಂದ ತೀರ್ಥರು. ಗದುಗಿನ ತೊಂಟದಾರ್ಯ ಜಗದ್ಗುರು. ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ವಿಶೇಷ ಲೇಖನ ಪ್ರಕಟಿಸಿ, ಆಚರಿಸಿದ್ದು, ಅಂದಿನ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾಗಿದ್ದ ಬಿ.ಸಿ.ಕುಲಕರ್ಣಿಯವರಂತಹ ಗಣ್ಯರ ಸಮ್ಮುಖದಲ್ಲಿ ಆಚರಣೆ ಮಾಡಿದ್ದು ಇನ್ನೊಂದು ವಿಶೇಷ.
ಶ್ರೀ ದಯಾನಂದ ಸ್ವಾಮೀಜಿಯೊಂದಿಗೆ ಗೋ ಹತ್ಯಾ ನಿಷೇಧ ಹೋರಾಟ ಸಮಿತಿ ಉತ್ತರ ಕರ್ನಾಟಕ ವಕ್ತಾರರಾಗಿ ಸೇವೆ ಬೆಂಗಳೂರು, ಹುಬ್ಬಳ್ಳಿ, ಧಾರವಾಡ ಕಡೆ ಹೋರಾಟ, ಭಾರತ ಏಕತಾ ಆಂದೋಲನಾ ಉತ್ತರ ಕರ್ನಾಟಕದ ಸದಸ್ಯರಾಗಿ ಮಾದೇವ ಹೊರಟ್ಟಿ ನ್ಯಾಯವಾದಿ ನಾಶಿಮಠ ನಿವೃತ್ತ ನ್ಯಾಯಧೀಶರಾದ ಮಳೆಮಠ ಹಾಗೂ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಸಹೋದರಿ ಮಾದೇವಿ ತಾಯಿ ಹಾಗೂ ಗುರುಪುತ್ರೇಶ್ವರ ಮಹಾರಾಜರೊಂದಿಗೆ ಸಕ್ರಿಯವಾಗಿ ಕೆಲಸ ಮಾಡಿದ್ದು. ಅದರಂತೆ ಎ.ಐ.ಟಿ.ಯು.ಸಿ.ಕಮುನಿಸ್ಟ ಪಾರ್ಟಿಯಲ್ಲಿ, ಸಿದ್ದನಗೌಡ ಪಾಟೀಲ್. ದಿ: ಸುರೇಶ ಅರಳಿಯವರೊಂದಿಗೆ ಹೋರಾಟಗಳಲ್ಲಿ ಭಾಗಿಯಾಗಿದ್ದು, ಕೆ.ಎಸ್ ಆರ್ ಟಿ ಸಿ ಸ್ಟಾಪ್ ಆಯ್ಡ್ ವರ್ಕ್ಸ್ ಯೂನಿಯನ್‌ದಲ್ಲಿ 1990 ರಲ್ಲಿ ಅನಂತ ಸುಬ್ಬಾರಾವ್, ಸುರೇಶ ಅರಳಿ, ಜಮಖಂಡಿಯ ಹಿರಿಯ ನ್ಯಾಯವಾದಿ ಆರ್ ಡಿ. ಹಳಿಂಗಳಿ ಅವರ ಜೊತೆ ಕಾರ್ಮಿಕರ ಅನ್ಯಾಯದ ವಿರುದ್ಧ ಭಂಡಾಯದ ಕಿಡಿ ಹೊತ್ತಿಸಿದ ಕ್ಷಣಗಳು.
ಇನ್ನೊಂದೆಡೆ 2012ರಲ್ಲಿ ಭೀಮಾತೀರದಲ್ಲಿ ಚಲನಚಿತ್ರ ಬಿಡುಗಡೆ ಸಮಯದಲ್ಲಿ ಚಿತ್ರ ತಂಡ ಹಾಗೂ ಹಿರಿಯ, ಪ್ರಖ್ಯಾತ ಪತ್ರಕರ್ತ ರವಿ ಬೆಳಗೆರೆ ವಿವಾದದ ನಡುವೆ ಟಿ.ಕೆ ಮಲಗೊಂಡ, ನಾಯಕ ನಟ ದುನಿಯಾ ವಿಜಯ, ಅಣಜಿ ನಾಗರಾಜ್, ನಟಿ ಆಶಾ ಲತಾ ಸುವರ್ಣ 247 ಟಿವಿ ವಾಹಿನಿಯಲ್ಲಿ ಒಂದು ವಾರ ಭೀಮಾತೀರದ ತಗಾದೆ ನಂತರ ಚಲನಚಿತ್ರ ಬಿಡುಗಡೆ ಮಾಡಿಸಿದ ಶ್ರೇಯಸ್ಸು ಇವರಿಗೂ ಸಲ್ಲುತ್ತದೆ. ಇತ್ತೀಚಿನ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಸುಪಾರಿ ಕೇಸ್ ಹೀಗೆ ಹತ್ತಾರು ಪ್ರಕರಣದಲ್ಲಿ ಇವರ ಪತ್ರಿಕೆ ಮೆಟ್ಟಿನಿಂತ ಸಾಹಸದ ಕ್ಷಣಗಳು.
ಹೀಗೆ ಸುಮಾರು ನಾಲ್ಕು ದಶಕಗಳಿಂದ ಪತ್ರಿಕೋದ್ಯಮ ವೃತ್ತಿ. ಹಲವಾರು ದಿನ ಪತ್ರಿಕೆಯಲ್ಲಿ ವೃತ್ತಿ ಮುಗಿಸಿ ಜನೆವರಿ 26 1993 ರಂದು ಸ್ವಂತ ಅಪರಾಧಕ್ಕೆ ಸವಾಲು ಪಾಕ್ಷಿಕ ಪತ್ರಿಕೆ ಹುಟ್ಟು ಹಾಕಿ, ಅಪರಾಧ ಲೋಕದ ಅನಾವರಣ. ಅನ್ಯಾಯದ ವಿರುದ್ಧ ಭಂಡಾಯದ ಕಿಡಿ ಹೊತ್ತಿಸಿ ರಾಜ್ಯಮಟ್ಟದಲ್ಲಿ ಪತ್ರಿಕೆ ಗುರುತಿಸಿ. ಮೇ 26 2016 ರಿಂದ ದಿನಪತ್ರಿಕೆಯಾಗಿ ದಾಪುಗಾಲಿಡುತ್ತಾ ಬಂದ ಪತ್ರಿಕೆಯು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಜುಲೈ 01-2019 ರಂದು "ಅಪರಾಧಕ್ಕೆ ಸವಾಲು" ಭೀಮಾತೀರದ ಕನ್ನಡ ದಿನ ಪತ್ರಿಕೆ ವಿಜಯಪುರ ಕರ್ನಾಟಕ ರಾಜ್ಯ ವಾರ್ತಾ ಇಲಾಖೆ ಮಾನ್ಯತಾ ಪಟ್ಟಿಗೆ ಸೇರ್ಪಡೆಯಾಗಿ ಪತ್ರಿಕೆಗೆ ಈಗ ಭೀಮ ಬಲ..!
ಈಗ ದಿನಪತ್ರಿಕೆಯಾಗಿ ಮುದ್ರಣ ಮಾಧ್ಯಮದಲ್ಲಿಯೂ ಹಾಗೂ ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಲರ್ ಪತ್ರಿಕೆ ಓದಲು ಲಭ್ಯವಿದೆ. ಈ ಪೇಪರ್, ವೆಬ್ಸೈಟ್ ಫೇಸ್‌ಬುಕ್, ವಾಟ್ಸಾಪ ಮೂಲಕ ಜನಪ್ರಿಯವಾಗಿ ಇಡೀ ನಾಡಿನಾದ್ಯಂತ ಜನರ ಮೆಚ್ಚುಗೆ ಕಾರಣವಾಗಿದೆ.
ಇನ್ನೊಂದು ವಿಶೇಷವೆಂದರೆ " ಪ್ರಜಾ ಟಿವಿ ವಾಹಿನಿಯಲ್ಲಿ ಭೀಮಾತೀರದ ರಕ್ತ ಚರಿತ್ರೆ ಅಸಲಿ ಕಹಾನಿ. ಸ್ಟೋರಿ ಪ್ರತಿ ಶನಿವಾರ ರಾತ್ರಿ 8-28 ಹಾಗೂ ರವಿವಾರ ಮರುಪ್ರಸಾರ ಮಧ್ಯಾಹ್ನ 3-28 ಗಂಟೆಗೆ ಸುಮಾರು 24 ವಾರಗಳ ಕಾಲ ಪ್ರಜಾ ಸುದ್ದಿ ವಾಹಿನಿಯಲ್ಲಿ ಪ್ರಸಾರಗೊಂಡಿರುವುದು ಪತ್ರಿಕೆಯ ಇನ್ನೊಂದು ಮೈಲುಗಲ್ಲು.
ಅದರಂತೆ ನಾಡಿನ ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಪ್ರತಿ ವರ್ಷ 160 ಪುಟದ ಯುಗಾದಿ ವಿಶೇಷಾಂಕದಲ್ಲಿ ಪರಿಚಯಿಸುತ್ತ ಪತ್ರಿಕೆ ಶ್ರೇಯಸ್ಸು ಗಳಿಸಿದೆ.
ತಮ್ಮ ಈ ಎಲ್ಲ ಯಶಸ್ಸಿಗೆ ಮಾಜಿ ಕೇಂದ್ರ ಗೃಹ ಸಚಿವ ಬೂಟಾಸಿಂಗ್ ಮಾಜಿ ಮುಖ್ಯಮಂತ್ರಿ ದಿ: ರಾಮಕೃಷ್ಣ ಹೆಗಡೆ ಸಹೋದರಿ ಮಾದೇವಿ ತಾಯಿ. ಭಾರತ ಏಕತಾ ಚಾರಿಟೆಬಲ್ ಮಠ ಟ್ರಸ್ಟ್ ಅಧ್ಯಕ್ಷ ಶಿವಕುಮಾರ್ ನಾಶಿಮಠ, ಶ್ರೀಕ್ಷೇತ್ರ ಇಂಚಗೇರಿ ಶ್ರೀ ರೇವಣಸಿದ್ದ ಮಹಾರಾಜರು. ಗುರುಪುತ್ರೇಶ್ವರ ಮಹಾರಾಜರು. ಬೀದರ್ ಶ್ರೀ ಶಿವಕುಮಾರ್ ಸ್ವಾಮಿಗಳು. ಆಳೂರ ಮಠದ ಶಂಕರಾನಂದ ಸ್ವಾಮಿಗಳು. ಪತ್ರಿಕೋದ್ಯಮಿ ದಿ.ಪಾಟೀಲ್ ಪುಟ್ಟಪ್ಪ, ಮಾಜಿ ಹು.ಧಾ.ಮ.ಮಹಾ ಪೌರರು ಪತ್ರಕರ್ತರು ಪಾಂಡುರಂಗ ಪಾಟೀಲ್. ದಿ.ಕೆ.ಎಚ್ ಪಾಟೀಲ್. ಹುಬ್ಬಳ್ಳಿಯ ಹಿರಿಯ ಪತ್ರಕರ್ತರಾದ ಈರಣ್ಣ ಎಸ್. ಪಾಳೆದ, ವಿಜಯಪುರ ಹಿರಿಯ ಸಾಹಿತಿ ಇಂದುಮತಿ ಲಮಾಣಿ, ಪತ್ರಕರ್ತ ಕೆ.ಕೆ.ಕುಲಕರ್ಣಿ, ನಟ ಬೆಳಗಾಂವಕರ್. ದಾನಪ್ಪ ಸೂರಗೊಂಡ. ವಿಜಯಪುರ. ಹುಬ್ಬಳ್ಳಿ. ಬೆಂಗಳೂರು. ಕಲಬುರಗಿ. ಸೊಲ್ಲಾಪುರ. ಸಿಂದಗಿಯ ಮಾಧ್ಯಮ ಸ್ನೇಹಿತರು ಹಾಗೂ ಶಾಲೆಯ ಗುರುಗಳಾದ ಜಿ.ಜಿ.ಕಿಣಗಿ ಸರ್. ಹಿರಿಯ ಸಾಹಿತಿ ಸಿದ್ದರಾಮ ಉಪ್ಪಿನ. ಹೀಗೆ ನೂರಾರು ಹಿರಿಯರು ತಮ್ಮ ಜೀವನ ಹಾಗೂ ಬೆಳವಣಿಗೆಗೆ ಸ್ಪೂರ್ತಿ ಎನ್ನುತ್ತಾರೆ ವಿನಯವಂತ ಟಿ.ಕೆ ಮಲಗೊಂಡ ಅವರು.
ಬಸವನಾಡಿನ ಇಂತಹ ಅಪ್ರತಿಮ ಸಾಧಕ ಟಿ.ಕೆ. ಮಲಗೊಂಡ ಅವರು ಜನೇವರಿ 26, 1993 ರಲ್ಲಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಗ್ರಾಮದ ಕೊಪ್ಪದ ಮನೆತನದ ಮಾದೇವಿಯೊಡನೆ ಮದುವೆಯಾಗಿ ಅವರಿಗೆ ಈಗ ಒಟ್ಟು ಮೂರು ಜನ ಮಕ್ಕಳು. ಕೀರ್ತಿಗೆ ಇಬ್ಬರು ಗಂಡು ಮಕ್ಕಳು. ಆರತಿಗೆ ಒಬ್ಬ ಹೆಣ್ಣು ಮಗಳು, ಹಿರಿಯ ಮಗ ದಿ.ವಿಜಯಕುಮಾರ ಮಲಗೊಂಡ. ಮಗಳು ಶ್ರೀಮತಿ ವಿಜಯಲಕ್ಷ್ಮೀ ಎಮ್ ಅಖಂಡಪ್ಪಗೊಳ ಬಿಕಾಂ ಪದವಿ ಮುಗಿಸಿದ್ದಾಳೆ. ಸಿಎ ಪದವಿ ಮಾಡುವ ಆಸಕ್ತಿ ಹೊಂದಿದ್ದಾಳೆ.
ಕಿರಿಯ ಪುತ್ರ ವಿಶ್ವಪ್ರಕಾಶ ಮಲಗೊಂಡ ಪ್ರೌಢ ಶಾಲಾ ಶಿಕ್ಷಣದ ಚಿತ್ರರಂಗದ ಆಸಕ್ತಿಯಿಂದ ಕ್ರಾಂತಿಯೋಗಿ ಮಹಾದೇವರು, ಮಲ್ಲಿಗೆ, ಪ್ರೀತಿ ವಿಸ್ಮಯ, ಲವ್ ಯು, ಸಾಧನಾ ಸೇರಿದಂತೆ ಸುಮಾರು ಇಪ್ಪತ್ತು ಚಿತ್ರಗಳಲ್ಲಿ ಅಭಿನಯಿಸಿದ್ದಾನೆ. ಜೊತೆಗೆ ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆಯ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮಗ ದಿ.ವಿಜಯಕುಮಾರ ಮಲಗೊಂಡ ಶ್ರೀಮತಿ ಶಿಲ್ಪಾ ದಂಪತಿಗಳಿಗೆ 25-03-2020ರಂದು ಯುಗಾದಿ ಹಬ್ಬದ ಉಡುಗೊರೆಯಾಗಿ ಹೆಣ್ಣು ಮಗು "ಲಕ್ಷ್ಮೀ" ಜನನ. ಇನ್ನು ಅಳಿಯ ಮಂಜುನಾಥ ಅಖಂಡಪ್ಪಗೋಳ ಉದ್ಯಮಿದಾರರಾಗಿದ್ದಾರೆ.
ಬೆಳಕು ಟ್ರಸ್ಟ್ ವತಿಯಿಂದ ನೀಡುವ ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರದ ಅನುಪಮ ಸೇವೆ ಪರಿಗಣಿಸಿ "ಹರ್ಮನ್ ಫ್ರೆಡ್ರಿಕ್ ಮೊಗ್ಲಿಂಗ್ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
2023 ಫೆಬ್ರವರಿ 04-05 ರಂದು ವಿಜಯಪುರದ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ "ಹೊಂಬಾಳೆ ಪ್ರಶಸ್ತಿ"ಪ್ರದಾನ ನೀಡಿ ಗೌರವಿಸಿದೆ.
ಪ್ರತಿವರ್ಷ ಜರುಗುವ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಅತ್ಯುತ್ತಮ ಕ್ರೈಮ್ ರಿಪೋರ್ಟರ್ (ತನಿಖಾ ವರದಿ)ಗೆ ಟಿ ಕೆ ಮಲಗೊಂಡ ಪ್ರಶಸ್ತಿ ಕೊಡುತ್ತಿರುವುದು ಇನ್ನೊಂದು ಹೆಮ್ಮೆಯ ವಿಷಯ.
ಸದ್ಯ ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ ಜಿಲ್ಲಾಮಟ್ಟದ ಪತ್ರಿಕೆಯಾಗಿದ್ದು ತನ್ನದೇ ಆದ ಛಾಪು ಮೂಡಿಸಿದೆ. ತಂತ್ರಜ್ಞಾನ ಬದಲಾದಂತೆ ಡಿಜಿಟಲ್ ಟೆಕ್ನಾಲಜಿ ಕೂಡ ತುಂಬಾ ಮುಂದೆ ಹೋಗಿದ್ದು,ಅಪರಾಧಕ್ಕೆ ಸವಾಲು ದಿನಪತ್ರಿಕೆ ಓದಲು ಈಗ ಈ-ಪೇಪರ್, ವೆಬ್ಸೈಟ್ ಗಳಲ್ಲಿ ಕೂಡ ಲಭ್ಯವಿದೆ.