ನಿರ್ಮಲಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ಮೇಳ

Jan 31, 2025 - 13:24
Jan 31, 2025 - 15:35
 0
ನಿರ್ಮಲಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ಮೇಳ

ಆಲಮೇಲ: ವಿಜ್ಞಾನ ವಸ್ತುಪ್ರದರ್ಶನಗಳು ವಿದ್ಯಾರ್ಥಿಗಳ ಶೈಕ್ಷಣಿಕ ಪಯಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ವೈಜ್ಞಾನಿಕ ಪರಿಕಲ್ಪನೆಗಳ ಪ್ರಾಯೋಗಿಕ ಅಪ್ಲಿಕೇಶನ್ ಕಲಿಕೆ ಮತ್ತು ಪ್ರಾಯೋಗಿಕ ಅನ್ವಯಕ್ಕೆ ವೇದಿಕೆಯನ್ನು ಒದಗಿಸುತ್ತವೆ ಎಂದು ಮುಖ್ಯ ಶಿಕ್ಷಕಿ ಐರಿನ್ ಹೇಳಿದರು.

ಗುರುವಾರ ನಿರ್ಮಲಾಲಯ ಆಂಗ್ಲ ಮಾದ್ಯಮ ಶಾಲೆಯಲ್ಲಿ ಹಮ್ಮಿಕೊಂಡ ವಿಜ್ಞಾನ ಮೇಳದ ವಸ್ತು ಪ್ರದರ್ಶನಕ್ಕೆ ಚಾಲನೇ ನೀಡಿ ಮಾತನಾಡಿದರು.

ವಿಜ್ಞಾನ ಮೇಳ ಹಮ್ಮಿಕೊಳ್ಳುವದರಿಂದ ವಿದ್ಯಾರ್ಥಿಗಳನ್ನು ಉತ್ತೇಜಿಸುವದು ವಿಜ್ಞಾನ ಪ್ರದರ್ಶನಗಳ ಪ್ರಾಥಮಿಕ ಉದ್ದೇಶವಾಗಿದೆ. ಇದು ಪಠ್ಯಪುಸ್ತಕಗಳನ್ನು ಮೀರಿ ವಿಜಾನದ ಆಳವಾದ ತಿಳುವಳಿಗೆಯನ್ನು ಬೆಳೆಸುತ್ತದೆ ಎಂದು ಹೇಳಿದರು.

ಶಾಲೆಯಲ್ಲಿ ಹಮ್ಮಿಕೊಂಡಿದ ವಿಜ್ಞಾನ ಮೇಳದಲ್ಲಿ ಎಲ್‌ಕೆಜಿ ಯಿಂದ ೧೦ನೇ ತರಗತಿಯ ಮಕ್ಕಳು ಪಾಲ್ಗೊಂಡಿದ್ದು ಆಯಾ ತರಗತಿಗೆ ಅನುಗುಣವಾಗಿ ಅವರ ವಿಷಯಕ್ಕೆ ತಕ್ಕಂತೆ ವಸ್ತುಗಳನ್ನು ನಿರ್ಮಿಸಿ ಪ್ರದರ್ಶಿಸಿದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.