ರಾಷ್ಟ್ರ ಕಟ್ಟುವಂತಹ ಶಕ್ತಿ ಕ್ರೀಡೆಯಲ್ಲಿದೆ : ರಾಮನಗೌಡ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ತಾಳಿಕೋಟೆ : ಕ್ರೀಡಾ ಮನೋಭಾವ ಕ್ರೀಡೆಗಳು ಮತ್ತು ಸ್ಪರ್ದಾತ್ಮಕ ಚಟುವಟಿಕೆಗಳಲ್ಲಿನ ನಡುವಳಿಕೆಯನ್ನು ಮಾರ್ಗದರ್ಶನ ಮಾಡುವ ನೈತಿಕಕತೆಯ ತತ್ವಗಳನ್ನು ಸೂಚಿಸುತ್ತವೆ ಇದು ಹಲವಾರು ವರ್ತನೆಗಳು ಕ್ರೀಯೇಗಳನ್ನು ಒಳಗೊಂಡಿದೆ ಎಂದು ಸ್ಥಳೀಯ ಶ್ರೀ ಬಸವೇಶ್ವರ ಪ.ಪೂ.ಕಾಲೇಜಿನ ಅಧ್ಯಕ್ಷರಾದ ರಾಮನಗೌಡ ಬಾಗೇವಾಡಿ ಅವರು ನುಡಿದರು.
ಮಂಗಳವಾರರಂದು ವಿಜಯಪುರ ಪಧವಿಪೂರ್ವ ಶಿಕ್ಷಣ ಇಲಾಖೆ ಶ್ರೀ ಬಸವೇಶ್ವರ ಪಧವಿಪೂರ್ವ ಕಾಲೇಜ್ ತಾಳಿಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ಎಸ್.ಕೆ.ಪ.ಪೂ.ಕಾಲೇಜ್ ಕ್ರೀಡಾಂಗಣದಲ್ಲಿ ಏರ್ಪಡಿಸಲಾದ ಜಿಲ್ಲಾ ಮಟ್ಟದ ಪ.ಪೂ.ಕಾಲೇಜ್‌ಗಳ ಬಾಲಕರ ಮತ್ತು ಬಾಲಕೀಯರ ಕಬ್ಬಡ್ಡಿ ಕ್ರೀಡಾಕೂಟದ ಕ್ರೀಡಾ ದ್ವಜಾರೋಹಣವನ್ನು ನೇರವೇರಿಸಿ ಮಾತನಾಡುತ್ತಿದ್ದ ಅವರು ಇಂದಿನ ಕ್ರೀಡೆಯಲ್ಲಿ ಭಾಗವಹಿಸುವವರು ಕ್ರೀಡಾ ನಿಯಮಗಳಿಗೆ ಬದ್ದವಾಗಿರುವದು ಅಗತ್ಯವಾಗಿದೆ ಸೋಲು ಗೆಲವು ಎಂಬವುಗಳಲ್ಲಿ ಸೌಜನ್ಯವೆಂಬುದು ಅಗತ್ಯವಾಗಿದೆ ಕ್ರೀಡಾ ಸ್ಪೂರ್ತಿ ಎಂಬುದು ಕ್ರೀಡೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಅನುಭವ ಎಂಬುದನ್ನು ಹೆಚ್ಚಿಸುತ್ತದೆ ಅಲ್ಲದೇ ಸ್ಪರ್ದಾತ್ಮಕ, ಸಹಕಾರಾತ್ಮಕವಾಗಿ ಗೌರವಾನ್ವಿತ ವಾತಾವರಣ ಸೃಷ್ಠಿಸುವ ಕ್ರೀಡೆ ಎಂಬುದು ರಾಷ್ಟ್ರ ಕಟ್ಟುವಂತಹ ಶಕ್ತಿ ಹೊಂದಿದೆ ಎಂದು ಸಂಗೋಳಿ ರಾಯಣ್ಣನ ಸ್ಪೂರ್ತಿದಾಯಕ ಸಂಕ್ಷೀಪ್ತ ಕಥೆಯೊಂದನ್ನು ವಿವರಿಸಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿ ಕ್ರೀಡಾ ಜ್ಯೋತಿಯನ್ನು ಸ್ವಿಕರಿಸಿ ಬೆಳಗಿಸಿದ ಪ.ಪೂ.ಕಾಲೇಜ್ ಅಧ್ಯಕ್ಷರಾದ ಎಂ.ಆರ್.ಕತ್ತಿ ಅವರು ಮಾತನಾಡಿ ವಿಧ್ಯಾರ್ಥಿಗಳು ವಿಧ್ಯಾಭ್ಯಾಸಕ್ಕೆ ನೀಡುತ್ತಾ ಸಾಗಿಬಂದಂತಹ ಪ್ರಾದ್ಯಾನ್ಯತೆಯನ್ನು ಕ್ರೀಡೆಗೆ ನೀಡಬೇಕು ಕ್ರೀಡೆಯಿಂದ ದೇಶ ಸದೃಡಗೊಳ್ಳುತ್ತದೆ ಆರೋಗ್ಯವಂತತನದಿಂದ ಬಾಳಲು ಅನುಕೂಲ ಕಲ್ಪಿಸುತ್ತದೆ ಎಂದು ಯಾವುದೇ ಕ್ರೀಡೆಯಲ್ಲಿ ಸೋಲು ಗೆಲವು ಎಂಬುದು ಇದ್ದೇ ಇರುತ್ತದೆ ಕಾರಣ ಆಟಗಾರರು ನಿರ್ಣಾಯಕರು ನೀಡಿದಂತಹ ನಿರ್ಣಯದಂತೆ ಪಾಲನೆ ಮಾಡುವ ಕಾರ್ಯವಾಗಬೇಕು ತಾವೇಲ್ಲಾ ಕ್ರೀಡಾಪಟುಗಳು ಇಂತಹದ್ದನ್ನು ಪಾಲಿಸಿ ಕ್ರೀಡಾ ಮನೋಭಾವನೆಯನ್ನು ಹೆಚ್ಚಿಸಿಕೊಳ್ಳುತ್ತೀರೆಂದು ನಾನು ನಂಬಿದ್ದೇನೆಂದರು.
ಇನ್ನೋರ್ವ ದೈಹಿಕ ಉಪನ್ಯಾಸಕರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಸ್.ದುರ್ಗಿ ಅವರು ಮಾತನಾಡಿ ಈ ಪಂದ್ಯಾವಳಿಯನ್ನು ಸಪ್ಟಂಬರ್ ತಿಂಗಳಲ್ಲಿಯೇ ಮಾಡಬೇಕಿತ್ತು ಮಳೆಯ ಹೆಚ್ಚಾಗಿದ್ದರಿಂದ ಮುಂದೂಡಬೇಕಾಯಿತು ಬಸವೇಶ್ವರ ಪ.ಪೂ.ಕಾಲೇಜಿನ ಅಧ್ಯಕ್ಷರಾದ ರಾಮನಗೌಡರು ಅತ್ಯುತ್ತಮ ಕ್ರೀಡಾಪಟುಗಳು ಆಗಿದ್ದರಿಂದ ಅವರೂ ಕುಸ್ತಿ ತರಬೇತಿ ಪಡೆದಿದ್ದು ಕುಸ್ತಿ ಪಟುವು ಸಹೇತ ಆಗಿದ್ದಾರೆ ಈ ವಿಷಯ ನಮಗೆ ಹೆಮ್ಮೆ ತಂದಿದೆ ಎಂದು ಹೇಳಿದ ಅವರು ಈ ಕ್ರೀಡಾಕೂಟ ತಯಾರಿ ಕುರಿತು ಕಳೆದ ೩ ದಿನಗಳಿಂದ ತಯಾರಿ ನಡೆಸಿದ್ದು ನಮ್ಮ ಇಲಾಖೆಯ ಪರವಾಗಿ ಎಸ್.ಕೆ.ಕಾಲೇಜ್ ಪ್ರಾಚಾರ್ಯ ಕಿಶೋರಕುಮಾರ ಅವರಿಗೂ ಜೊತೆಗೆ ಹೆಚ್ಚಿನ ಕೆಲಸ ಮಾಡಿದ ಎಲ್ಲರಿಗೂ ಮತ್ತು ಬಿ.ಎಂ.ಪಾಟೀಲರಿಗೂ ದೈಹಿಕ ಉಪನ್ಯಾಸಕರು ಮತ್ತು ಆಟದ ಅಂಕಣವನ್ನು ರಚಿಸಿದ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆಂದ ಅವರು ಕ್ರೀಡಾ ತಂಡಗಳ ಸಂಬಂದಿತರಿಗೆ ಕೆಲವು ನ್ಯಾಯ ನಿರ್ಣಯ ನಿಬಂದನೆಗಳ ಕುರಿತು ತಿಳಿ ಹೇಳಿದರು.
ದೈಹಿಕ ಶಿಕ್ಷಕ ವಿಶ್ವನಾಥ ಪಾಟೀಲ ಅವರು ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಭೋದಿಸಿದರು.
ತಾಲೂಕಾ ಪ್ರೌಢ ಶಾಲೆಗಳ ಅಂಕಣಗಳನ್ನು ಸಂಘದ ವತಿಯಿಂದ ಉದ್ಘಾಟಿಸಲಾಯಿತು.
ವೇದಿಕೆಯ ಮೇಲೆ ಎಸ್.ಕೆ.ಪ.ಪೂ.ಕಾಲೇಜ್ ಪ್ರಾಚಾರ್ಯ ಕೆ.ಕಿಶೋರಕುಮಾರ, ಮುದ್ದೇಬಿಹಾಳ ಪ್ರಾಚಾರ್ಯ ಎಸ್.ಎಸ್.ಅಂಗಡಿ, ರಾಷ್ಟ್ರೀಯ ತಿರ್ಪೂಗಾರರ ಬಾಗಲಕೋಟ ಜಿಲ್ಲಾ ನಿರ್ಣಾಯಕರಾದ ಎಸ್.ಎಫ್.ಬಾರಡ್ಡಿ, ದೈಹಿಕ ಶಿಕ್ಷಣ ಸಂಘದ ಕಾರ್ಯದರ್ಶಿ ಎಂ.ಬಿ.ಹೂಗಾರ, ಎಂ.ಜಿ.ಎಂ.ಕೆ.ಮುದ್ದೇಬಿಹಾಳದ ಡಾ.ಎಸ್.ಕೆ.ಹರನಾಳ, ಸಾಸನೂರ ಶಾಲಾ ಪ್ರಾಚಾರ್ಯ ಎ.ಟಿ.ಹೇರಕಲ್ಲ, ಸಂಯೋಜಕ ಎಸ್.ಆರ್.ಮುತ್ತಗಿ, ದೈಹಿಕ ಶಿಕ್ಷಣ ಸಂಯೋಜಕ ಗಣೇಶ, ಪ್ರಾಚಾರ್ಯ ಜಗದೀಶ ಕಟ್ಟಿಮನಿ, ಡಾ.ಎ.ಬಿ.ಇರಾಜ, ವಾಯ್.ಓ.ಪನದಿ, ವಿಜಯರಡ್ಡಿ, ವ್ಹಿ.ವ್ಹಿ.ಎಸ್.ಕಾಲೇಜ್‌ನ ಪ್ರಾಚಾರ್ಯ ಶ್ರೀಮತಿ ಜ್ಯೋತಿ ಹಿರೇಮಠ, ದೈಹಿಕ ನಿರ್ದೇಶಕಿ ಶ್ರೀಮತಿ ಕೆ.ಎಸ್.ಅಂಗಡಿ, ಎಸ್.ಪಿ.ಸಾಂಗ್ಲಿ, ಎಸ್.ಎ.ತಂತರ, ನಾಟೀಕಾರ, ಡಾ.ಹಣಮಂತ ನಾಯಕ, ಉಪನ್ಯಾಸಕ ಡಿ.ಎಸ್.ಪಗಡದಿನ್ನಿ, ಮೊದಲಾದವರು ಉಪಸ್ಥಿತರಿದ್ದರು.
ಈ ಕ್ರೀಡಾಕೂಟದಲ್ಲಿ ಬ.ಬಾಗೇವಾಡಿಯ ೨ ತಂಡ, ಚಡಚಣ ೨ ತಂಡ, ನಿಡಗುಂದಿ, ಕೊಲಾರ, ತಾಳಿಕೋಟೆ, ವಿಜಯಪುರ, ಮುದ್ದೇಬಿಹಾಳ, ಆಲಮೇಲ, ಸಿಂಧಗಿ, ಬಬಲೇಶ್ವರ, ಕಾಲೇಜುಗಳ ತಲಾ ೨ ತಂಡಗಳು ಒಳಗೊಂಡು ಸುಮಾರು ೧೨ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಬಾಲಕೀರ ೮ ತಂಡದವರು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ವಿಧ್ಯಾರ್ಥಿನಿಯರಾದ ರೇಣುಕಾ, ಸುನಿತಾ ಪ್ರಾರ್ಥಿಸಿದರು. ಉಪನ್ಯಾಸಕಿ ಲಲೀತಾ ಗೌಡರ ಸ್ವಾಗತಿಸಿ ನಿರೂಪಿಸಿದರು. ಪ್ರಾಚಾರ್ಯರಾದ ಆಯ್.ಬಿ.ಶರಣರ ವಂದಿಸಿದರು.