ಯಾವುದೇ ಪ್ರಾಣಿಯ ಕಡಿತ ನಿರ್ಲಕ್ಷಿಸದೇ ಲಸಿಕೆ ಹಾಕಿಸಿಕೊಳ್ಳಿ

Sep 29, 2024 - 21:10
Sep 29, 2024 - 21:20
 0
ಯಾವುದೇ ಪ್ರಾಣಿಯ ಕಡಿತ ನಿರ್ಲಕ್ಷಿಸದೇ ಲಸಿಕೆ ಹಾಕಿಸಿಕೊಳ್ಳಿ

ಸಿಂದಗಿ : ದೇಶದಲ್ಲಿ ಪ್ರತಿ ವರ್ಷ ೨೦೦೦೦ ಸಾವಿರಕ್ಕೂ ಹೆಚ್ಚು ಜನ ಈ ರೇಬೀಸ್ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ನಾಯಿ ಸೇರಿದಂತೆ ಯಾವುದೇ ಪ್ರಾಣಿಯ ಕಡಿತವನ್ನು ನಿರ್ಲಕ್ಷಿಸದೇ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಾಲೂಕಾ ಪಶುವೈದ್ಯಾಧಿಕಾರಿ ಡಾ. ಮಾರುತಿ ತಡಲಗಿ ಹೇಳಿದರು.        

ಶನಿವಾರ ಪಟ್ಟಣದ ಆರ್.ಡಿ.ಪಾಟೀಲ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ತಾಲೂಕಾ ಆರೋಗ್ಯ ಇಲಾಖೆ, ಪಶುಪಾಲನಾ, ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಆರ್.ಡಿ.ಪಾಟೀಲ ಪದವಿ ಪೂರ್ವ ಕಾಲೇಜು ಇವುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ರೇಬೀಸ್ ನಿಯಂತ್ರಣ ಕಾರ್ಯಕ್ರಮ ಮತ್ತು ವಿಶ್ವ ರೇಬೀಸ್ ದಿನಾಚರಣೆಯನ್ನುದ್ದೇಶಿಸಿ ಅವರು ಮಾತನಾಡಿದರು.     

ಸೆಪ್ಟೆಂಬರ್ ೨೮ ಅನ್ನು ವಿಶ್ವ ರೇಬೀಸ್ ದಿನವೆಂದು ಆಚರಿಸಲಾಗುತ್ತದೆ. ರೇಬೀಸ್‌ಗೆ ಮೊದಲು ಲಸಿಕೆ ಕಂಡು ಹಿಡಿದ ಲೂಯಿಪಾಶ್ಚರ್ ಮರಣ ಹೊಂದಿದ ದಿನವನ್ನು ೨೦೦೭ ರಿಂದ ವಿಶ್ವ ರೇಬೀಸ್ ದಿನವೆಂದು ಆಚರಿಸಲಾಗುತ್ತದೆ. ವಿಶ್ವದಾದ್ಯಂತ ರೇಬೀಸ್ ಕುರಿತು ಜಾಗೃತಿ ಮೂಡಿಸುವುದೇ ಈ ದಿನಾಚರಣೆಯ ಮೂಲ ಆಶಯ. ರೇಬೀಸ್ ಅನ್ನುವುದು ಸಸ್ತನಿಗಳಲ್ಲಿ ವೈರಾಣುವಿನಿಂದ ಹರಡುವ ಕಾಯಿಲೆ ಶ್ವಾನಗಳಿಂದ ಕಡಿತ ಮತ್ತು ಲಾಲಾರಸದ ಸಂಪರ್ಕದಿಂದ ಮನುಷ್ಯನಿಗೆ ಹರಡುತ್ತದೆ. ನೇರವಾಗಿ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಮಿಧುಳಿಗೆ ಘಾಸಿಯಾಗಿ ಸಾವು ಸಂಭವಿಸುತ್ತವೆ. ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಇದು ಗುಣಪಡಿಸಬಹುದಾದ ಕಾಯಿಲೆ ಎನ್ನುವುದು ತಜ್ಞರ ಅಭಿಮತವಾಗಿದೆ ಎಂದರು.        

ರೇಬೀಸ್‌ನಿಂದ ಮಾನವ ಸಾವುಗಳನ್ನು ನಿರ್ಮೂಲನೆ ಮಾಡುವದು ಸಾಧಿಸಬಹುದಾದ ಗುರಿಯಾಗಿದೆ. ರೇಬೀಸ್ ಯಾವುದೆ ನಿರ್ಧಿಷ್ಟ ಚಿಕಿತ್ಸೆ ಇಲ್ಲದರಿರುವುದರಿಂದ ಅದನ್ನು ತಡೆಯಲು ಎಲ್ಲ ಪ್ರಯತ್ನಗಳು ಅಗತ್ಯ ಸಾಕು ನಾಯಿ ಮತ್ತು ಬೆಕ್ಕುಗಳಿಗೆ ನಿಯಮಿತವಾಗಿ ರೇಬೀಸ್ ನಿರೋಧಕ ಚುಚ್ಚುಮದ್ದನ್ನು ಕೊಡಿಸಬೇಕು ಅವುಗಳ ಆರೋಗ್ಯದ ಬಗ್ಗೆ ಪಶುವೈದ್ಯರಿಂದ ಸೂಕ್ತ ಸಲಹೆಗಳನ್ನು ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ಗ್ರಾಮೀಣ ಮಟ್ಟದಲ್ಲಿ ಈ ರೇಬೀಸ್ ಬಗ್ಗೆ ಜನಜಾಗೃತಿ ಮೂಡಿಸಬೇಕು.

-ಎಸ್.ಡಿ.ಕುಲಕರ್ಣಿ 
ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ 

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ, ಉಪ ಪ್ರಾಚಾರ್ಯ ಪಿ.ವ್ಹಿ. ಮಹಲಿನಮಠ, ತಾಲೂಕಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ವೈ.ಚೌಡಕಿ, ಆರೋಗ್ಯ ನಿರೀಕ್ಷಣಾಧಿಕಾರಿ ವಿರೇಂದ್ರ ಪವಾಡಿ ಮಾತನಾಡಿದರು.        

ಇದೇ ಸಂದರ್ಭದಲ್ಲಿ ಎನ್.ಬಿ.ಪೂಜಾರಿ, ಎಸ್.ಎಸ್. ತಾಳಿಕೋಟಿ, ಎಸ್.ಸಿ.ಜೋಗೂರ, ಶಿವಶರಣ ಬೂದಿಹಾಳ, ವ್ಹಿ.ಪಿ. ನಂದಿಕೋಲ, ಸಂಗಮೇಶ ಚಾವರ್, ಎನ್.ಎಂ.ಶೆಳ್ಳಗಿ, ರೋಹಿತ್ ಸುಲ್ಪಿ, ಚಂದ್ರು ಬಬಲೇಶ್ವರ್, ಎಸ್.ಜಿ.ಮಾರ್ಸನಳ್ಳಿ, ಎಸ್.ಎಚ್. ಜಾಧವ, ಬಿ.ಬಿ.ಜಮಾದಾರ,  ಎಸ್.ಎಸ್. ಹೂಗಾರ, ರಾಹುಲ ನಾರಾಯಣಕರ್, ರಾಹುಲ ಕುನ್ನಾಳ, ಸುನೀಲ ಪಾಟೀಲ,  ಪ್ರಸನ್ ಜೋಗೂರ, ಗವಿಸಿದ್ದಪ್ಪ ಆನೆಗುಂದಿ ಸೇರಿದಂತೆ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಇನ್ನಿತರರು ಇದ್ದರು. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.