"ಶಿಕ್ಷಣ ನಿರ್ಮಾತೃ" ಪ್ರಶಸ್ತಿಗೆ ಯತ್ನಾಳ ಆಯ್ಕೆ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಸಿಂದಗಿ : ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ರಿಜಿಸ್ಟರ್ ಮೈಸೂರು ಹಾಗೂ ಸೂರ್ಯ ಫೌಂಡೇಶನ್ ಬೆಂಗಳೂರು ಹಾಗೂ ಸ್ಪಾರ್ಕ್ ಅಕಾಡೆಮಿ ಬೆಂಗಳೂರು ಇವರ ಸಹಯೋಗದಲ್ಲಿ ರಾಜ್ಯಮಟ್ಟದಲ್ಲಿ ಉತ್ತಮ ಸಿ ಆರ್ ಪಿ ಬಿಆರ್ ಪಿ ಬಿಐಇಆರ್ ಟಿ ರವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲು ಕೆಲವು ಮಾನದಂಡಗಳ ಆಧಾರದ ಮೇಲೆ ಆನ್ಲೈನ್ ಅರ್ಜಿ ಸ್ವೀಕರಿಸಿ ಅವುಗಳನ್ನು ಮೂರು ಹಂತದಲ್ಲಿ ನಿರ್ಣಯ ಕಮಿಟಿಯಿಂದ ನಿರ್ಣಯಿಸಿ ತಾಲೂಕಿನ ಕ್ಷೇತ್ರ ಶಿಕ್ಷಣ ಇಲಾಖೆ ಎ ಎಸ್ ಯತ್ನಾಳ ಬಿ ಐಆರ್ ಟಿಬಿಆರ್ ಸಿಂದಗಿ ಇವರನ್ನು ಅತ್ಯುತ್ತಮ ಬಿ ಐ ಆರ್ ಟಿ ಶಿಕ್ಷಣ ನಿರ್ಮಾತೃ ಪ್ರಶಸ್ತಿಗೆ ಆಯ್ಕೆಯಾಗಿದ್ದು ಹೆಮ್ಮಯ ವಿಷಯವಾಗಿದೆ ಎಂದು ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಆಯ್ ಎಸ್ ಟಕ್ಕೆ ಹೇಳಿದರು.
ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಲಯದಲ್ಲಿ ಅವರು ಮಾತನಾಡಿ ಬಿ ಐ ಆರ್ ಟಿ
ಶಿಕ್ಷಣ ನಿರ್ಮಾತೃ ಪ್ರಶಸ್ತಿಗೆ ಎ ಎಸ್ ಯತ್ನಾಳ ಅವರ ಆಯ್ಕೆ ಅತ್ಯಂತ ಹರ್ಷದಾಯಕವಾಗಿರುತ್ತದೆ. ಅವರು ನಮ್ಮ ತಾಲೂಕಿನಲ್ಲಿ ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಹಾಗೂ ಅವರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಟ್ಟಾರೆ ಇವರು ಸಮನ್ವಯ ಶಿಕ್ಷಣದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿರುವುದು ಗಮನಾರ್ಹವಾಗಿದೆ. ಹೀಗೆ ಇವರ ಕಾರ್ಯ ಮುಂದುವರಿಲು ನಮ್ಮ ಎಲ್ಲರ ಸಹಕಾರವಿರುತ್ತದೆ ಎಂದರು.
"ಶಿಕ್ಷಣ ನಿರ್ಮಾತೃ" ಪ್ರಶಸ್ತಿಗೆ ಭಾಜನರಾದ ಎ.ಎಸ್. ಯತ್ನಾಳ ಮಾತನಾಡಿ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಹಾಗೂ ಸೂರ್ಯ ಫೌಂಡೇಶನ್ ಸ್ಪಾರ್ಕ್ಅಕಾಡೆಮಿ ಬೆಂಗಳೂರು ಇವರು ರಾಜ್ಯಮಟ್ಟದ ಅತ್ಯುತ್ತಮ ಬಿ.ಐ.ಇ.ಆರ್.ಟಿ. "ಶಿಕ್ಷಣ ನಿರ್ಮಾತೃ" ಪ್ರಶಸ್ತಿಗೆ ಆಯ್ಕೆ ಮಾಡಿರುವ ಸಮಿತಿಗೆ ಧನ್ಯವಾದಗಳು ತಿಳಿಸಿದರು.
"ಶಿಕ್ಷಣ ನಿರ್ಮಾತೃ" ಪ್ರಶಸ್ತಿಗೆ ಎ.ಎಸ್.ಯತ್ನಾಳ ಅವರ ಆಯ್ಕೆ ತುಂಬಾ ಸಂತೋಷ ನೀಡಿದೆ ಎಂದು ಶಿಕ್ಷಕ ಮಕ್ಕಳ ಸಾಹಿತಿ ಬಸವರಾಜ ಅಗಸರ ತಿಳಿಸಿದರು.