ಬಬಲೇಶ್ವರದಲ್ಲಿ ಸ್ನೇಹ ಪ್ರೀತಿ ನಿಮ್ಮೊಂದಿಗೆ ರೈತರ ಸಮ್ಮಿಳನ

ಬಬಲೇಶ್ವರ : ಪಟ್ಟಣದಲ್ಲಿ ಬಸಗೊಂಡ ಸಂಗಪ್ಪ ಶಿರಮಗೊಂಡ ಅವರ ತೋಟದಲ್ಲಿ ರೈತರ ಸಮ್ಮೇಳನ ಕಾರ್ಯಕ್ರಮವನ್ನು ಕೇಂದ್ರದ ಮಾಜಿ ಸಚಿವ, ಹಾಲಿ ವಿಜಯಪುರ ಲೋಕಸಭಾ ಸದಸ್ಯ ರಮೇಶ ಜಿಗಜಿಣಗಿ ಅವರು ಉದ್ಘಾಟಿಸಿದರು.
ಆಲಗೂರು ಪಂಚಮಸಾಲಿ ಪೀಠದ ಶ್ರೀ ಶ್ರೀ ಜಗದ್ಗುರು ೨೦೨೨ ಡಾ.ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ವ್ಹಿ. ಎನ್ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮವನ್ನು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿದರು.
ಈ ಸಂದರ್ಭದಲ್ಲಿ ನೇತೃತ್ವವನ್ನು ಶ್ರೀ ಸವಿತಾ ಪೀಠ ಮಹಾಸಂಸ್ಥಾನ ಮಠಜಿ ಪ. ಪೂ. ಶ್ರೀ ಸವಿತಾನಂದನಾಥ ಸ್ವಾಮೀಜಿ, ವಿಶ್ವನಾಥ್ ಶಾಸ್ತ್ರೀಜಿ, ನ್ಯಾಯವ್ಯಾದಿಗಳ ಸಂಘದ ಅಧ್ಯಕ್ಷ ಡಿ. ಜಿ. ಬಿರಾದಾರ, ಭಾರತೀಯ ಕಿಸಾನ್ ಸಂಘದ ರಾಜ್ಯಾಧ್ಯಕ್ಷ ಬಿ ಎಮ್ ಕೋಕರೆ, ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಶ ಬಿರಾದಾರ , ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ವಿ. ಎಸ್ ಪಾಟೀಲ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಅಶೋಕಗೌಡ ಮೆಲಾಶಂಕರ, ಟಿಎಪಿಎಂಸಿ ಅಧ್ಯಕ್ಷ ಬಾಪುರಾಯ್ ಯಾದವಾಡ, ಅಶೋಕಗೌಡ ಪಾಟೀಲ, ಕನ್ನೂರ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮಲ್ಲು, ಬಸವರಾಜ ಕುರುವಿನಿಶೆಟ್ಟಿ, ವಿಠ್ಠಲ ಕಿರಸೂರ ಬಸವರಾಜು ಜುಮನಾಳ, ಮಲ್ಲು ಕಲಾದಗಿ, ಚನ್ನಪ್ಪ ಕೊಪ್ಪದ, ಬಿ ಜಿ ಬಿರಾದಾರ, ಶಂಕರಗೌಡ ಬಿರಾದಾರ, ರುದ್ರಗೌಡ ಸೊಲ್ಲಾಪುರ್, ಸುನಿಲ ಹೊಸಮನಿ, ಭೀಮನಗೌಡ ಪಾಟೀಲ (ಕೊಟ್ಯಳ), ಬಸಲಿಂಗಪ್ಪ ಜಂಗಮಶೆಟ್ಟಿ, ಪ್ರಕಾಶ ಶಿರಮಗೊಂಡ, ಕಮಲಾ ಕೊಕಟನೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಈರಣ್ಣ ಶಿರಮಗೊಂಡ ಕಾರ್ಯಕ್ರಮ ನಿರೂಪಿಸಿದರು. ಸತೀಶ ಪತ್ತಾರ ವಂದಿಸಿದರು.