ಗಾಂಧೀಜಿ ಸರಳತೆಯ ಪ್ರತಿಬಿಂಬ : ಹೇಮಗಿರಿಮಠ

Oct 4, 2024 - 10:48
 0
ಗಾಂಧೀಜಿ ಸರಳತೆಯ ಪ್ರತಿಬಿಂಬ : ಹೇಮಗಿರಿಮಠ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ಆಲಮಟ್ಟಿ : ಮಹಾತ್ಮ ಗಾಂಧೀಜಿಯವರ ಜೀವನ ಭಾರತಾಂಬೆಯ ಮಡಿಲಿನಲ್ಲಿ ಒಂದು ರೋಚಕತೆಯಿಂದ ಸಾಗಿದೆ. ದೇಶದ ಸ್ವಾತಂತ್ರ್ಯಕಾಗಿ ಅವರು ಮೂಡಿಸಿದ ಹೆಜ್ಜೆ ಗುರುತುಗಳು ಅಪ್ರತಿಮವಾಗಿವೆ.ಆ ಸಮಯದಲ್ಲಿ ಪ್ರಚುರಪಡಿಸಿದ ಮೌಲ್ಯಾಧಾರಿತ ಸಂದೇಶಗಳು ಭಾರತೀಯರಿಗೆ ನವ್ಯಾಮೃತ ಕರುಣಿಸಿವೆ ಅಲ್ಲದೇ ಶಾಂತಿ,ನೆಮ್ಮದಿಯ ಸಂಜೀವಿನಿಯಾಗಿ ಕರಾಳತೆಯಿಂದ ನಿರಾಳತೆಯಡೆಗೆ ಅಸಂಖ್ಯಾತ ಜೀವಗಳನ್ನು ಕೊಂಡೊಯ್ದು ಸ್ವಾತಂತ್ರ್ಯದ ದಿವ್ಯಾನುಭೂತಿ ನೀಡಿವೆ ಎಂದು ಪ್ರಾಚಾರ್ಯ ಪ್ರಭುಸ್ವಾಮಿ ಹೇಮಗಿರಿಮಠ ಹೇಳಿದರು.
       ಇಲ್ಲಿನ ಮಂಜಪ್ಪ ಹಡೇ೯ಕರ ಸ್ಮಾರಕ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಗಾಂಧೀಜಿಯವರ ಸತ್ಯಾನ್ಷೇಷಣೆ ಆದರ್ಶಪ್ರಾಯ ಜೀವನ ಇಡೀ ಜಗವೇ ಕಂಡಿದ್ದು ಅವರ ಆತ್ಮಸಾಕ್ಷಿಯ ನಡೆ ನುಡಿಯ ಅಹಿಂಸಾತ್ಮಕ ಚಳುವಳಿ, ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯಲಭಿಸಿದೆ.ವಿಶ್ವ ಕಂಡ ಶ್ರೇಷ್ಠ ಸಂತರಾಗಿರುವ ಗಾಂಧೀಜಿ ಅಪ್ರತಿಮ ಸಹನೆಯುಳ್ಳ ಶಾಂಚಿಧೂತರಾಗಿದ್ದಾರೆ.ದೇಶದ ಸ್ವಾತಂತ್ರ್ಯಕ್ಕೆ ಮಹನೀಯರ ಕೊಡುಗೆ ಅಪಾರವಾಗಿದೆ.ಅವರುಗಳ ತ್ಯಾಗ, ಬಲಿದಾನ ಎಂದೆಂದಿಗೂ ಮರೆಯಲಾಗದು ಎಂದರು.
     ಸರಳ,ಸಜ್ಜನ ನಡುವಳಿಕೆಯ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀಜಿ ದೇಶದ ಪ್ರಗತಿಗೆ ಶ್ರಮಿಸಿದ ಮಹಾನ ನಾಯಕರು.ಗಾಂಧೀಜಿ, ಶಾಸ್ತ್ತೀಜಿಯವರ ತತ್ವ, ಸಿದ್ದಾಂತ ಮಾದರಿಯಾಗಿದ್ದು ನಮಗೆಲ್ಲ ದಾರಿದೀಪಗಳಾಗಿವೆ.ಇಂಥ ಮಹಾತ್ಮರ ತತ್ವಾದರ್ಶಗಳನ್ನು ಪಾಲಿಸಿ ಸಮಾಜ ಸೌಖ್ಯತೆಯಿಂದ ಇರುವಂತೆ ನೋಡಿಕೊಳ್ಳೋಣ.ಆ ದಿಸೆಯಲ್ಲಿ ಯುವಜನತೆ ಸತ್ಯ, ಅಹಿಂಸೆ ಮಾರ್ಗದಡಿಯಲ್ಲಿ ಪ್ರಾಮಾಣಿಕತೆಯಿಂದ ನಡೆದು ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಿ. ಸದಾ ಒಳಿತು ಭಾವ ಇರಿಸಿಕೊಂಡು ಜೀವನ ಸಂತೃಪ್ತ ಕಂಡುಕೊಳ್ಳಿ ಎಂದರು.
      ಗಾಂಧೀಜಿ, ಶಾಸ್ತ್ರೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಪೂಜಿಸಲಾಯಿತು. ಈ ವೇಳೆ ಉಪನ್ಯಾಸಕ ಎಚ್.ಎನ್.ಕೆಲೂರ, ಪಿ.ವೈ.ಧನಶೆಟ್ಟಿ, ಎಮ್.ಎಸ್.ಸಜ್ಜನ, ಟಿ.ಬಿ.ಕರದಾನಿ, ಉಪನ್ಯಾಸಕಿ ಮಮತಾ ಕರೆಮುರಗಿ, ಭೋಧಕೇತರ ಸಿಬ್ಬಂದಿ ಡಿ.ಟಿ.ಸಿಂಗಾರಿ, ತಿಮ್ಮಣ್ಞದಾಸರ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.