ಪ್ರೋಫೈಲಿಂಗ್ ಮಾಡಲು ದಾಖಲೆ ಸಲ್ಲಿಸಲು ಸೂಚನೆ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಕಲಬುರಗಿ : ಕಲಬುರಗಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಒಳಚರಂಡಿ ಮತ್ತು ಸೆಫ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವ ಕೆಲಸಗಾರರ ಪ್ರೋಫೈಲಿಂಗ್ ಶಿಬಿರವನ್ನು ಆಯೋಜಿಸಿ ಪೂರ್ಣಗೊಳಿಸುವ ಹಂತದಲ್ಲಿದೆ. ಈ ಯೋಜನೆಯಡಿ ಮಹಾನಗರಪಾಲಿಕೆಯ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವ ಕೆಲಸಗಾರರನ್ನು (SSW) ಗುರುತಿಸಿ, ಪ್ರೋಫೈಲಿಂಗ್ (ಠಿಡಿoಜಿiಟiಟಿg) ಮಾಡಲು ಈ ಕೆಳಕಂಡ ದಾಖಲೆಗಳನ್ನು ಹಾಗೂ ಎಲ್ಲಾ ಮಾಹಿತಿಯೊಂದಿಗೆ ಖುದ್ದಾಗಿ ಇದೇ ಸೆಪ್ಟೆಂಬರ್ ೩೦ ರಂದು ಬೆಳಿಗ್ಗೆ ೧೦ ಗಂಟೆಗೆ ಕಲಬುರಗಿ ಮಹಾನಗರಪಾಲಿಕೆ ಕೇಂದ್ರ ಕಚೇರಿಯ ಕೊಠಡಿ ಸಂಖ್ಯೆ ೧೪ಕ್ಕೆ ಭೇಟಿ ನೀಡಬೇಕೆಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.