ಅಪರಾಧಕ್ಕೆ ಸವಾಲು ಯುಗಾದಿ ವಿಶೇಷಾಂಕ ಬಿಡುಗಡೆಗೊಳಿಸಿದ ಸಿಎಂ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್

Mar 28, 2025 - 09:30
 0
ಅಪರಾಧಕ್ಕೆ ಸವಾಲು ಯುಗಾದಿ ವಿಶೇಷಾಂಕ ಬಿಡುಗಡೆಗೊಳಿಸಿದ ಸಿಎಂ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್
ಬೆಂಗಳೂರು : ಹಿರಿಯ ಪತ್ರಿಕೋದ್ಯಮಿ ಟಿ ಕೆ ಮಲಗೊಂಡ ಸಂಪಾದಕತ್ವದ ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ ಹೊರತಂದಿರುವ "ಯುಗಾದಿ ವಿಶೇಷಾಂಕ -೨೦೨೫" ವನ್ನು ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಅವರು ಅಧಿಕೃತವಾಗಿ ಬಿಡುಗೊಳಿಸಿದರು.
ನಂತರ ವಿಶೇಷಾಂಕ ಓದಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಅವರು ವಿಶೇಷಾಂಕ ಮೂಡಿಬಂದ ರೀತಿ ಮತ್ತು ಕಲರ್ ಫುಲ್ ವಿನ್ಯಾಸಕ್ಕೆ ಮಾರುಹೋದರು. ಅಷ್ಟೇ ಅಲ್ಲದೆ ಈ ವರ್ಷದ ವಿಶೇಷಾಂಕದ ಸಾಧಕರ ಲೇಖನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷವಾಗಿ ಭೀಮಾತೀರದಲ್ಲಿ ಕೆ ವಿ

 ಪ್ರಭಾಕರ್ ಎನ್ನುವ ಶಿರ್ಷಿಕೆ ನೋಡಿ ಸಂತಸ ಪಟ್ಟು, ತಾವು ಬರೆದ ಹಳೆಯ ಸಮಗ್ರ ಲೇಖನಗಳನ್ನು ಸಂಪಾದಕ ಟಿ ಕೆ ಮಲಗೊಂಡರ ಮುಂದೆ ಸ್ಮರಿಸಿದರು.

ಸಾಧಕರ ಲೇಖನದಲ್ಲಿ ಅಕ್ಷರಕ್ಕಿಳಿಸಿದ ಸಾಧಕರ ಜೀವನ ಚರಿತ್ರೆಯ ಮಾಹಿತಿ ರೋಚಕವಾಗಿವೆ. ಯುಗಾದಿ ಹಬ್ಬದ ಕುರಿತ ಲೇಖನಗಳು, ಹಬ್ಬದಾಚರಣೆ ಸಂಪ್ರದಾಯದ ಬಗೆಗಿನ ವಿಶೇಷ ಬರಹಗಳು, ಇನ್ನಿತ ಲೇಖನಗಳು ಆಕರ್ಷಕವಾಗಿವೆ ಎಂದರು. ಒಟ್ಟಾರೆ ಇಡೀ ವಿಶೇಷಾಂಕದ ಸಂಗ್ರಹ ಯೋಗ್ಯವಾಗಿದೆ.
ಕಳೆದ ನಾಲ್ಕು ದಶಕಗಳಿಂದ ಅಪರಾಧಕ್ಕೆ ಸವಾಲು ಪತ್ರಿಕೆ ಹತ್ತಿರದಿಂದ ಕಂಡಿದ್ದೇನೆ. ಈ ಪತ್ರಿಕೆ ಉತ್ತರ ಕರ್ನಾಟಕದ ಭೀಮಾತೀರದ ಭಾಗದಲ್ಲಿ ಸಾಕಷ್ಟು ವಿಶಿಷ್ಟವಾದ ಸೇವೆ ಮಾಡುತ್ತಿದೆ. ಜನರ ಭಾವನೆ, ಬದುಕಿನ ಅವಶ್ಯಕತೆ ಹಾಗೂ ನಾಗರಿಕತೆಯ ದೂರದೃಷ್ಟಿಯ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಎಲ್ಲಾ ವಯಸ್ಸಿನವರು, ಚಿಂತಕರು, ಆಲೋಚನಾಶೀಲರ ಲೇಖನಗಳನ್ನು ಒಟ್ಟುಗೂಡಿಸಿ ಹಬ್ಬದ ಸಮಯದಲ್ಲಿ ವಿಶೇಷ ಸಂಚಿಕೆ ಹೊರತಂದಿದೆ. ಮುಂದಿನ ದಿನಗಳಲ್ಲಿ ವಿಚಾರವಂತರು, ಆಲೋಚನಾ ಶೀಲರಿಗೆ ಪ್ರೇರಣಾದಾಯಕವಾಗಲಿ. ಜಿಲ್ಲಾಮಟ್ಟದ ಪತ್ರಿಕೆ ರಾಜ್ಯ ಮಟ್ಟದಲ್ಲಿ ಹೆಸರು ವಾಸಿಯಾಗಲಿ ಎಂದು ಪತ್ರಿಕೆಗೆ ಶುಭ ಹಾರೈಸಿದರು. ಯುಗಾದಿ ವಿಶೇಷಾಂಕದ ಮುಖಪುಟದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ಕಾರ್ಮಿಕ ಇಲಾಖೆಯ ಜಂಟಿ ಕಾರ್ಯದರ್ಶಿ ಡಾ.ಸಂಗಮೇಶ ಉಪಾಸೆ, ಏಷ್ಯಾನೇಟ್ ಸುವರ್ಣನ್ಯೂಸ್ ನಿರೂಪಕಿ ಭಾವನಾ ನಾಗಯ್ಯ, ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ ಅವರ ಭಾವಚಿತ್ರಗಳಿವೆ.
ಈ ಸಂದರ್ಭದಲ್ಲಿ ಪತ್ರಕರ್ತ ಗುರುರಾಜ ಹೂಗಾರ ಸೇರಿದಂತೆ ಇನ್ನಿತರರು ಇದ್ದರು.
Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.