ಭಗತ್ ಸಿಂಗ್ ಯುವಶಕ್ತಿಗೆ ಸ್ಫೂರ್ತಿಯ ಚಿಲುಮೆ : ಚೇತನ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಚಡಚಣ : ಇಂದಿನ ಯುವಕರು ದೇಶಪ್ರೇಮಿ 'ಭಗತ್ ಸಿಂಗ್'ರ ಜೀವನಾದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಬಲಿಷ್ಠ ರಾಷ್ಟ್ರ ಕಟ್ಟಲು ಯುವಶಕ್ತಿಯ ಪಾತ್ರ ಮುಖ್ಯ. ಯುವಕರು ದುಷ್ಚಟ, ಮಾದಕ ವ್ಯಸನಗಳಿಂದ ದೂರವಿದ್ದು, ಒಳ್ಳೆಯ ಶಿಕ್ಷಣ ಪಡೆದು ಸಮಾಜಕ್ಕೆ ತಮ್ಮದೇಯಾದ ಕೊಡುಗೆ ನೀಡುವಂತಾಗಬೇಕು ಎಂದು ಪ.ಪಂ ಸದಸ್ಯರು ಹಾಗೂ ಎಬಿವಿಪಿ ನಗರ ಘಟಕದ ಕಾರ್ಯದರ್ಶಿಚೇತನ ನಿರಾಳೆ ಹೇಳಿದರು.
ಶನಿವಾರ ಚಡಚಣ ಪಟ್ಟಣದ ಬಜಾರ್ ರಸ್ತೆಯ ಭಗತ್ ಸಿಂಗ್ ವೃತ್ತದಲ್ಲಿ ಅಖಿಲ್ ಭಾರತೀಯ ವಿದ್ಯಾರ್ಥಿ ಪರಿಷತ್ ಚಡಚಣ ನಗರ ಘಟಕ ಹಾಗೂ ಯುವಕರ ಬಳಗದ ವತಿಯಿಂದ ಆಯೋಜಿಸಿದ್ದ 'ಕ್ರಾಂತಿಕಾರಿ ದೇಶಭಕ್ತ ಭಗತ್ ಸಿಂಗ್'ರ ೧೧೭ ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ 'ಭಗತ್ ಸಿಂಗ್'ರ ಭಾವಚಿತ್ರಕ್ಕೆ ಪುಷ್ಪ ನಮನ, ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಭಗತ್ ಸಿಂಗ್'ರು ೨೩ ನೇ ವಯಸ್ಸಿನ ಅತಿ ಸಣ್ಣ ಪ್ರಾಯದಲ್ಲಿಯೇ ದೇಶಕ್ಕಾಗಿ ಪ್ರಾಣವನ್ನೆ ಅರ್ಪಿಸಿದ ಮಹಾನ್ ದೇಶಭಕ್ತರು. ದೇಶಕ್ಕಾಗಿ ಪ್ರಾಣತ್ತೆತ್ತಿದ ಮಹನೀಯರು ನಮ್ಮ ನಾಯಕರು ಎನ್ನೋಣ ಹೇಳಿದರು.
ಇದೇ ವೇಳೆ ನ್ಯಾಯವಾದಿ ಅಶೋಕ ಕುಲಕರ್ಣಿ ಅವರು ಮಾತನಾಡಿ, ಭಗತ್ ಸಿಂಗ್ ರ ದೇಶಪ್ರೇಮ್ ಇಂದಿನ ಯುವಕರು ಜೀವನದಲ್ಲಿ ಅನುಕರಣೆ ಮಾಡಿಕೊಂಡು ಬದುಕಬೇಕು. ಪ್ರತಿಯೊಬ್ಬರೂ ತಮ್ಮ ರಾಷ್ಟ್ರದ ಬಗ್ಗೆ ಅಭಿಮಾನ ಹೊಂದಿರಬೇಕು. ಮುಂದಿನ ಪಿಳ್ಗೆಗೆ ಆದರ್ಶಪ್ರಾಯ ವಾಗುವಂತೆ ಬದುಕಿ ತೋರಿಸಬೇಕು. ಸ್ವಾತಂತ್ರ‍್ಯ ಹೋರಾಟಗಾರರು ಹಾಗೂ ಯೋಧರು ನಮ್ಮ ನಿಜವಾದ ಹೀರೋಗಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಬಿವಿಪಿ ಕಾರ್ಯಕರ್ತರಾದ ಅನಿಲ್ ಸಾಳುಂಕೆ, ಸಂತೋಷ ಕೊಳ್ಳೋಳ್ಳಿ, ಶಿವಾಜಿ ಇಂಗೋಲಿ, ಸತೀಶ್ ದೇವಕುಳೆ, ಅನಿಲ್ ಹಿರೇಮಠ, ಶಿವಾನಂದ ಜುಂಜಾ, ಯಲ್ಲಪ್ಪ ಸಿಂಧೆ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.