ಅಪರಾಧಕ್ಕೆ ಸವಾಲು ಯುಗಾದಿ ವಿಶೇಷಾಂಕ ಬಿಡುಗಡೆ : ಪತ್ರಿಕಾ ಬಳಗಕ್ಕೆ ನಾನು ಧನ್ಯ : ಡಾ.ಉಪಾಸೆ

Mar 28, 2025 - 09:38
 0
ಅಪರಾಧಕ್ಕೆ ಸವಾಲು ಯುಗಾದಿ ವಿಶೇಷಾಂಕ ಬಿಡುಗಡೆ : ಪತ್ರಿಕಾ ಬಳಗಕ್ಕೆ ನಾನು ಧನ್ಯ : ಡಾ.ಉಪಾಸೆ
ಬೆಂಗಳೂರು : ಹಿರಿಯ ಪತ್ರಿಕೋದ್ಯಮಿ ಟಿ ಕೆ ಮಲಗೊಂಡ ಸಂಪಾದಕತ್ವದ ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ ಹೊರತಂದಿರುವ "ಯುಗಾದಿ ವಿಶೇಷಾಂಕ -೨೦೨೫" ವನ್ನು ಗುರುವಾರ ವಿಧಾನಸೌಧದಲ್ಲಿ ಕಾರ್ಮಿಕ ಇಲಾಖೆಯ ಜಂಟಿ ಕಾರ್ಯದರ್ಶಿ, ಕೆಎಎಸ್ ಅಧಿಕಾರಿ ಚಲನಚಿತ್ರ ನಟ ಡಾ.ಸಂಗಮೇಶ ಉಪಾಸೆ ಅವರು  ಅಧಿಕೃತವಾಗಿ ಬಿಡುಗೊಳಿಸಿದರು.
ನಂತರ ಮಾತನಾಡಿದ ಅವರು ವಿಶೇಷಾಂಕದ ಮುಖಪುಟದಲ್ಲಿ ನನ್ನ ಭಾವಚಿತ್ರವಿದ್ದು, ನನ್ನ ಜೀವನದ ಸಾಧನೆಯ ಸಮಗ್ರ ಮಾಹಿತಿ ಲೇಖನ ರೂಪದಲ್ಲಿ ಅಚ್ಚುಕಟ್ಟಾಗಿ ಮುದ್ರಣಗೊಂಡಿದೆ. ಪತ್ರಿಕಾ ಬಳಗಕ್ಕೆ ನಾನು ಧನ್ಯ ಎಂದು ಖುಷಿ ಹಂಚಿಕೊAಡರು. ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ ಭಾಗದ ಪ್ರತಿ ಮನೆ ಮನವನ್ನು ಮುಟ್ಟುವ ಪತ್ರಿಕೆಯಾಗಿದೆ. ಬೀಡಿ ಕಟ್ಟುವುದರಿಂದ ಹಿಡಿದು ಅಧಿಕಾರಿ ವರ್ಗದವರೆಗಿನವರು ಓದುವ ಪತ್ರಿಕೆಯಾಗಿ ಬೆಳೆದು ಬಂದಿದೆ ಎಂದು ಅವರು ಹೇಳಿದರು. ೧೯೯೫ರಲ್ಲಿ ಈ ಪತ್ರಿಕೆಯನ್ನು ಓದಲು ಜನರು ಕಾದು ನಿಲ್ಲುತ್ತಿದ್ದರು. ಪತ್ರಿಕೆಯಲ್ಲಿ ವೈವಿಧ್ಯಮಯ ಸುದ್ದಿಗಳು ಪ್ರಕಟಗೊಳ್ಳುತ್ತಿದ್ದು, ಇದು ಆರೋಗ್ಯಕರ ಪತ್ರಿಕೋದ್ಯಮಕ್ಕೆ ಮಾದರಿಯಾಗಿದೆ. ಇದರ ಜೊತೆಗೆ ಅಪರಾಧ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದೆ ಈ ಪತ್ರಿಕೆ ಎಂದರು.
ಕಳೆದ ನಾಲ್ಕು ದಶಕಗಳಿಂದ ಈ ಪತ್ರಿಕೆ ನಾನು ನೋಡುತ್ತಿದ್ದೇನೆ. ಪತ್ರಿಕೆಯಲ್ಲಿ ಸ್ಥಳಿಯ ವರದಿಗಳ ಜೊತೆಗೆ ಹೊಸತನವಿದೆ. ಗ್ರಾಮೀಣ ಪತ್ರಿಕೋದ್ಯಮ ಕ್ಷೇತ್ರಕ್ಕೆ, ವಿಜಯಪುರ ಜಿಲ್ಲೆಗೆ ಅಪರಾಧಕ್ಕೆ ಸವಾಲು ಪತ್ರಿಕೆ ಮಾದರಿಯಾಗಿದೆ ಎಂದರು. ಪತ್ರಿಕೆ ಹಾಗೂ ವೆಬ್ ಸೈಟ್ ಹಾಗೂ ಈ ಪೇಪರ್ ನಲ್ಲಿ ಬರುವ ವರದಿಗಳು ವಸ್ತುನಿಷ್ಠವಾಗಿದ್ದು, ಪ್ರತಿದಿನ ಬೆಳಿಗ್ಗೆ ಎದ್ದು ಮೊಬೈಲ್ ನಲ್ಲಿ ಸುದ್ದಿ ಓದುತ್ತೇನೆ ಎಂದರು.
ಯುಗಾದಿ ವಿಶೇಷಾಂಕದ ಮುಖಪುಟದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ಕಾರ್ಮಿಕ ಇಲಾಖೆಯ ಜಂಟಿ ಕಾರ್ಯದರ್ಶಿ ಡಾ.ಸಂಗಮೇಶ ಉಪಾಸೆ, ಏಷ್ಯಾನೇಟ್ ಸುವರ್ಣನ್ಯೂಸ್ ನಿರೂಪಕಿ ಭಾವನಾ ನಾಗಯ್ಯ, ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ ಅವರ ಭಾವಚಿತ್ರಗಳಿವೆ.
ಈ ಸಂದರ್ಭದಲ್ಲಿ ಸಂಪಾದಕ ಟಿ ಕೆ ಮಲಗೊಂಡ ಪತ್ರಕರ್ತ ಗುರುರಾಜ ಹೂಗಾರ ಇದ್ದರು.
Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.