ಜಿಓಸಿಸಿ ನಿರ್ದೇಶಕ ಹುದ್ದೆಗೆ ಆನಂದ ಕೆಂಬಾವಿ ಸ್ಪರ್ಧೆ

Jan 5, 2025 - 09:46
 0
ಜಿಓಸಿಸಿ ನಿರ್ದೇಶಕ ಹುದ್ದೆಗೆ ಆನಂದ ಕೆಂಬಾವಿ ಸ್ಪರ್ಧೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ವಿಜಯಪುರ: ವಿಜಯಪುರ ಹಾಗೂ ಬಾಗಲಕೋಟ ಅವಳಿ ಜಿಲ್ಲೆಯ ಸಹಕಾರಿ ನೌಕರರ ಸಹಕಾರಿ ಬ್ಯಾಂಕ್ 2025-30 ನೇ ಸಾಲಿನ ನಿರ್ದೇಶಕ ಹುದ್ದೆಗೆ ರವಿವಾರ ನಡೆಯುವ ನಿರ್ದೇಶಕ ಹುದ್ದೆಗೆ ಚುನಾವಣೆ ನಡೆಯಲ್ಲಿದ್ದು, ಯುವ ಶಿಕ್ಷಕ ಆನಂದ ಬಿ. ಕೆಂಬಾವಿ (ತೇಲಿ) ಸ್ಪರ್ಧೆ ಮಾಡಿದ್ದು ಸಮಸ್ತ ನೌಕರರ ಬಂಧುಗಳು ಮತ ನೀಡಿ ಆರಿಸಿ ತರಬೇಕೆಂದು ವಿನಂತಿಸಿದ್ದಾರೆ.

 

ಒಂದು ವರ್ಷದ ಹಿಂದೆ ನಾಲ್ಕು ತಿಂಗಳಿಂದ ಎಸ್ಎಸ್ಎ ಶಿಕ್ಷಕರ ಸಂಬಳ ಇಲ್ಲದಿದ್ದಾಗ ಅನುದಾನ ತರಲು ಬೆಂಗಳೂರವರೆಗೂ ಹೋಗಿ ಅಧಿಕಾರಿಗಳಿಗೆ ಭೇಟಿಯಾಗಿ ಅನುದಾನ ತಂದು ನೌಕರರಿಗೆ ಅನೂಕೂಲ ಮಾಡಿದ್ದಾರೆ.

 

ಶಿಕ್ಷಕರ ಸಂಘದಲ್ಲಿ ದೊಡ್ಡ ದೊಡ್ಡ ಹುದ್ದೆಯಲ್ಲಿರುವವರು ಯಾವದನ್ನೂ ಗಮನವಹಿಸಲಿಲ್ಲ. ಆದರೆ ಈ ಶಿಕ್ಷಕ ಎಸ್ಎಸ್ಎ ಶಿಕ್ಷಕರ ವೇತನ ವಿಳಂಬವಾದಾಗ ಬೆಂಗಳೂರಿನಲ್ಲಿ ಒಂದು ವಾರಗಳಲ್ಲಿ ಕಾಲ ಅಲ್ಲಿಯೇ ವಾಸ್ತವ್ಯ ಮಾಡಿ ಎಸ್ಎಸ್ಎ ಶಿಕ್ಷಕರ ಬಜೆಟ್ ಬಿಡುಗಡೆ ಮಾಡಿಕೊಂಡು ಬಂದಿರುವ ಹೆಮ್ಮೆ ಈ ನೌಕರನಿಗೆ ಇದೆ.

 

ಹೋರಾಟವೇ ನನ್ನ ಬದುಕು ನೌಕರರ ಸೇವೆಯೇ ನನ್ನ ಪರಮೊಚ್ಚ ಗುರಿ ಎಂಬ ಮಾತನ್ನು ನೆನಪಿನಲ್ಲಿಟ್ಟುಕೊಂಡು ಹಗಲಿರುಳು ನೌಕರರ ಸೇವೆ ಮಾಡುತ್ತಾ, ನೌಕರರ ಹಲವು ಸಮಸ್ಯೆಗಳು ಎದುರಾದಾಗ ಮುಂಚೂಣಿಯ ಸ್ಥಾನದಲ್ಲಿ ಇದ್ದು ಆ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕಾರ್ಯ ನಿರಂತರವಾಗಿ ಮಾಡುತ್ತಾ ಇದ್ದಾರೆ.

 

ಸಾಮಾನ್ಯ ಅಭ್ಯರ್ಥಿ ಸ್ಥಾನದಲ್ಲಿ ಕ್ರಮ ಸಂಖ್ಯೆ 03 ಆಗಿದ್ದು

ಉಂಗುರ ಚಿಹ್ನೆಯಾಗಿದೆ. ನಿಮ್ಮ ಮತ ಪ್ರಾಮಾಣಿಕರಿಗೆ ಮಾತ್ರ ಮಾಡಿ ಪ್ರಜಾಪ್ರಭುತ್ವ ಗೆಲ್ಲಿಸಿ ಎಂಬ ದಿಟ್ಟ ಹೋರಾಟದ ಹೆಜ್ಜೆ ಹಾಕುತ್ತಾ ಸಾಗುತ್ತಿದ್ದಾರೆ. ಸಿ ಮತ್ತು ಆರ್ ತಿದ್ದುಪಡಿಗೆ ಸರ್ಕಾರದ ಅಧಿಕಾರಿಗಳಿಗೆ, ಸಚಿವರಿಗೆ, ಶಾಸಕರಿಗೆ ಮನವಿ ಸಲ್ಲಿಸಿ ನೌಕರರ ಪರ ಹೋರಾಟ ಮಾಡಿದ್ದಾರೆ.

 

ಜಿಓಸಿಸಿ‌ ಬ್ಯಾಂಕನ ನಡೆಯುವ ಈ ಚುನಾವಣೆಯಲ್ಲಿ ಆನಂದ ಕೆಂಬಾವಿ ಅವರನ್ನು ಗೆಲ್ಲಿಸುವದರ ಮೂಲಕ ಪೆನಲ್ ನ ಒಂಬತ್ತು ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ವಿನಂತಿಸಿದ್ದಾರೆ.

 

ಸಾಮಾನ್ಯ ಕ್ಷೇತ್ರದಲ್ಲಿ ಅಮೋಘಸಿದ್ದ ರಾಯಪ್ಪ ಮಾಶ್ಯಾಳ, ಆನಂದ ಬಿ.ಕೆಂಬಾವಿ(ತೇಲಿ), ಬಸವರಾಜ ರಾಮಪ್ಪ ತೆರದಾಳ, ಪರಿಶಿಷ್ಟ ಜಾತಿ ವಿಭಾಗ ರಾಜಶೇಖರ ಬನಸೋಡೆ, ಪರಿಶಿಷ್ಟ ಪಂಗಡ ವಿಭಾಗದ ಹಣಮಂತ ಬೂದಿಹಾಳ, ಮಹಿಳಾ ಮೀಸಲು ಸ್ಥಾನದಲ್ಲಿ ಅಕ್ಕುಬಾಯಿ ಬಾಬು ನಾಯಕ, ದ್ರೌಪದಿ ಅಂಬಾಜಿ ಕಬಾಡೆ, ಹಿಂದುಳಿದ ವರ್ಗ ಅ ವಿಭಾಗದ ಚಿತ್ತರಗಿ ಹುಸೇನಸಾಬ ಮುಕ್ತುಮಸಾಬ, ಹಿಂದುಳಿದ ವರ್ಗ ಬ ವಿಭಾಗದ ಸುನೀಲಕುಮಾರ ಭೀಮರಾಯ ಬಿರಾದಾರ ಪಾಟೀಲ ಒಳಗೊಂಡ ಹೊಸ ಪೆನಲ್ ಬೆಂಬಲಿಸಬೇಕೆಂದು ಯುವ ನಾಯಕ ಆನಂದ ಕೆಂಬಾವಿ ವಿನಂತಿಸಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.