ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಬಂದಳ್ಳಿ ಶಾಲೆಯ ಮಕ್ಕಳ ಸಾಧನೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಯಾದಗಿರಿ: ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಮತ್ತು ಶುಕ್ರವಾರ ನಡೆದ 2024-25 ನೇ ಸಾಲಿನ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಬಂದಳ್ಳಿ ಪ್ರೌಢ ಶಾಲೆಯ ಮಕ್ಕಳು ಭಾಗವಹಿಸಿ, ಸಾಧನೆಯನ್ನು ಮೆರೆದಿದ್ದಾರೆ.
ಬಾಲಕಿಯರ ಖೋಖೊ ಕ್ರೀಡಾಕೂಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಅಲ್ಲದೇ ವೈಯಕ್ತಿಕ ಆಟಗಳಾದ 400 ಮೀ .ಬಾಲಕಿಯರ ವಿಭಾಗದ ಓಟದಲ್ಲಿ ಕು.ಶೋಭರಾಣಿ ತಂದೆ ದೇವೀಂದ್ರಪ್ಪ ಅವರು ಪ್ರಥಮ ,1500 ಮೀ .ಓಟದಲ್ಲಿ ಕು.ಮೇಘ ತಂದೆ ಶರಣಪ್ಪ ಪ್ರಥಮ ಸ್ಥಾನ, 3000 ಮೀ .ಓಟದಲ್ಲಿ ಇದೆ ಮೇಘ ಶರಣಪ್ಪ ದ್ವಿತೀಯ ಸ್ಥಾನದಲ್ಲಿ ಗೆದ್ದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಕ್ರೀಡಾ ಸಾಧನೆಗೆ ಶಾಲೆಯ ಮುಖ್ಯ ಗುರುಗಳಾದ ಯಾಸ್ಮಿನ್ ಸುಲ್ತಾನಾ, ದೈಹಿಕ ಶಿಕ್ಷಕ ಹಸನ್ ಸಾಬ್ ಪುಟ್ಟಿ, ಶಿಕ್ಷಕರಾದ ಹೊನ್ನಪ್ಪ, ಮರೆಪ್ಪ, ಸುರೇಖಾ, ಹುಸ್ನಾರಾ, ರಶ್ಮೀ,ಆನಂದ ಹಿರೇಮಠ, ಸುನೀತಾ ಸೇರಿದಂತೆ ಬಂದಳ್ಳಿ ಶಾಲೆಯ ಎಲ್ಲಾ ಶಿಕ್ಷಕರು, ಕಲಿಕೆ ಸಂಸ್ಥೆಯ ಹಿರಿಯ ಸಂಯೋಜಕರಾದ ಮರೆಪ್ಪ ನಂದಿಹಳ್ಳಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಸಾಬಣ್ಣ ಕೊಂಡೊನೋರ್, ಸದಸ್ಯರು, ಗ್ರಾಮದ ಹಿರಿಯರು ಮತ್ತು ಗ್ರಾಮದ ಯುವಕರು ಹರ್ಷವ್ಯಕ್ತ ಪಡಿಸಿದ್ದಾರೆ.