ಬೈಕ್‌ನ ಸೈಡ್ ಬ್ಯಾಗನಲ್ಲಿಟ್ಟಿದ್ದ ಎರಡು ಲಕ್ಷ ರೂ.ಕಳ್ಳತನ : ಪರಾರಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಮುದ್ದೇಬಿಹಾಳ : ಗೋಲ್ಡ್ ಲೋನ್ ಮೂಲಕ ಪಡೆದುಕೊಂಡ ೨ ಲಕ್ಷ ರೂ.ನಗದು ಹಣವನ್ನು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಕಳ್ಳರು ತಮ್ಮ ಕೈಚಳಕ ತೋರಿಸಿ ಬೈಕ್‌ನ ಸೈಡ್‌ಬ್ಯಾಗನಲ್ಲಿದ್ದ ಹಣವನ್ನು ಎಗರಿಸಿರುವ ಘಟನೆ ಪಟ್ಟಣದಲ್ಲಿ ಶುಕ್ರವಾರ ಇಲ್ಲಿನ ಕೆನರಾ ಬ್ಯಾಂಕ್ ಹತ್ತಿರ ನಡೆದಿದೆ.
ಘಟನೆ ವಿವರ : ಅಗ್ನಿಶಾಮಕ ಠಾಣೆಯಲ್ಲಿ ಫೈಯರ್‌ಮ್ಯಾನ ಆಗ ಸೇವೆ ಸಲ್ಲಿಸುತ್ತಿರುವ ತಾಲ್ಲೂಕಿನ ತಂಗಡಗಿ ನಿವಾಸಿ ಶಿವಾನಂದ ಸಂಗಪ್ಪ ವಾಲೀಕಾರ ಅವರು ಸೆ.೨೭ ರಂದು ಮದ್ಯಾಹ್ನದ ಹೊತ್ತಿಗೆ ಕೆನರಾ ಬ್ಯಾಂಕಿನಿಂದ ಗೋಲ್ಡ್ ಲೋನ್‌ನಿಂದ ಪಡೆದುಕೊಂಡ ಎರಡು ಲಕ್ಷ ರೂ.ಗಳನ್ನು ತಮ್ಮ ಬೈಕ್‌ನ ಸೈಡ್ ಬ್ಯಾಗನಲ್ಲಿಟ್ಟಿದ್ದಾರೆ.
ಇದನ್ನು ದೂg Àದಿಂದಲೇ ಗಮನಿಸಿರುವ ಕಳ್ಳರು ಬೈಕ್‌ನಲ್ಲಿಟ್ಟಿದ್ದ ಹಣವನ್ನು ಕ್ಷಣ ಮಾತ್ರದಲ್ಲಿ ಕದ್ದೊಯ್ದಿದ್ದಾರೆ.ಈ ಕುರಿತು ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಕಳ್ಳರ ಗುರುತು ಪತ್ತೆ ಹಚ್ಚುವ ಕಾರ್ಯದಲ್ಲಿ ಪೊಲೀಸರು ಕಾರ್ಯೋ ನ್ಮುಖರಾಗಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ೩೦೩(೨) ಅಡಿ ಪ್ರಕರಣ ದಾಖಲಾಗಿದೆ.