ಅಪರಾಧಕ್ಕೆ ಸವಾಲು ಯುಗಾದಿ ವಿಶೇಷಾಂಕ ಬಿಡುಗಡೆಗೊಳಿಸಿದ ಕಾನೂನು ಸಚಿವ ಎಚ್.ಕೆ.ಪಾಟೀಲ್

ಬೆಂಗಳೂರು : ಹಿರಿಯ ಪತ್ರಿಕೋದ್ಯಮಿ ಟಿ ಕೆ ಮಲಗೊಂಡ ಸಂಪಾದಕತ್ವದ ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ ಹೊರತಂದಿರುವ "ಯುಗಾದಿ ವಿಶೇಷಾಂಕ -೨೦೨೫" ವನ್ನು ಗುರುವಾರ ವಿಧಾನಸೌಧದ ಬ್ಲಾಂಕೇಟ ಹಾಲ್‌ನಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು ಅಧಿಕೃತವಾಗಿ ಬಿಡುಗೊಳಿಸಿದರು.
ನಂತರ ಮಾತನಾಡಿದ ಸಚಿವರು ಅಪರಾಧಕ್ಕೆ ಸವಾಲು ದಿನಪತ್ರಿಕೆ ಸುದ್ದಿ ಹಾಗೂ ಲೇಖನಗಳ ಸಾಹಿತ್ಯದ ನಿರೂಪಣೆ ಮಾದರಿಯಾಗಿದೆ. ಇದೇ ಕಾರಣಕ್ಕೆ ಪತ್ರಿಕೆ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಭೀಮಾತೀರದ ಭಾಗದಲ್ಲೂ ಮನೆ ಮಾತಾಗಿರುವುದು ಪತ್ರಿಕೆಯ ಸಾಮಾಜಿಕ ಕಾಳಜಿ ನಿರೂಪಿಸುತ್ತದೆ. ಬಸವನಾಡಿಗೆ ತನ್ನದೇಯಾದ ಕೊಡುಗೆ ಈ ಪತ್ರಿಕೆ ನೀಡುತ್ತಿದೆ ಎಂದರು.
ಯುಗಾದಿ ವಿಶೇಷಾಂಕ ವೈವಿಧ್ಯಮಯ ಲೇಖನಗಳುಲ್ಲ ಅದರಲ್ಲೂ ಸುಂದರ ಹಾಗೂ ಅರ್ಥಪೂರ್ಣ ಮುಖಪುಟ ಹೊಂದಿದೆ. ಮುಖಪುಟ ತಮಗೆ ಬಹಳ ಹಿಡಿಸಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸಂಪಾದಕ ಟಿ ಕೆ ಮಲಗೊಂಡ ಪತ್ರಕರ್ತ ಗುರುರಾಜ ಹೂಗಾರ ಇದ್ದರು.