ತಾರಾಪೂರ ಸರಕಾರಿ ಶಾಲೆಗೆ ಕಾಣಿಕೆ ನೀಡಿದ ಗಣ್ಯರು

Jan 31, 2025 - 13:27
 0
ತಾರಾಪೂರ ಸರಕಾರಿ ಶಾಲೆಗೆ ಕಾಣಿಕೆ ನೀಡಿದ ಗಣ್ಯರು

ಆಲಮೇಲ: ತಾಲೂಕಿನ ತಾರಾಪೂರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಮುಖಂಡರು ಶಾಲೆಗೆ ಟ್ರೇಜರಿ, ಟೇಬಲ, ಡಯಾಸ, ಖಿರ್ಷಿ, ಕ್ರೀಡಾ ಸಾಮಗ್ರಿಗಳು ಸೇರಿದಂತೆ ೭೫ ಸಾವಿರ ರೂ ಶಾಲೆಗೆ ಬೇಕಾದ ವಿವಿದ ವಸ್ತುಗಳನ್ನು ಕಾಣಿಕೆ ನೀಡುವ ಮೂಲಕ ಗಣರಾಜ್ಯೋತ್ಸವದಂದು ನೀಡಿ ಸಂಭ್ರಮ ಹೆಚ್ಚಿಸಿದರು.
ಗ್ರಾಮಸ್ತರು ನೀಡಿದ ದೇಣಿಗೆಯಿಂದ ಸಂತೋಷ ವೆಕ್ತಪಡಿಸಿದ ಶಿಕ್ಷಕ ಸಿಬ್ಬಂದಿ ದಾನಿಗಳಿ ಸನ್ಮಾನಿಸಿ ಗೌರವಿಸಿದರು.

ಗ್ರಾಮದ ಡಾ| ಕುಮಾರಗೌಡ ಪಾಟೀಲ, ಡಾ| ದಾದಾಗೌಡ ಪಾಟೀಲ ಇಬ್ಬರು ೧೫ ಸಾವಿರ ರೂ. ಎರಡು ಟ್ರೇಜರಿ,  ಆನಂದ ಇಂಡಿ ೭ ಸಾವಿರ ರೂ. ಮುಖ್ಯ ಶಿಕ್ಷಕರ ಟೇಬಲ ಮತ್ತು ಮೇಜು, ಶಂಕರಗೌಡ ಪಾಟೀಲ ೮ ಸಾವಿರ ರೂ. ಡಯಾಸ, ಅಶೋಕ ಹಾಳಕಿ, ಸಂತೋಷ ಬಿರಾದಾರ ಇಬ್ಬರು ೮ ಸಾವಿರ ರೂ. ಕ್ರೀಡಾ ಸಾಮಗ್ರಿಗಳು, ರೇವಣಸಿದ್ದ ಬಿರಾದಾರ ೬ ಸಾವಿರ ರೂ. ೨೫ ನೆಲಹಾಸಿಗೆ ಚಾಪೆಗಳು, ರಮೇಶ ಕಿಣಗಿ ೬ ಸಾವಿರ ರೂ ಖುರ್ಚಿ, ಶರಣಬಸು ಮಾದರ ೪ ಸಾವಿರ ರೂ ಖುರ್ಚಿ, ಅಡಿವೆಪ್ಪ ಮಾದರ ೨ ಸಾವಿರ ರೂ ಖುರ್ಚಿ,  ರಾಜು ವಡ್ಡರ ೨ ಸಾವಿರ ರೂ. ಖುರ್ಚಿಗಳು ಕಾಣಿಕೆ ನೀಡಿದ ದಾನಿಗಳು.
ಮುಖ್ಯ ಶಿಕ್ಷಕ ಎಲ್.ಟಿ. ಗೊಂದಳಿ, ಎಸ್.ಆರ್. ಹಡಪದ, ಗಿರೀಶ ಹುವಿನಹಳ್ಳಿ ಇದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.