ಅಪರಾಧಕ್ಕೆ ಸವಾಲು ಯುಗಾದಿ ವಿಶೇಷಾಂಕ ಬಿಡುಗಡೆ ಮೆಚ್ಚುಗೆ ವ್ಯಕ್ತಪಡಿಸಿದ ಅಜೀತ್ ಹನಮಕ್ಕನವರ

Mar 28, 2025 - 09:34
 0
ಅಪರಾಧಕ್ಕೆ ಸವಾಲು ಯುಗಾದಿ ವಿಶೇಷಾಂಕ ಬಿಡುಗಡೆ ಮೆಚ್ಚುಗೆ ವ್ಯಕ್ತಪಡಿಸಿದ ಅಜೀತ್ ಹನಮಕ್ಕನವರ

ಬೆಂಗಳೂರು : ಹಿರಿಯ ಪತ್ರಿಕೋದ್ಯಮಿ ಟಿ ಕೆ ಮಲಗೊಂಡ ಸಂಪಾದಕತ್ವದ ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ ಹೊರತಂದಿರುವ "ಯುಗಾದಿ ವಿಶೇಷಾಂಕ -೨೦೨೫" ವನ್ನು ಗುರುವಾರ ಏಷ್ಯಾನೇಟ್ ಸುವರ್ಣನ್ಯೂಸ್ ಸಂಪಾದಕ ಅಜೀತ್ ಹನಮಕ್ಕನವರ ಹಾಗೂ ರಾಜಕೀಯ ವಿಶ್ಲೇಷಕ ಪ್ರಶಾಂತ ನಾತು ಅವರು ಕಚೇರಿಯಲ್ಲಿ ಅಧಿಕೃತವಾಗಿ ಬಿಡುಗೊಳಿಸಿದರು.

ನಂತರ ವಿಶೇಷಾಂಕ ಓದಿದ ಮುಖ್ಯಮಂತ್ರಿಗಳ ಸಂಪಾದಕ ಅಜೀತ್ ಹನಮಕ್ಕನವರ ಅವರು ವಿಶೇಷಾಂಕದ ಮುಖಪುಟದಲ್ಲಿ ಕಾಣಿಸಿಕೊಳ್ಳುವುದು ಮಹತ್ವದ ಸಂಗತಿ. ನಮ್ಮ ಚಾನೆಲ್ ನ ನಿರೂಪಕಿ ಭಾವನಾ ನಾಗಯ್ಯ ಅವರು ಮುಖಪುಟದಲ್ಲಿ ಕಾಣಿಸಿಕೊಂಡಿದ್ದು ನನಗೆ ಖುಷಿ ನೀಡಿದೆ ಎಂದರು.                     

ಯುಗಾದಿ ವಿಶೇಷಾಂಕ ಹಲವು ವಿಶೇಷಗಳಿಂದ ಕೂಡಿದ್ದು, ಹಬ್ಬದ ಸಂಭ್ರಮದ ವೇಳೆ ವೈವಿಧ್ಯಮಯ ಓದನ್ನು ನೀಡಿದೆ. ವಿವಿಧ ಕ್ಷೇತ್ರದ ಸಾಧಕರ ಸತ್ವಪೂರ್ಣ ಬರಹಗಳು ವಿಶೇಷಾಂಕದಲ್ಲಿದ್ದು ತುಂಬಾ ಅಚ್ಚುಕಟ್ಟಾಗಿ ವಿಶೇಷಾಂಕ ತಂದಿದ್ದಾರೆ ಎಂದು ಶ್ಲಾಘಿಸಿದರು.        ಭಾವನಾ ನಾಗಯ್ಯ ಬಿಡುಗಡೆಗೊಳಿಸಬೇಕಾದ ಸಂಚಿಕೆಯನ್ನು ಅವರ ಆದಿಯಾಗಿ ಸಂಪಾದಕ ಅಜೀತ್ ಹನಮಕ್ಕನವರ ಹಾಗೂ ಪ್ರಶಾಂತ್ ನಾತು ಬಿಡುಗಡೆಗೊಳಿಸಿದರು.                

ಯುಗಾದಿ ವಿಶೇಷಾಂಕದ ಮುಖಪುಟದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ಕಾರ್ಮಿಕ ಇಲಾಖೆಯ ಜಂಟಿ ಕಾರ್ಯದರ್ಶಿ ಡಾ.ಸಂಗಮೇಶ ಉಪಾಸೆ, ಏಷ್ಯಾನೇಟ್ ಸುವರ್ಣನ್ಯೂಸ್ ನಿರೂಪಕಿ ಭಾವನಾ ನಾಗಯ್ಯ, ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ ಅವರ ಭಾವಚಿತ್ರಗಳಿವೆ.            

ಈ ಸಂದರ್ಭದಲ್ಲಿ ಪತ್ರಿಕೆಯ ಸಂಪಾದಕ ಟಿ ಕೆ ಮಲಗೊಂಡ, ಸುವರ್ಣನ್ಯೂಸ್ ರಾಜಕೀಯ ವಿಶ್ಲೇಷಕ ಪ್ರಶಾಂತ ನಾತು, ಪತ್ರಕರ್ತ ಗುರುರಾಜ ಹೂಗಾರ ಇದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.