ಯುಗಾದಿ ವಿಶೇಷಾಂಕ ಬಹಳ ಆಕರ್ಷಕವಾಗಿದೆ : ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಹನಾ

ಬೆಂಗಳೂರು : ಹಿರಿಯ ಪತ್ರಿಕೋದ್ಯಮಿ ಟಿ ಕೆ ಮಲಗೊಂಡ ಸಂಪಾದಕತ್ವದ ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ ಹೊರತಂದಿರುವ "ಯುಗಾದಿ ವಿಶೇಷಾಂಕ -೨೦೨೫" ವನ್ನು ಗುರುವಾರ ಮಾಧ್ಯಮ ಅಕಾಡೆಮಿ ಕಛೇರಿಯಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಹನಾ ಎಮ್ ಅವರು ಅಧಿಕೃತವಾಗಿ ಬಿಡುಗೊಳಿಸಿದರು.
ನಂತರ ಮಾತನಾಡಿದ ಅವರು ಯುಗಾದಿ ವಿಶೇಷಾಂಕ ಬಹಳ ಆಕರ್ಷಕವಾಗಿದೆ. ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ಅವರ ಮುಖಪುಟವುಳ್ಳ ಈ ಸಂಚಿಕೆ ಮೊದಲ ನೋಟಕ್ಕೆ ಸೆಳೆಯುತ್ತಿದೆ. ಓದುಗರಿಗೂ ಇದು ಇಷ್ಟವಾಗಲಿದೆ ಎಂದು ಶುಭ ಹಾರೈಸಿದರು.
ಈ ಬಾರಿಯ ವಿಶೇಷ ಸಂಚಿಕೆ ವೈವಿಧ್ಯತೆಯಿಂದ ಕೂಡಿದ್ದು, ಸಂಭ್ರಮದ ಓದಿಗೆ ಸಮೃದ್ಧ ಓದನ್ನು ನೀಡಲಿದೆ. ನಾಡಿನ ವಿವಿಧ ಕ್ಷೇತ್ರಗಳ ಗಣ್ಯರ ಸತ್ವಪೂರ್ಣ ಬರಹಗಳು ಈ ಸಂಚಿಕೆಯಲ್ಲಿವೆ.
ವಿಶೇಷಾಂಕ ಬಹಳ ಮುದ್ದಾಗಿ ಕಾಣುತ್ತಿದೆ. ಉತ್ಕೃಷ್ಟವಾಗಿದೆ. ಮುಖಪುಟ ಚೆನ್ನಾಗಿ ಮೂಡಿ ಬಂದಿದೆ. ಇದು ಕನ್ನಡಿಗರ ಮನೆ ಮನ ತಲುಪಲಿ ಎಂದರು.
ಈ ಸಂದರ್ಭದಲ್ಲಿ ಸಂಪಾದಕ ಟಿ ಕೆ ಮಲಗೊಂಡ ಪತ್ರಕರ್ತ ಗುರುರಾಜ ಹೂಗಾರ ಇದ್ದರು.