ಬ್ಯಾಂಕ್ ಆಫ್ ಬರೋಡ ಶಾಖೆ ನಿವರಗಿಯಿಂದ ಅಜೀತ ಮುತ್ತಿನ ದಂಪತಿಗೆ ಸನ್ಮಾನ

Oct 4, 2024 - 11:18
 0
ಬ್ಯಾಂಕ್ ಆಫ್ ಬರೋಡ ಶಾಖೆ ನಿವರಗಿಯಿಂದ ಅಜೀತ ಮುತ್ತಿನ ದಂಪತಿಗೆ ಸನ್ಮಾನ
ಬ್ಯಾಂಕ್ ಆಫ್ ಬರೋಡ ಶಾಖೆ ನಿವರಗಿಯಿಂದ ಅಜೀತ ಮುತ್ತಿನ ದಂಪತಿಗೆ ಸನ್ಮಾನ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 


2400 ಜನರಿಗೆ ಉಚಿತ ಕಾಶಿ ಯಾತ್ರೆ ಮಾಡಿಸಿದ ಮುತ್ತಿನ ಸಹೋದರರು

ಚಡಚಣ : ಇಲ್ಲಿನ ಪ್ರಸಿದ್ಧ ಜವಳಿ ವರ್ತಕರಾದ ಅಜಿತ ಮುತ್ತಿನ ಅವರು ಕಳೆದ ವಾರ 2400 ಜನರನ್ನು 1 ವಾರದ ಕಾಲ ತಮ್ಮ ಸ್ವಂತ ಖರ್ಚಿನಲ್ಲಿ ಕಾಶಿ ಯಾತ್ರೆಗೆ ಕರೆದುಕೊಂಡು ಯಶಸ್ವಿಯಾಗಿ ಹೋಗಿ ಬಂದ ಹಿನ್ನಲೆಯಲ್ಲಿ ಮುತ್ತಿನ ಸಹೋದರರ ಈ ಮಹತರ ನಿಸ್ವಾರ್ಥ ಸೇವೆಯನ್ನು ಕೊಂಡಾಡಿದ ಬ್ಯಾಂಕ್ ಆಫ್ ಬರೋಡ ಶಾಖೆ ನಿವರಗಿ ಸಿಬ್ಬಂದಿಗಳು ಅಜಿತ್ ಮುತ್ತಿನ ದಂಪತಿಗೆ ಸನ್ಮಾನಿಸಿ, ಗೌರವಿಸಿದರು.

      ಕಳೆದ ಏಳೆಂಟು ವರ್ಷಗಳಿಂದ ಪ್ರಸಿದ್ಧ ಜವಳಿ ವ್ಯಾಪಾರಸ್ಥರಾದ  ಮುತ್ತಿನ ಸಹೋದರರು ಉಚಿತ ಯಾತ್ರೆ ಕೈಗೊಳ್ಳುತ್ತಿದ್ದು, ಈ ಬಾರಿಯೂ ತಮ್ಮ ಸ್ವಂತ ಆದಾಯದಲ್ಲಿನ ಸುಮಾರು 2 ಕೋಟಿ ರೂ. ವೆಚ್ಚವನ್ನು ಭರಿಸಿ,  ಉಚಿತವಾಗಿ ಒಂದು ವಾರದ ಕಾಶಿ ಯಾತ್ರೆ ಆಯೋಜಿಸಿದ್ದರು. 
     ಈ ಸಂದರ್ಭದಲ್ಲಿ ನಿವರಗಿಯ ಬ್ಯಾಂಕ್ ಆಫ್ ಬರೋಡ ಶಾಖಾ ವ್ಯವಸ್ಥಾಪಕರಾದ ಸಂತೋಷ ಹಿಟ್ನಳ್ಳಿ ಮಾತನಾಡಿ, ಇವರ ಸಮಾಜಮುಖಿ ಸೇವೆ ಎಲ್ಲರಿಗೂ ಮಾದರಿಯಾಗಿದೆ. ಅವರ ಸೇವಾ ಮನೋಭಾವ ಹೀಗೆ ಮುಂದುವರಿಯಲಿ ಎಂದರು.
     ಈ ವೇಳೆ ಬ್ಯಾಂಕಿನ ಸಿಬ್ಬಂದಿ ವಿಜಯಕುಮಾರ್, ಜಗನ್ನಾಥ್, ಸಿದ್ದು ಆಲಮೇಲಕರ ಸೇರಿದಂತೆ
ಯಾತ್ರೆಯಲ್ಲಿ ಭಾಗವಹಿಸಿದ್ದ ಅನೇಕ ಯಾತ್ರಿಕರು ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.