ಬಸವೇಶ್ವರ ಬ್ಯಾಂಕಿಗೆ ಲೋಕನಾಥ ಅಗರವಾಲ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ

Jan 10, 2025 - 02:27
Jan 10, 2025 - 02:34
 0
ಬಸವೇಶ್ವರ ಬ್ಯಾಂಕಿಗೆ ಲೋಕನಾಥ ಅಗರವಾಲ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ಬಸವನಬಾಗೇವಾಡಿ: ಸ್ಥಳೀಯ ಬಸವೇಶ್ವರ ಕೋ ಅಪರೇಟಿವ್ಹ ಬ್ಯಾಂಕಿಗೆ ಲೋಕನಾಥ ಅಗರವಾಲ ಸತತ 5ನೆಯ ಬಾರಿ ಅಧ್ಯಕ್ಷರಾಗಿ ಲೋಕನಾಥ ಅಗರವಾಲ ಉಪಾಧ್ಯಕ್ಷರಾಗಿ ಬಸವರಾಜ ಗೊಳಸಂಗಿ ಅವರು ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾ ಅಧಿಕಾರಿ ಶ್ರೀಶೈಲ ಹಂಗರಗಿ ಘೋಷಣೆಮಾಡಿದರು.

ನಂತರ ಬ್ಯಾಂಕಿನ ಸಭಾ ಭವನದಲ್ಲಿ ಜರುಗಿದ ಸನ್ಮಾನ ಸಮಾರಂಭದಲ್ಲಿ ಅತಿಥಿ ಸ್ಥಾನವಹಿಸಿ ಮಾತನಾಡಿದ ಸಹಕಾರಿ ಮಹಾಮಂಡಳದ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ ಬ್ಯಾಂಕಿನ ಪ್ರಗತಿಗೆ ಲೋಕನಾಥ ಅಗರವಾಲ ಅವರ ಕೊಡುಗೆ ಅಪಾರವಾಗಿದೆ ನಷ್ಟದಲ್ಲಿ ಇದ್ದ ಬ್ಯಾಂಕನ್ನು ಉನ್ನತ ಮಟ್ಟಕ್ಕೆ ತಂದು ಸುಮಾರು ಮೂರು ದಶಕಗಳಿಂದ ಅವರು ಅಧ್ಯಕ್ಷರಾಗಿ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಬ್ಯಾಂಕಿನ ಪ್ರಗತಿಗೆ ನಿಸ್ವಾರ್ಥವಾಗಿ ದುಡಿಯುತಿದ್ದಾರೆ ಬ್ಯಾಂಕಿನ ಪ್ರಗತಿಗೆ ಲೋಕನಾಥ ಅಗರವಾಲ ಅವರ ಕೊಡುಗೆ ಅಪಾರ ಎಂದು ಹೇಳಿದರು‌.

 ಕರ್ನಾಟಕ ರಾಜ್ಯ ವಿಮಾ ಸಹಕಾರಿ ಮಹಾಮಂಡಳದ ಅಧ್ಯಕ್ಷರಾದ ಶಿವನಗೌಡ ಬಿರಾದಾರ ಮಾತನಾಡಿ ಬ್ಯಾಂಕಿನ ಸಂಸ್ಥಾಪಕರಾದ ಆರ್ ಎಂ ದುಂಬಾಳಿ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಲೋಕನಾಥ ಅಗರವಾಲ ಅವರು ಬ್ಯಾಂಕಿನ ಪ್ರಗತಿಗೆ ಗ್ರಾಹಕರ ಜೊತೆ ಆಡಳಿತ ಮಂಡಳಿಯ ನಿರ್ದೇಶಕರ ಸಲಹೆ ಸೂಚನೆಗಳನ್ನು ತೆಗೆದುಕೊಂಡು ಸಿಬ್ಬಂದಿ ಸಹಕಾರದೊಂದಿಗೆ ರಿಜರ್ವ್ ಬ್ಯಾಂಕಿನ ನಿಯಮಾನುಸಾರವಾಗಿ ಕಳೆದ 25 ವರ್ಷಗಳಿಂದ ಬ್ಯಾಂಕಿನ ಅಧ್ಯಕ್ಷರಾಗಿ ಸುಮಾರು 38 ವರ್ಷದಿಂದ ನಿರ್ದೇಶಕರಾಗಿ ಬ್ಯಾಂಕನ್ನು ಲಾಭದತ್ತ ತೆಗೆದುಕೊಂಡು ಬಂದಿದ್ದಾರೆ ಇಂದು ಅವರು ಮೊತ್ತೊಮ್ಮೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು ಎಲ್ಲ ನಿರ್ದೇಶಕರ ಬ್ಯಾಂಕಿನ ಅಭಿವೃದ್ಧಿಗೆ ಒಗ್ಗಟ್ಟಿನ ಪ್ರದರ್ಶನವಾಗಿ ಎಂದು ಹೇಳಿದರು.

ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಯಾದ ಲೋಕನಾಥ ಅಗರವಾಲ ಮಾತನಾಡಿ ಸುಮಾರು 38 ವರ್ಷಗಳಿಂದ ಬ್ಯಾಂಕಿನ ನಿರ್ದೇಶಕನಾಗಿ 5ನೆಯ ಅವಧಿಗೆ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿರುವುದು ನನಗೆ ಹೆಮ್ಮೆಯ ವಿಷಯ ನನ್ನ ಮೇಲೆ ವಿಶ್ವಾಸವನ್ನಿಟ್ಟು ಬ್ಯಾಂಕಿನ ಎಲ್ಲ ನಿರ್ದೇಶಕರು ಅಧ್ಯಕ್ಷನಾಗಿ ಸೇವೆ ಮಾಡಲು ಸಹಕರಿಸಿದ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಎಲ್ಲ ಸಹಕಾರಿ ಮುಖಂಡರು ನನ್ನ ಮೇಲೆ ನಂಬಿಕೆ ವಿಶ್ವಾಸವನ್ನು ಇಟ್ಟು ಆಯ್ಕೆ ಮಾಡಿದ್ದೀರಿ ಬ್ಯಾಂಕನ್ನು ಮತ್ತಷ್ಟು ಪ್ರಗತಿಯತ್ತ ಕೊಂಡೊಯುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜನತಾ ಬಜಾರ ಅಧ್ಯಕ್ಷ ಬಾಲಚಂದ್ರ ಮುಂಜಾನೆ ನಿರ್ದೇಶಕರಾದ ಶಂಕರಗೌಡ ಬಿರಾದಾರ ಅನಿಲ ದುಂಬಾಳಿ ನಿಲು ನಾಯಕ ಉಮೇಶ ಹಾರಿವಾಳ ಜಗದೀಶ ಕೊಟ್ರಶೆಟ್ಟಿ ಸಿದ್ರಾಮ ಕಿಣಗಿ ಶ್ರೀಶೈಲ ಪತ್ತಾರ ಶಿವಾನಂದ ಪಟ್ಟಣಶೆಟ್ಟಿ ಶ್ರೀಮತಿ ಕಮಲಾ ತಿಪ್ಪನಗೌಡರ ಸುರೇಖಾ ಪಡಶೆಟ್ಟಿ ಬ್ಯಾಂಕಿನ ವ್ಯವಸ್ಥಾಪಕ ಪಿ ವೈ ಬ್ಯಾಕೋಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು ಬ್ಯಾಂಕಿನ ಮಾರಾಟಾಧಿಕಾರಿ ರಾಘವೇಂದ್ರ ಚಿಕ್ಕೊಂಡ ಕಾರ್ಯಕ್ರಮ ನಿರ್ವಹಿಸಿದರು ಬ್ಯಾಂಕಿನ ನಿರ್ದೇಶಕ ಶಂಕರಗೌಡ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು ಎಂ ಜಿ ಆದಿಗೊಂಡ ವಂದಿಸಿದರು

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.