ವಿಜಯಪುರದ ಹೆಮ್ಮೆಯ ಪತ್ರಿಕೆ ಅಪರಾಧಕ್ಕೆ ಸವಾಲು : ತಗಡೂರ

Mar 28, 2025 - 09:48
 0
ವಿಜಯಪುರದ ಹೆಮ್ಮೆಯ ಪತ್ರಿಕೆ ಅಪರಾಧಕ್ಕೆ ಸವಾಲು : ತಗಡೂರ

ಬೆಂಗಳೂರು : ಹಿರಿಯ ಪತ್ರಿಕೋದ್ಯಮಿ ಟಿ ಕೆ ಮಲಗೊಂಡ ಸಂಪಾದಕತ್ವದ ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ ಹೊರತಂದಿರುವ "ಯುಗಾದಿ ವಿಶೇಷಾಂಕ -೨೦೨೫" ವನ್ನು ಗುರುವಾರ ವಿಧಾನಸೌಧದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರು ಅಧಿಕೃತವಾಗಿ ಬಿಡುಗೊಳಿಸಿದರು.                

ನಂತರ ಮಾತನಾಡಿದ ಅವರು ಅಪರಾಧಕ್ಕೆ ಸವಾಲು ದಿನಪತ್ರಿಕೆ ಸದಾ ಮುಖಪುಟವನ್ನು ಬಹಳ ಅರ್ಥಪೂರ್ಣವಾಗಿ ಪ್ರಕಟಿಸುತ್ತಾ ಮಾದರಿಯಾಗಿದೆ. ಇದು ವಿಜಯಪುರ ಜಿಲ್ಲೆಯಲ್ಲಿ ಸ್ಥಳೀಯ ಸುದ್ದಿಗಳನ್ನು ಅರ್ಥಗರ್ಭಿತವಾಗಿ ಪ್ರಕಟಿಸುತ್ತಾ ವಿಜಯಪುರದ ಹೆಮ್ಮೆಯ ಪತ್ರಿಕೆಯಾಗಿದೆ ಎಂದರು.  ನಾಡಿನ ದಿಗ್ಗಜರ ಲೇಖನಗಳು, ಯುವ ಲೇಖಕರ ಕಥೆ ಕವನಗಳನ್ನು ಒಳಗೊಂಡ ಯುಗಾದಿ ವಿಶೇಷಾಂಕವು ಸಂಗ್ರಹ ಯೋಗ್ಯವಾಗಿದೆ ಎಂದರು.        

ಈ ಸಂದರ್ಭದಲ್ಲಿ ಸಂಪಾದಕ ಟಿ ಕೆ ಮಲಗೊಂಡ ಪತ್ರಕರ್ತ ಗುರುರಾಜ ಹೂಗಾರ ಇದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.