ಚಿಕ್ಕಪಡಸಲಗಿ ಹರಳಯ್ಯ ಶಾಲಾ ಬಾಲಕನ ಸಾಧನೆ

Oct 2, 2024 - 02:11
 0
ಚಿಕ್ಕಪಡಸಲಗಿ ಹರಳಯ್ಯ ಶಾಲಾ ಬಾಲಕನ ಸಾಧನೆ
ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಗ್ರಾಮದ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆ ವಿದ್ಯಾರ್ಥಿ ಮಹೇಶ ಅಡಿಹುಡಿ ಜಿಲ್ಲಾ ಮಟ್ಟದ ಪ್ರೌಢಶಾಲೆಗಳ 17 ವಯೋಮಿತಿಯ 55 ಕೆಜಿ ವಿಭಾಗದ ಕುಸ್ತಿ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾದ ಪ್ರಯುಕ್ತ ಶಾಲಾ ಮುಖ್ಯಸ್ಥರು,ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿ ರಾಜ್ಯ ಮಟ್ಟದ ಸ್ಪಧೆ೯ಯಲ್ಲೂ ಮಿಂಚಿ ಕೀತಿ೯ ತರಲೆಂದು ಶುಭ ಹಾರೈಸಿದರು.

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ಜಮಖಂಡಿ : ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 2024-25 ನೇ ಸಾಲಿನ ಜಿಲ್ಲಾ ಮಟ್ಟದ 17 ವಯೋಮಿತಿ ಒಳಗಿನ ಪ್ರೌಢಶಾಲೆಗಳ 55 ಕೆಜಿ ವಿಭಾಗದ ಕುಸ್ತಿ ಪಂದ್ಯದಲ್ಲಿ ಚಿಕ್ಕಪಡಸಲಗಿ ಶಾಲಾ ಬಾಲಕನೊಬ್ಬ ಅಮೋಘ ಸಾಧನಗೈದು ರಾಜ್ಯ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾನೆ.

      ತಾಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆ ವತಿಯಿಂದ ನಡೆಯುತ್ತಿರುವ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆ ವಿದ್ಯಾಥಿ೯ ಮಹೇಶ ಅಡಿಹುಡಿ ಜಿಲ್ಲಾ ಮಟ್ಟದ ಕುಸ್ತಿ ಸ್ಪಧೆ೯ಯಲ್ಲಿ ಚಾಕಚಕ್ಕತೆಯ ಆಟವನ್ನಾಡಿ ಜಯದ ಮಾಲೆಯನ್ನು ಧರಿಸಿಕೊಂಡು ಸಾಧನೆ ಮೆರೆದಿದ್ದಾನೆ.

       ಪ್ರಸ್ತುತ ಹರಳಯ್ಯ ಶಾಲೆಯಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ಕ್ರೀಡಾಪಟು ಮಹೇಶ ಅಡಿಹುಡಿ ಕುಸ್ತಿ ಆಟದ ಕೌಶಲ್ಯ ತಂತ್ರಗಳನ್ನು ಮೈಗೂಡಿಸಿಕೊಂಡು ಭರವಸೆ ಮೂಡಿಸಿ ಗಮನ ಸೆಳೆದಿದ್ದಾನೆ.

   ಮಹೇಶ ಅಡಿಹುಡಿ ಅಂತಿಮ ಹಂತದ ಕುಸ್ತಿ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಸಾಧನೆ ಗೈದು ಸಂಸ್ಥೆ, ಶಾಲೆ,ಗ್ರಾಮಕ್ಕೆ ಕೀತಿ೯ ತಂದಿದ್ದಕ್ಕೆ ಹಾಗೂ ಆ ನಿಟ್ಟಿನಲ್ಲಿ ಉತ್ತಮವಾಗಿ ತರಬೇತಿಗೊಳಿಸಿದ ಹಿರಿಯ ಮಾರ್ಗದಶಿ೯ ವಿಶ್ರಾಂತ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಅನಂತಪೂರ ಅವರನ್ನು ಸಂಸ್ಥೆಯ ಅಧ್ಯಕ್ಷರಾದ ಗದುಗಿನ ತೋಂಟದ ಡಾ.ಸಿದ್ದರಾಮ ಮಹಾಸ್ವಾಮಿಗಳು, ಸಂಸ್ಥೆಯ ಕ್ರಿಯಾಶೀಲ ಕಾರ್ಯದರ್ಶಿಗಳಾದ ಪ್ರೊ, ಶಿವಾನಂದ ಪಟ್ಟಣಶೆಟ್ಟರ, ಸಂಸ್ಥೆ ಸಿಇಓ ಆಯ್.ಬಿ.ಬೆನಕೊಪ್ಪ, ಸ್ಥಾನಿಕ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರು, ಶಾಲಾ ಮುಖ್ಯ ಶಿಕ್ಷಕ ಬಸವರಾಜ ಜಾಲೋಜಿ ಸೇರಿದಂತೆ ಹಲ ಕ್ರೀಡಾ ಪ್ರಿಯರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

   ಶಾಲೆಯಲ್ಲಿ ಗುರುಗಳು,ಗುರುಮಾತೆಯರು ಸಾಧಕ ಕ್ರೀಡಾಪಟು ಮಹೇಶ ಅಡಿಹುಡಿಗೆ ಅಭಿಮಾನದಿಂದ ಸತ್ಕರಿಸಿ ಅಭಿನಂದನೆ ಸಲ್ಲಿಸಿದರು. ರಾಜ್ಯ ಮಟ್ಟದ ಕುಸ್ತಿ ಪಂದ್ಯದಲ್ಲೂ ಹಿಡಿತ ಸಾಧಿಸಿ ಗೆಲುವಿನ ನಗೆದೊಂದಿಗೆ ಮಹೇಶ ಮಿನುಗಲಿ ಎಂದು ಗುರು ಬಳಗ ಶುಭ ಹಾರೈಸಿದರು. ಈ ವೇಳೆ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ, ವಿಶ್ರಾಂತ ಶಿಕ್ಷಕ ಬಸವರಾಜ ಅನಂತಪೂರ, ಈರಣ್ಣ ದೇಸಾಯಿ, ಲೋಹಿತ ಮಿಜಿ೯, ಜಿ.ಆರ್.ಜಾಧವ, ಸದಾಶಿವ ಸಿದ್ದಾಪುರ, ಕುಮಾರ ವಾಣಿ, ಶಿಕ್ಷಕಿಯರಾದ ಕವಿತಾ ಅಂಬಿ, ಶ್ರೀಮತಿ ಸಹನಾ ಹತ್ತಳ್ಳಿ, ಶ್ರೀಮತಿ ಪ್ರಮೀಳಾ ತೇಲಸಂಗ ಉಪಸ್ಥಿತರಿದ್ದರು. 

 

 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.