ನಾಳೆ ಭೀಮಾ ಸೇತುವೆ ಮೇಲೆ ರಸ್ತೆ ತಡೆದು ಪ್ರತಿಭಟನೆ

Sep 30, 2024 - 00:06
Sep 30, 2024 - 04:55
 0
ನಾಳೆ ಭೀಮಾ ಸೇತುವೆ ಮೇಲೆ ರಸ್ತೆ ತಡೆದು ಪ್ರತಿಭಟನೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ

ಆಲಮೇಲ : ನಾಳೆ ಆಲಮೇಲದಿಂದ ದೇವಣಗಾಂವ ಸೇತುವೆ ವರೆಗೆ ವಿಜಯಪುರ ಜಿಲ್ಲಾ ಗಡಿರೇಖೆ ವರೆಗೆ (ಅಫಜಲಪುರ ತಾಲ್ಲೂಕಿನ ಸೊನ್ನ ಗ್ರಾಮದ ಕ್ರಾಸ್) ರಸ್ತೆ ಸುಧಾರಣೆಗೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಸೆ.30 ಸೋಮವಾರ ಬೆಳಗ್ಗೆ 7-00 ಘಂಟೆಯಿಂದ ಸೇತುವೆ ಮೇಲೆ ರಸ್ತೆ ತಡೆದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಮಸ್ತ ದೇವಣಗಾಂವ ಗ್ರಾಮದ ಗ್ರಾಮಸ್ಥರುಎಲ್ಲರೂ ಭಾಗವಹಿಸಿ ಪ್ರತಿಭಟನೆ ಯಶಸ್ವಿ ಗೊಳಿಸಬೇಕಾಗಿ ವಿನಂತಿ.

 ದೇವಣಗಾಂವ ಗ್ರಾಮದ ಗ್ರಾಮ ಪಂಚಾಯತ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು, ಗ್ರಾಮದ ಹಿರಿಯರು, ಯುವಕರು, ಮಹಿಳೆಯರು, ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು, ಅಫಜಲಪುರ -ಆಲಮೇಲ ತಾಲೂಕಿನ ಗ್ರಾಮಸ್ಥರು ಆಗಮಿಸಿ ಪ್ರತಿಭಟನೆಯನ್ನು ಯಶಸ್ವಿ ಗೊಳಿಸಬೇಕೆಂದು ದತ್ತಾತ್ರೇಯ ಸೊನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.