ಭರವಸೆಯ ನಿರ್ದೇಶಕ ಅಣ್ಣಾಶೇಠ ಇಂಡಿ ಹುಡ್ಗನ ಸಿನಿಮಾ ನ.28 ಕ್ಕೆ ಬಿಡುಗಡೆ
ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಬಲಾದಿ ಗ್ರಾಮದ ಪ್ರತಿಭೆಯ ಚೊಚ್ಚಲ ಸಿನಿಮಾ "ಅನಾಥ" ಬಿಡುಗಡೆಗೆ ಸಜ್ಜಾಗಿದೆ.
ಹೌದು ಭರವಸೆಯ ನಿರ್ದೇಶಕ ಅಣ್ಣಾಶೇಠ್ ಕೆ. ಎ ಅವರು "ಅನಾಥ" ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದೆ ನ.28 ಕ್ಕೆ ರಾಜ್ಯಾದ್ಯಂತ ಈ ಚಲನಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.
ತಮ್ಮ ವೃತ್ತಿ ಜೀವನದ ಪ್ರಥಮ ಚಿತ್ರ ಇದಾಗಿದ್ದು. ಉನ್ನತ ವ್ಯಾಸಂಗ (B.Sc) ಅರ್ಧಕ್ಕೆ ನಿಲ್ಲಿಸಿ ಬಣ್ಣದ ಬದುಕಿನ ಕನಸು ಕಂಡು ಬೆಂಗಳೂರಿಗೆ ತೆರಳಿ 'ಡಿಪ್ಲೋಮ ಇನ್ ಡೈರೆಕ್ಷನ್' ಕೋರ್ಸ್ ನ್ನು ಪೂರ್ತಿಗೊಳಿಸಿ ಅವಕಾಶಗಳಿಗಾಗಿ ಕಾಯುತ್ತಿದ್ದ ಈ ಹುಡುಗ ಸಿನಿಮಾ ರಂಗವನ್ನ ಅರ್ಥೈಸಿಕೊಂಡಿದ್ದ. ಅಲ್ಲಿಂದ ತುಂಬಾ ಕಷ್ಟದ ದಿನಗಳು ಆರಂಭವಾದವು, ಲೈಟ್ ಬಾಯ್ ಆಗಿ, ಕ್ಯಾಮೆರಾ ಅಸಿಸ್ಟೆಂಟ್ ಆಗಿ, ಪ್ರೊಡಕ್ಷನ್ ಇಂಚಾರ್ಜ್ ಆಗಿ, ಹಲವಾರು ಚಿತ್ರಗಳಲ್ಲಿ ಕಾರ್ಯ ನಿರ್ವಹಿಸಿದ ನಂತರ ಒಂದೇ ಸಲ 2 ಚಿತ್ರಗಳಿಗೆ ನಿರ್ದೇಶನ ಮಾಡುವ ಅವಕಾಶ ಬಂದೋದಗಿತು.
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರೊಬ್ಬರು ಅವಕಾಶ ನೀಡಿದ್ದರಿಂದ ನಾನು ಇಲ್ಲಿಯವರೆಗೆ ಗುರುತಿಸಿಕೊಳ್ಳಲು ಅವಕಾಶ ಸಿಕ್ಕಿದೆ. ಕುಟುಂಬದಲ್ಲಿ ಚಿತ್ರರಂಗದಲ್ಲಿ ಬೇಡ ವಿದ್ಯಾಭ್ಯಾಸ ಮಾಡು ಎಂದು ಹೇಳಿದರು. ಆದರೆ ನಾನು ಕುಟುಂಬದವರ ವಿರೋಧದ ನಡುವೆಯೂ ಚಿತ್ರ ನಿರ್ದೇಶಿಸಲು ಆರಂಭಿಸಿದೆ. ನಂತರ ನನಗೆ ಚಿತ್ರರಂಗದಲ್ಲಿ ಅವಕಾಶ ಸಿಕ್ಕಿತು , ಈಗ ಮನೆಯಲ್ಲಿ ಪೋಷಕರು ಸಿನಿಮಾ ಕೆಲಸಗಳಿಗೆ ಸಹಕಾರ ನೀಡುತ್ತಿದ್ದಾರೆ.
ಆರ್ಥಿಕವಾಗಿ ನಾನು ಹಿಂದೆ ಇದ್ದರು, ನನ್ನ ಪ್ರತಿಭೆಯಿಂದ ಇಂದಲ್ಲ ನಾಳೆ ದೊಡ್ಡಮಟ್ಟದಲ್ಲಿ ಸಾಧನೆ ಮಾಡುತ್ತೇನೆ ಎನ್ನುತ್ತಾರೆ ಅಣ್ಣಾಶೇಠ.
ತನ್ನ ಚಿಕ್ಕ ವಯಸ್ಸಿನಲ್ಲಿ ಕಂಡ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ದಾಪುಗಾಲು ಇಡುತ್ತಿರುವ ಅಣ್ಣಾಶೇಠಗೆ ಇನ್ನಷ್ಟು ಅವಕಾಶಗಳು ಹುಡುಕಿಕೊಂಡು ಬರಲಿ, ಅನಾಥ ಚಲನಚಿತ್ರ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಯಶಸ್ವಿಯಾಗಲಿ ಎಂದು ನಮ್ಮ ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ ಬಳಗದಿಂದ ಶುಭ ಹಾರೈಕೆಗಳು.
ಅನಾಥ ಚಲನಚಿತ್ರ:
ಹೌದು ಕನ್ನಡದಲ್ಲಿ 'ಅನಾಥ' ತೆಲುಗಿನಲ್ಲಿ 'ಅನಾಧ ' ಎಂಬ ಶೀರ್ಷಿಕೆ ಅಡಿಯಲ್ಲಿ ಗೊನೇಂದ್ರ ಫಿಲಂಸ್ ಸಂಸ್ಥೆಯವರು ಈ ಚಿತ್ರವನ್ನು ನಿರ್ಮಿಸಿದ್ದು, ತೆಲುಗಿನ (ಕನ್ನಡ ಮೂಲದ ) ಸಂಗೀತ ನಿರ್ದೇಶಕ ಶ್ರೀ ಇಂದ್ರ ನಾಯಕನಾಗಿ ಅಭಿನಯಿಸಿದ್ದಾರೆ.
ಡಿವೈನ್ ಸ್ಟಾರ್ ಶ್ರೀ ಇಂದ್ರಗೆ ಜೋಡಿಯಾಗಿ ನಿಖಿತಾ ಸ್ವಾಮಿ ಅಭಿನಯಿಸಿದ್ದಾರೆ. ಬಾಂಬೆ ಮೂಲದ ಮುಗ್ಧ ಚೆಲುವೆ ಯುಕ್ತ ಪೆರ್ವಿ 2ನೇ ನಾಯಕಿಯಾಗಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಕನ್ನಡದ ಹೆಸರಾಂತ ಖಳನಟ ಶೋಭರಾಜ್,ಪೋಷಕ ಪಾತ್ರದಲ್ಲಿ ಸಂಗೀತಾ, ಹೊನ್ನಾವಳಿ ಕೃಷ್ಣ, ಬಾಯ್ ಬಡ್ಕಿ ಸಿದ್ದು, ಹಾಗೂ ಜಿಮ್ ರವಿ ಸಹೋದರ ಜಿಮ್ ಹರೀಶ್, ಇನ್ನು ಹೆಸರಾಂತ ನಟ -ನಟಿಯರ ತಾರಾಬಳಗವನ್ನೇ ಒಳಗೊಂಡಿದೆ ಚಿತ್ರತಂಡ.
ವೀರೇಶ್ ಕುಮಾರ್ ಅವರ ಛಾಯಾಗ್ರಾಹಣ, ರಮೇಶ್ ರಂಜಿತ್ ಅವರ ಸಾಹಸ, ಬಾಲ ಮಾಸ್ಟರ್ ಅವರ ನೃತ್ಯ, ಮಾರುತಿ ರಾವ್ ಅವರ ಸಂಕಲನ, ಎಲ್ ಎನ್ ಸೂರ್ಯ ರವರ ಸಾಹಿತ್ಯ, ಹಾಗೂ ಶಿವಕುಮಾರ್ ಶೆಟ್ಟಿ ಅವರ ಸಂಭಾಷಣೆ ಚಿತ್ರಕ್ಕಿದ್ದು ವಿಜಯಪುರ ಮೂಲದ ಅಣ್ಣಾಶೇಠ ಈ ಸಿನಿಮಾ ನಿರ್ದೇಶಿಸಿದ್ದಾರೆ.
ಬಾಕ್ಸ್:
ಜಾತಿಯತೆ ಎಂಬುದು ನಮ್ಮ ಹಿಂದೂ ಸಮಾಜಕ್ಕಂಟಿರುವ ಒಂದು ರೋಗ. ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಬಸವಣ್ಣ, ಸ್ವಾಮಿ ವಿವೇಕಾನಂದರು, ಅಂಬೇಡ್ಕರ್ ಆದಿಯಾಗಿ ಹಲವಾರು ಜನನಾಯಕರು ಹೋರಾಡಿ ತಮ್ಮ ಪ್ರಾಣವನ್ನು ಮೂಡಿಪಾಗಿಟ್ಟರೂ ಜಾತಿಯತೆ ಇನ್ನು ಜೀವಂತವಾಗಿದೆ. ಒಬ್ಬ ಭಗ್ನ ಪ್ರೇಮಿಯ ಬದುಕಲ್ಲಿ ಜಾತಿಯತೆ ಎಂಬ ಬಿರುಗಾಳಿ ಬಿಸಿದಾಗ ಅವನ ದುರಂತ ಬದುಕಿನ ನೈಜ ಅಂಶಗಳೇ ಅನಾಥ ಚಿತ್ರಕಥೆ...
ಇದು ಸತ್ಯಕಥೆ...
-ಅಣ್ಣಾ ಶೇಠ