ಐತಿಹಾಸಿಕ ದೇವಣಗಾಂವ ಉಳಿಕೆ ರಸ್ತೆ ತಡೆದು ಬೃಹತ್ ಪ್ರತಿಭಟನೆ

Oct 1, 2024 - 21:02
 0
ಐತಿಹಾಸಿಕ ದೇವಣಗಾಂವ ಉಳಿಕೆ ರಸ್ತೆ ತಡೆದು ಬೃಹತ್ ಪ್ರತಿಭಟನೆ
ಆಲಮೇಲ ತಾಲ್ಲೂಕಿನ ದೇವಣಗಾಂವ ಗ್ರಾಮದ ಸೇತುವೆ ಮೇಲಿನ ರಸ್ತೆ ದುರಸ್ತಿಗಾಗಿ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಗ್ರಾಮಸ್ಥರು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕರಾದ ಅರುಣ ಕುಮಾರ ವಡಗೇರಿ ಅವರಿಗೆ ಮನವಿ ಸಲ್ಲಿಸಿದರು.

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ಆಲಮೇಲ:  65 ವರ್ಷಗಳ ಹಳೆಯದಾದ ದೇವಣಗಾಂವ ಐತಿಹಾಸಿಕ ಸೇತುವೆ ಕಳೆದ ಹಲವಾರು ವರ್ಷಗಳಿಂದ ಸೇತುವೆಯ ಮೇಲ್ಭಾಗ ಮಾತ್ರ ಕುಸಿಯುತ್ತ ಸಾಗಿದ್ದು ಕೆಳಗಿನ ಭಾಗ ಸಂಪೂರ್ಣ ಇನ್ನೂ ಗಟ್ಟಿಮುಟ್ಟಾಗಿದೆ ಆದ್ದರಿಂದ ಮೇಲ್ಭಾಗದ ರಸ್ತೆ ದುರಸ್ತಿ ಮಾಡಬೇಕೆಂದು ಆಗ್ರಹಿಸಿ ದೇವಣಗಾಂವ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಸೋಮವಾರ 4 ತಾಸು ರಸ್ತೆ ತಡೆದು ಬೃಹತ್ ಪ್ರತಿಭಟನೆ ಮಾಡಿದರು.

ಸಾಮಾಜಿಕ ಹೋರಾಟಗಾರ ದತ್ತಾತ್ರೇಯ ಸೊನ್ನ ಮಾತನಾಡಿ ಕಳೆದ 15 ವರ್ಷದಿಂದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಐತಿಹಾಸಿಕ ಭೀಮಾ ನದಿಗೆ ಅಡ್ಡಲಾಗಿರುವ ಸೇತುವೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ ನಾವು ಈ ಪ್ರತಿಭಟನೆ ಮಾಡುವ ಉದ್ದೇಶ ಸೇತುವೆಯ ಮೇಲೆ ಸಿಸಿ ರಸ್ತೆ ಮಾಡಬೇಕು ಹಾಗೂ ತಾಲ್ಲೂಕಾ ಕೇಂದ್ರವಾದ ಆಲಮೇಲ ಪಟ್ಟಣಕ್ಕೆ ಹೋಗಲು ಸರಿಯಾದ ರಸ್ತೆ ಇಲ್ಲ ಈ ರಸ್ತೆಯ ಮೇಲೆ ಸಂಚಾರ ಮಾಡಬೇಕಾದರೆ ಜೀವ ಕೈಯಲ್ಲಿ ಹಿಡಿದು ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸೇತುವೆ ವಿಜಯಪುರ ಮತ್ತು ಕಲ್ಬುರ್ಗಿ ಜಿಲ್ಲೆಗಳ ಸಂಪರ್ಕದ ಕೊಂಡಿಯಾಗಿದೆ. ಪಕ್ಕದ ಕಲಬುರ್ಗಿ ಜಿಲ್ಲೆಯ ಅಫಜಲಪೂರ ಹೋಗಬೇಕಾದರೆ ಸೇತುವೆಯ ಮೇಲೆ ನರಕಯಾತನೆಯಾಗುತ್ತಿದೆ ನಮ್ಮ ಹೋರಾಟಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ಪಂದಿಸದಿದ್ದರೇ ನಾನು ಉಗ್ರ ಹೋರಾಟ ಮಾಡಬೇಕಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುವ ಮುಖಂಡ ಸಿದ್ಧಾರ್ಥ ಮೇಲಿನಕೇರಿ ಮಾತನಾಡಿ ಔರಾದದಿಂದ ಸದಾಶಿವಗಡಕ್ಕೆ ಸಂಪರ್ಕ ಕಲ್ಪಿಸಿವು ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆರಿಸಬೇಕು ಮತ್ತು ಭೀಮಾನದಿಗೆ ಅಡ್ಡಲಾಗಿರುವ ದೇವಣಗಾಂವ ಐತಿಹಾಸಿಕ ಸೇತುವೆಯು ಇನ್ನೂ ಗಟ್ಟಿಮುಟ್ಟಾಗಿದೆ ಸೇತುವೆಯ ಮೇಲೆ ಸಿಸಿ ರಸ್ತೆ ಮಾಡಬೇಕು ಈ ಸೇತುವೆಯ ಮಾರ್ಗವಾಗಿ ಕಬ್ಬು ಸಾಗಿಸಲು ನಾವು ಹರಸಾಹಸ ಪಡಬೇಕಾಗಿದೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಮ್ಮ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದರು. 

ಸಿಂದಗಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ(ಎಇಇ)ರಾದ ಅರುಣಕುಮಾರ ವಡಗೇರಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಒಂದು ವಾರದೊಳಗಾಗಿ ಸೇತುವೆಯ ಮೇಲಿನ ರಸ್ತೆ ಹಾಗೂ ದೇವಣಗಾಂವ ಗ್ರಾಮದಿಂದ ಆಲಮೇಲ ಪಟ್ಟಣದವರೆಗೆ ರಸ್ತೆಯನ್ನು ದುರಸ್ತಿ ಮಾಡಲಾಗುವುದು ಎಂದು ಹೇಳಿದ ಪ್ರತಿಭಟನಾಕಾರ ಮನವೊಲಿಸಿ ಪ್ರತಿಭಟನೆಯನ್ನು ಹಿಂಪಡೆಯಲು ಸೂಚಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಜಿ.ಪಂ ಸದಸ್ಯ ಎಸ್.ಎಸ್. ನಾಗೂರ, ಕೆ.ಕೆ.ಜೋಶಿ,ಎಸ್.ಎಸ್.ಗುಬ್ಬೆವಾಡ, ಪುಂಡಲೀಕ ನಡುವಿನಕೇರಿ, ಮುತ್ತುರಾಜ್ ಕಲಶೆಟ್ಟಿ, ವಿಠ್ಠಲ ಯರಗಲ, ಎಸ್.ಎಸ್.ಸೋಮನಾಯಕ್, ಸಿದ್ದು ಹಿರಾಪುರ, ವಿನೋದ್ ಮಾಸ್ಟರ್, ಹರೀಶ ಎಂಟಮಾನ,ಸಿದ್ದು ಹಂಗರಗಿ, ಕಾಂತಪ್ಪ ಅತಾಪಿ, ಮಲ್ಲಪ್ಪ ಕುಂಬಾರ್, ಪ್ರಭುಲಿಂಗ ಕಡ್ಲೆವಾಡ, ಜಗು ಯಂಕಂಚಿ, ವಿಠೋಬಾ ಬೊಮ್ಮನಹಳ್ಳಿ, ಸಿದ್ದು ಗಂಗನಹಳ್ಳಿ, ಬಲರಾಮ್ ಸಿಂಗ್ ರಜಪೂತ, ಶಿವಪುತ್ರ ಬಗಲಿ, ಸಂಗನಬಸವ ಸುತಾರ, ಶಂಕರ್ ನಡುವಿನಕೇರಿ ಸೇರಿದಂತೆ ಗಾ.ಪಂ ಸದಸ್ಯ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿದ್ದರು.

ಪೋಲೀಸ್ ಬಂದೋಬಸ್ತಿ: ನಾಲ್ಕು ತಾಸು ರಸ್ತೆ ತಡೆ ಮಾಡಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು ಆಲಮೇಲ ಪಿಎಸ್ಐ ಅರವಿಂದ ಅಂಗಡಿ ಅವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಒದಗಿಸಿದರು ಸುಗಮ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಿದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.