ಉತ್ತಮ ಸಮಾಜ ನಿರ್ಮಿಸೋಣ : ವಿಠ್ಠಲ ಎಮ್. ಗಣಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಬಸವನ ಬಾಗೇವಾಡಿ : ಕಾಯಾ,ವಾಚಾ, ಮನಸಾ ಹೀಗೆ ಶೈಕ್ಷಣಿಕ ಸೇವೆ ಸಲ್ಲಿಸುತ್ತ ರಾಷ್ಟçದ ಅಭಿವೃದ್ಧಿಗೆ ಸಹಕರಿಸುವುದರ ಜೊತೆಗೆ ಉತ್ತಮ ಸಮಾಜ ನಿರ್ಮಿಸೋಣ ಎಂದು ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ವಿಠ್ಠಲ ಎಮ್. ಗಣಿ ಹೇಳಿದರು.
ತಾಲೂಕಿನ ಮನಗೂಳಿ ಪಟ್ಟಣದ ಕ್ರೀಯಾಶೀಲ ಶಿಕ್ಷಕರಾದ ವಿಠ್ಠಲ ಎಮ್. ಗಣಿ ಕೌಟಿಲ್ಯ ಶಿಕ್ಷಣ ಸಂಸ್ಥೆ ಇವರಿಗೆ ಜನಸಿರಿ ಪ್ರತಿಷ್ಠಾನ ಬೆಂಗಳೂರು ವತಿಯಿಂದ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಶಿಕ್ಷಕರ ಹಬ್ಬ-೨೦೨೪ ಸಮಾರಂಭದಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಹಿನ್ನೆಲೆ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿದರು.
ಸುಭಾಸ ಮುತ್ತಗಿ ಮಾತನಾಡಿ ವಿದ್ಯೆ ಎಷ್ಟು ಮುಖ್ಯವೋ ಅಷ್ಟೇ ಸಂಸ್ಕಾರವು ಮುಖ್ಯ ಇಲ್ಲಿಯ ಮಕ್ಕಳಲ್ಲಿ ಸಂಸ್ಕಾರವು ತುಂಬಿ ತುಳುಕುತ್ತಿದೆ ಎಂದರು.
ಶಿಕ್ಷಕ ರಾಜು ಕೊತಿ ಮಾತನಾಡಿ ಇದೇ ಸಂಸ್ಥೆಯಲ್ಲಿ ಕಲಿತು ಇಂದು ಇಲ್ಲೆ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವುದು ನನಗೆ ಹೆಮ್ಮೆಯಿದೆ ಎಂದರು.
ಶ್ರೀಮತಿ ಉಷಾ ಮಾಗಣಗೇರಿ ಮತ್ತು ಶ್ರೀಮತಿ ವಿಜಯಲಕ್ಷ್ಮಿ ಗುಣಕಿ ಆರತಿ ಮಾಡಿದರು. ಕುಮಾರಿ ಶಿವಾನಿ ಹಜೇರಿ, ಕುಮಾರ ಹಾಜಿಸಾಬ ಬಾಗವಾನ ಮತ್ತು ಕುಮಾರ ಬಸವರಾಜ ತಳೇವಾಡ ವಿದ್ಯಾರ್ಥಿಗಳು ಸಂವಿಧಾನದ ಪೀಠಿಕೆಯ ಭಾವಚಿತ್ರವನ್ನು ನೀಡಿ ಅಭಿನಂದಿಸಿದರು. ಶ್ರೀಮತಿ ಅನ್ನಪೂರ್ಣ ಪಾಟೀಲ ಗುರುಮಾತೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ವರ್ಷಾ ಉಕ್ಕಲಿ ಕುಮಾರಿ ಅಲ್ಪತಜಹಾ ಬರಿಇನಾಮದಾರ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಲಕ್ಷಮ ಮಬ್ರುಕರ, ಶಂಕರ ಶಿವಮತ, ಸಂಗಮೇಶ ತೋನಶ್ಯಾಳ, ಮನಸೂರಸಾಬ ಬಾಗವಾನ, ಡಾ. ಸಂಗಮೇಶ ಮಾಗಣಗೇರಿ, ಗುರುನಾಥಗೌಡ ಪಾಟೀಲ, ಶಿವಾನಂದ ವಾಲಿ, ಶಿವಾನಂದ ಮುತ್ತಗಿ ಉಪಸ್ಥಿತರಿದ್ದರು.
ಶ್ರೀಮತಿ ಶೋಭಾ ಅಗಸರ ಮತ್ತು ರಾಮಜಿ ಕರಾಬಿ ಮಕ್ಕಳಿಗೆ ಸಿಹಿ ತಿಂಡಿ ಹಂಚಿದರು. ಶ್ರೀಮತಿ ಪ್ರಿಯಾಂಕ ಹಡಪದ, ಶ್ರೀಮತಿ ನೀಲಮ್ಮ ಹಳ್ಳಿ, ಶ್ರೀಮತಿ ಪೂಜಾ ಜಾನಕರ, ಹಾಡಿನ ಮೂಲಕ ಹಾರೈಸಿದರು.
೯ನೇ ತರಗತಿ ವಿದ್ಯಾರ್ಥಿ ಸೃಷ್ಟಿ ಕಾರಜೋಳ ಪ್ರಾರ್ಥನಾ ಗೀತೆ ಹಾಡಿದರು. ಶಂಕರಗೌಡ ಬಗಲಿ ನಗೆಹನಿ ಮೂಲಕ ಮಕ್ಕಳನ್ನು ನಕ್ಕು ನಲಿಸಿ ವಂದಿಸಿದರು. ಮುಖ್ಯ ಗುರು ಚಂದ್ರಶೇಖರ ಮಾಗಣಗೇರಿ ಸ್ವಾಗತಿಸಿದರು. ಶಿಕ್ಷಕಿ ಸವಿತಾ ಮುಳಸಾವಳಗಿ ನಿರೂಪಿಸಿದರು.