ಬೆಂಗಳೂರು ಜಲಮಂಡಳಿಯ 60ರ ಸಂಭ್ರಮ: ವಜ್ರಮಹೋತ್ಸವ ಕ್ರೀಡಾಕೂಟಕ್ಕೆ ಚಾಲನೆ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಬೆಂಗಳೂರು :ಕ್ರಿಡೆಯμÉ್ಟೀ ಅಲ್ಲದೇ ಬದುಕಿನಲ್ಲಿಯೂ ಪ್ರಾಮಾಣಿಕತೆ ಮತ್ತು ಶಿಸ್ತು ಮೈಗೂಡಿಸಿಕೊಂಡರೆ ಯಶಸ್ಸು ಸದಾ ನಮ್ಮ ಹಿಂದೆ ಇರುತ್ತದೆ *ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಅಂತಾರಾಷ್ಟ್ರೀಯ ಮಾಜಿ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ ಹೇಳಿದ್ದಾರೆ.
ಬೆಂಗಳೂರು ಜಲಮಂಡಳಿಯ 60ರ ಸಂಭ್ರಮದ ಪ್ರಯುಕ್ತ ಬಿ.ಇ.ಎಲ್ ವೃತ್ತದ ಬಿ.ಇ.ಎಲ್ ಆಟದ ಮೈದಾನದಲ್ಲಿ ವಜ್ರಮಹೋತ್ಸವ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ರೀಡೆ ಸಂತಸ ಮತ್ತು ಆರೋಗ್ಯದ ಪ್ರತೀಕ. ಆರೋಗ್ಯ ಭಾಗ್ಯವμÉ್ಟೀ ಅಲ್ಲದೇ ಸಂಪತ್ತು ಕೂಡ ಆಗಿದೆ. ಉತ್ತಮ ಆರೋಗ್ಯ ಇದ್ದರೆ ಸೂಕ್ತ ಹಾದಿಯಲ್ಲಿ ಸಾಗಲು ನೆರವಾಗಲಿದೆ ಎಂದರು.
ಪ್ರತಿದಿನ ಕನಿಷ್ಠ 50 ನಿಮಿಷ ವ್ಯಾಯಾಮಕ್ಕಾಗಿ ಮೀಸಲಿಡಬೇಕು. ನಿಜವಾದ ಕ್ರೀಡಾ ಸ್ಫೂರ್ತಿಯಿಂದ ಮುನ್ನಡೆಯಬೇಕು. ಉತ್ತಮ ಕ್ರೀಡಾಪಟುಗಳನ್ನು ಕಂಡರೆ ಅಸೂಯೆ ಇರಬಾರದು. ಕ್ರೀಡಾಪಟುಗಳನ್ನು ಪೆÇ್ರೀತ್ಸಾಹಿಸುವ ಗುಣವನ್ನು ರಕ್ತಗತವಾಗಿ ಮೈಗೂಡಿಸಿಕೊಳ್ಳಬೇಕು. ಉತ್ತಮ ಅಭ್ಯಾಸಗಳನ್ನು ಕಲಿತರೆ ಶ್ರೇಷ್ಠ ಕ್ರೀಡಾಪಟುವಾಗಲು ಸಾಧ್ಯ. ಇದರಿಂದ ದೇಶಕ್ಕೆ ಉತ್ತಮ ಹೆಸರು ತರುವ ಜೊತೆಗೆ ವೈಕ್ತಿಗತ ಬೆಳವಣಿಗೆ ಸಾಧಿಸಲು ಸಾಧ್ಯ ಎಂದು ಸಯ್ಯದ್ ಕಿರ್ಮಾನಿ ಹೇಳಿದರು.
ಬೆಂಗಳೂರು ನೀರು ಸರಬರಾಜು ಮತ್ತು ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಜಲಮಂಡಳಿ ಆರು ದಶಕಗಳ ಹಾದಿಯಲ್ಲಿ ಸಾಗಿ ಬಂದಿರುವುದು ಮಹತ್ವದ ಬೆಳವಣಿಗೆಯಾಗಿದೆ. ಬದುಕಿನಲ್ಲಿ ಗೆಲುವು – ಸೋಲು ಸಹಜ. ಜಲಮಂಡಳಿ ಇದಕ್ಕೆ ಜ್ವಲಂತ ಉದಾಹರಣೆ. ಸೋಲನ್ನೇ ಗೆಲುವನ್ನಾಗಿ ಪರಿವರ್ತಿಸುವ ಸಾಮಥ್ರ್ಯವನ್ನು ಜಲಮಂಡಳಿ ಹೊಂದಿದೆ ಎಂದರು.
ಭಾರತ 1983 ರ ವಿಶ್ವಕಪ್ ಗೆದ್ದಿರುವುದು ಮಹತ್ವದ ಸಾಧನೆ. ಈ ಸಾಧನೆ ನಮ್ಮ ಆತ್ಮ ವಿಶ್ವಾಸವನ್ನು ಇಮ್ಮಡಿಗೊಳಿಸಿತು. ನಂತರ ಆರ್ಥಿಕತೆಯೂ ಬೆಳೆಯುತ್ತಿದೆ. ಆತ್ಮ ವಿಶ್ವಾಸದಿಂದ ಆಟ ಆಡುವ ಕೌಶಲ್ಯತೆ ನಮ್ಮಲ್ಲಿ ಮೂಡಿತು. ಕ್ರೀಡಾ ಕ್ಷೇತ್ರದಲ್ಲಿ ಭಾರತ ಮಹೋನ್ನತ ಸಾಧನೆ ಮಾಡಲು ಇದು ಬುನಾದಿಯಾಯಿತು. ಮಾನ್ಯ ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರ ನಿರ್ದೇಶನದಂತೆ ನಮ್ಮ ಕ್ರೀಡಾ ಕೂಟದಲ್ಲಿ ಕಪ್ ಗೆಲ್ಲುವ ತಂಡಕ್ಕೆ ಒಂದು ಲಕ್ಷ ರೂ, ಎರಡು ಹಾಗೂ ಮೂರನೇ ಬಹುಮಾನ ಪಡೆದ ತಂಡಕ್ಕೆ ತಲಾ 50 ಮತ್ತು 25 ಸಾವಿರ ರೂ ಬಹುಮಾನ ನೀಡುವುದಾಗಿ ಘೋಷಿಸಿದರು. ವಾಲಿಬಾಲ್ ಪಂದ್ಯಾವಳಿಗೂ ಇದೇ ರೀತಿಯ ರೀತಿ ಬಹುಮಾನ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಕಾರ್ಯದರ್ಶಿಗಳಾದ ಮದನ್ ಮೋಹನ್, ಪ್ರಧಾನ ಮುಖ್ಯ ಅಭಿಯಂತರ ಸುರೇಶ, ಮುಖ್ಯ ಅಭಿಯಂತರರಾದ ರಾಜೀವ್ ಕೆ.ಎನ್.,ಬಿ.ಸಿ.ದಲಾಯತ್,ಕೆ.ಎನ್.ಪರಮೇಶ,ಜಯಶಂಕರ್, ಆರ್ಥಿಕ ಸಲಹೆಗಾರರು ಹಾಗೂ ಮುಖ್ಯ ಲೆಕ್ಕಾಧಿಕಾರಿ ಸುಬ್ಬರಾಮಯ್ಯ, ಬೆಂಗಳೂರು ಜಲಮಂಡಳಿ ನೌಕರರ ಸಂಘದ ಅಧ್ಯಕ್ಷ ಬಿ.ಕೆ.ಮರಿಯಪ್ಪ, ಕಾರ್ಯದರ್ಶಿ ಗೋವಿಂದರಾಜು, ಸ್ಯಾನಿಟರಿ ಯೂನಿಯನ್ ಅಧ್ಯಕ್ಷ ಸಿದ್ದಪ್ಪ ಸೇರಿದಂತೆ ಅಪರ ಮುಖ್ಯ ಅಭಿಯಂತರರು,ಮಂಡಳಿಯ ಹಿರಿಯ ಅಧಿಕಾರಿಗಳು ಹಾಗೂ ಇಂಜನಿಯರ್‍ಗಳು ಇದ್ದರು.
ಕ್ರಿಕೆಟ್, ವಾಲಿಬಾಲ್, ಥ್ರೋ ಬಾಲ್, ಷಟಲ್ ಬ್ಯಾಡ್ಮಿಂಟನ್, ಓಟದ ಸ್ಪರ್ಧೆ ಸೇರಿದಂತೆ ಇನ್ನಿತರ ಸ್ಪರ್ಧೆಗಳು ಜಾಲಹಳ್ಳಿಯ ಬಿಇಎಲ್ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿವೆ.